• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಸ್ಕಿಯಲ್ಲಿ ಬಿಜೆಪಿ ಪರ ಮತಬೇಟೆಗೆ ಬರಲಿದ್ದಾರೆ ಮಂಗ್ಲಿ!

|
Google Oneindia Kannada News

ರಾಯಚೂರು, ಏಪ್ರಿಲ್ 12; ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಏಪ್ರಿಲ್ 17ರಂದು ನಡೆಯುವ ಉಪ ಚುನಾವಣೆಗೆ ಬಿರುಸಿನ ಪ್ರಚಾರವನ್ನು ಕೈಗೊಂಡಿವೆ.

ಏಪ್ರಿಲ್ 13ರಂದು ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರ ಮಾಡಲು ಗಾಯಕಿ ಮಂಗ್ಲಿ ಆಗಮಿಸುತ್ತಿದ್ದಾರೆ. ಈಗಾಗಲೇ ಹಲವು ಸಚಿವರು, ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಮಸ್ಕಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ? ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ?

ಮಸ್ಕಿಯಲ್ಲಿ ಕಾಂಗ್ರೆಸ್‌ನಿಂದ ಆರ್‌. ಬಸನಗೌಡ ತುರ್ವಿಹಾಳ, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅಭ್ಯರ್ಥಿಗಳು. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ.

ಮಸ್ಕಿ ಉಪ ಚುನಾವಣೆ; ಪ್ರಚಾರದ ಕಾವು ಹೆಚ್ಚಿಸಿದ ವಿಜಯೇಂದ್ರ ಮಸ್ಕಿ ಉಪ ಚುನಾವಣೆ; ಪ್ರಚಾರದ ಕಾವು ಹೆಚ್ಚಿಸಿದ ವಿಜಯೇಂದ್ರ

ನಟ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಆಡಿಯೋ ಬಿಡುಗಡೆ ಬಳಿಕ ಗಾಯಕಿ ಮಂಗ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. 'ರಾಬರ್ಟ್' ಚಿತ್ರದ ತೆಲಗು ಅವತರಿಣಿಕೆಯ 'ಕಣ್ಣೇ ಅದಿರಿಂದಿ' ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಸ್ಕಿ ಕ್ಷೇತ್ರದ ಉಪ ಚುನಾವಣೆ; ಕೆ. ವಿರೂಪಾಕ್ಷಪ್ಪ ಬಿಜೆಪಿಗೆ ಮಸ್ಕಿ ಕ್ಷೇತ್ರದ ಉಪ ಚುನಾವಣೆ; ಕೆ. ವಿರೂಪಾಕ್ಷಪ್ಪ ಬಿಜೆಪಿಗೆ

ಈ ಹಾಡಿನ ಜನಪ್ರಿಯತೆ ಮಂಗ್ಲಿ ಅವರಿಗೆ ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಈಗ ಮಂಗ್ಲಿ ಬಿಜೆಪಿ ಪರವಾಗಿ ಚುನಾವಣೆ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಉಪ ಚುನಾವಣೆಗೆ ಮಂಗ್ಲಿ ಅವರು ಸ್ಟಾರ್ ಪ್ರಚಾರಕಿ.

ಏಪ್ರಿಲ್ 17ರಂದು ಮಸ್ಕಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಸ್ಕಿಯಲ್ಲಿ ಮಂಗ್ಲಿ ಮೋಡಿ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.

   ಯುಗಾದಿ ಹಬ್ಬಕ್ಕೂ ಮಾದಪ್ಪನ ಭಕ್ತರಿಗೆ ಭಾರಿ ನಿರಾಸೆ-ಮೂರು ದಿನಗಳ ಕಾಲ ಬೆಟ್ಟಕ್ಕೆ ಭಕ್ತರಿಗೆ ನಿಷೇಧ! | Oneindia Kannada
   English summary
   Indian playback singer Mangli will come to Raichur district Maski for by election campaign. By election will be held on April 17, 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X