• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಪ್ರತಾಪಗೌಡ ಪ್ರತಿಕ್ರಿಯೆ ಏನು?

|
Google Oneindia Kannada News

ರಾಯಚೂರು, ಮೇ 2: ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ತಮ್ಮ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗಿದೆ. ಏಪ್ರಿಲ್ 17ರಂದು ಮತದಾನವಾಗಿದ್ದು, ಮೇ 2ರಂದು ಫಲಿತಾಂಶ ಹೊರ ಬರುತ್ತಿದೆ.

ಈ ನಡುವೆ ಸದ್ಯದ ಟ್ರೆಂಡ್ ಪ್ರಕಾರ ಮಸ್ಕಿಯಲ್ಲಿ ಪ್ರತಾಪ ಗೌಡ ಅವರು ಮುಖಭಂಗ ಅನುಭವಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರು ಜಯಭೇರಿ ಬಾರಿಸುವ ಲಕ್ಷಣ ಕಂಡು ಬಂದಿದೆ.

Assembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

ತಮ್ಮ ಹಿನ್ನಡೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಗೌಡ, ''ಜನರು ಸೋಲಿಸಬೇಕು ಎಂಬ ಮನಸ್ಥಿತಿಯಲ್ಲಿದ್ದರೆ ಯಾರು ಬಂದು ಮತ ಪ್ರಚಾರ ಮಾಡಿದ್ರೂ ಏನು ಮಾಡೋಕೆ ಆಗಲ್ಲ, ನನಗೆ ವಿಶ್ವಾಸದ್ರೋಹವಾಗಿದೆ'' ಎಂದರು.

''ಕ್ಷೇತ್ರದ ಮತದಾರರು ಹೊಸಬರನ್ನು ಬಯಸಿ ಆಯ್ಕೆ ಮಾಡಿದ್ದಾರೆ. ನಾನು ಸೋಲಿನಿಂದ ಹಿಂದೆ ಸರಿಯುವುದಿಲ್ಲ. ಇನ್ನು ಎರಡು ವರ್ಷ ನಮ್ಮ ಸರ್ಕಾರ ಇರುತ್ತೆ. ನನ್ನಿಂದ ಕ್ಷೇತ್ರಕ್ಕೆ ಏನು ಸಹಾಯ, ಸಹಕಾರ ನೀಡಬೇಕೋ ನೀಡುತ್ತೇನೆ'' ಎಂದು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ತಿಳಿಸಿದರು.

Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?

ಮಸ್ಕಿಯಲ್ಲಿ ಸದ್ಯದ ವರದಿಯಂತೆ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಅವರು 10311ಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಿಲ್ಲ.

English summary
Maski By Election Result 2021: Losing BJP Candiate Prathap Gowda Patil Reaction to Defeat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X