ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಪುಟದಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕದ ಕ್ಯಾಲೆಂಡರ್​​

By ರಾಯಚೂರು ಪ್ರತಿನಿಧಿ
|
Google Oneindia Kannada News

ಲಿಂಗಸುಗೂರು, ಜನವರಿ 05: ನೀವು ವರ್ಷದ ಕ್ಯಾಲೆಂಡರ್​​ ಮಾತ್ರ ನೋಡಿರ್ತಿರಿ. ಆದ್ರೆ ಇಲ್ಲೊಬ್ರು ಸಹಸ್ರ ವರ್ಷಗಳ ಕ್ಯಾಲೆಂಡರ್​ ರಚಿಸಿದ್ದಾರೆ. ಒಂದೇ ಪುಟದಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕದ ಕ್ಯಾಲೆಂಡರ್​​ ನೋಡಬಹುದು. ಹೊಸ ವರ್ಷದ ಸಂದರ್ಭದಲ್ಲಿ ವಿಭಿನ್ನವಾದ ಕ್ಯಾಲೆಂಡರ್​​​ವೊಂದನ್ನು ನೀವಿಲ್ಲಿ ನೋಡಬಹುದು.

ಎ4 ಅಳತೆಯ ಪುಟ.. ಆ ಪುಟದ ತುಂಬಾ ಅಂಕಿ-ಸಂಖ್ಯೆಗಳು.. ಒಂದೇ ಪುಟದಲ್ಲಿ ಅಡಗಿದೆ ಕ್ರಿಸ್ತಪೂರ್ವ, ಕ್ರಿಸ್ತಶಕ ಕ್ಯಾಲೆಂಡರ್​​.. ಇದು ಸಾಮಾನ್ಯ ಕ್ಯಾಲೆಂಡರ್ ಅಲ್ಲ.

Meet Shiva Krishnamurthy from Hatti creator of Infinite calendar

ಅನಂತಮಾನ ಕ್ಯಾಲೆಂಡರ್​. ಕೈಯಲ್ಲೊಂದು ನೋಟ್​ ಬುಕ್​, ಮೊಬೈಲ್​ ಹಿಡಿದು ನಿಂತಿರೋ ಇವ್ರು ಶಿವಕೃಷ್ಣಮೂರ್ತಿ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿ ಶಿವಕೃಷ್ಣಮೂರ್ತಿ ಅವರು ಸತತ ಪ್ರಯತ್ನದಿಂದ ವಿಶೇಷವಾದ ಕ್ಯಾಲೆಂಡರ್​ ವೊಂದನ್ನ ರಚಿಸಿದ್ದಾರೆ. ಒಂದೇ ಪುಟದಲ್ಲಿರೋ ಕ್ಯಾಲೆಂಡರ್​​ನಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕ ಕಾಲಘಟ್ಟವನ್ನ ನೋಡಬಹುದು.

Meet Shiva Krishnamurthy from Hatti creator of Infinite calendar

1956ರ 12 ತಿಂಗಳುಗಳ ಕ್ಯಾಲೆಂಡರ್​ ನೋಡಬೇಕಾದರೆ. 1956ರನ್ನು 28ರಿಂದ ಭಾಗಿಸಬೇಕು. 1956 % 28=69.85714286. ಭಾಗಶಃದ ಮೊತ್ತದಲ್ಲಿ ಮೊದಲ ಎರಡಂಕಿ ಅಂದ್ರೆ 69ನ್ನು ಕಳೆಯಬೇಕು. 69.85714286 - 69=0.85714286 ಬರುತ್ತದೆ. ಉಳಿದ ಮೊತ್ತವನ್ನು 28ರಿಂದ ಗುಣಿಸಬೇಕು. 0.85714286 X 28=24.00000008 ಬರುತ್ತದೆ.

Meet Shiva Krishnamurthy from Hatti creator of Infinite calendar

ಒಂದು ವೇಳೆ .99 ಬಂದರೆ 24ರ ಬದಲು 25 ಎಂದು ಪರಿಗಣಿಸಬೇಕು. ಗುಣಿಸಿದಾಗ ಬಂದ 24ರ ಸಂಖ್ಯೆಯನ್ನ ಕ್ಯಾಲೆಂಡರ್​​ ಪುಟದ ಬಲ ಭಾಗದಲ್ಲಿರುವ 12 ತಿಂಗಳುಗಳ ಕೋಡ್​​ನ್ನ ಎಡಭಾಗದಲ್ಲಿರೋ ಕೋಡ್​​ನಲ್ಲಿ ಗಮನಿಸಿದಾಗ ಆ ವರ್ಷದ ಎಲ್ಲಾ ತಿಂಗಳು ಅಥವಾ ಯಾವುದಾದರೂ ತಿಂಗಳ ಕ್ಯಾಲೆಂಡರ್​​ ಗೊತ್ತಾಗುತ್ತದೆ.
Meet Shiva Krishnamurthy from Hatti creator of Infinite calendar

ಇಷ್ಟು ದಿನ ವರ್ಷದ ಕ್ಯಾಲೆಂಡರ್​ ನೋಡುತ್ತಿದ್ದ ಜನರಿಗೆ ಒಂದೇ ಪುಟದಲ್ಲಿ ಸಹಸ್ರರಾರು ವರ್ಷಗಳ ಕ್ಯಾಲೆಂಡರ್​ ನೋಡುವಂತಾಗಿದೆ. ತುಂಬಾ ಕುತೂಹಲದಿಂದ ನೋಡುವ ಜನರು ಅನಂತಮಾನ ಎಂದು ಹೆಸರಿಟ್ಟಿರೋ ಕ್ಯಾಲೆಂಡರ್​ ಬಗ್ಗೆ ಖುಷಿ ಪಡುತ್ತಾರೆ.

ಕಂಪ್ಯೂಟರ್​ ಸೈನ್ಸ್​ ವ್ಯಾಸಂಗ ಮಾಡಿರೋ ಹಟ್ಟಿ ಗ್ರಾಮದ ಶಿವಕೃಷ್ಣಮೂರ್ತಿ, 3ನೇ ತರಗತಿಯಲ್ಲಿದ್ದಾಗಲೇ 1986ರ ವರ್ಷದ ಕ್ಯಾಲೆಂಡರ್​​​ ರಚಿಸಿದ್ದರಂತೆ.

Meet Shiva Krishnamurthy from Hatti creator of Infinite calendar

ಅಂದಿನಿಂದ ಅಂಕಿ-ಸಂಖ್ಯೆಗಳು ಇವರಿಗೆ ಬಿಡಿಸಲಾಗದ ನಂಟು ಬೆಳೆದಿದೆ. ಸದ್ಯ ರಚಿಸಿರೋ ಅನಂತಮಾನ ಕ್ಯಾಲೆಂಡರ್​ ವಿಶೇಷವಾಗಿ ಕಾಣಿಸುತ್ತಿದೆ.
English summary
Meet Shiva Krishnamurthy creator of Infinite calendar.Shiva Krishnamurthy hails from Hatti, Lingasugar, Raichur claims to have designed a calender dated from BC to AD
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X