ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರಾಲಯ ಭಕ್ತರ ಗಮನಕ್ಕೆ: ದರ್ಶನ ದಿನಾಂಕ ಮತ್ತೆ ಮುಂದಕ್ಕೆ

|
Google Oneindia Kannada News

ರಾಯಚೂರು, ಜೂನ್ 15: ಲಾಕ್‌ಡೌನ್ ಸಡಿಲಿಕೆಯಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಹಲವು ದೇವಸ್ಥಾನಗಳು ಭಕ್ತರ ದರ್ಶನವನ್ನು ಪ್ರಾರಂಭ ಮಾಡಿವೆ. ಆದರೆ, ಮಂತ್ರಾಲಯ ರಾಯರ ದರ್ಶನದ ದಿನಾಂಕ ಮುಂದಕ್ಕೆ ಹೋಗಿದೆ.

Recommended Video

ಚೀನಾದಲ್ಲಿ ಕೊರೊನ ಕಾರಣ ಮತ್ತೊಮ್ಮೆ ಲಾಕ್‌ಡೌನ್ ಮೊರೆ | Oneindia Kannada

ಮಂತ್ರಾಲಯದಲ್ಲಿ ಭಕ್ತರ ದರ್ಶನಕ್ಕೆ ಇರುವ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ. ಇಂದಿನಿಂದ ರಾಯರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮಠದ ಆಡಳಿತ ಮಂಡಳಿ ಈ ಹಿಂದೆ ತಿಳಿಸಿತ್ತು. ಆದರೆ, ಈಗ ದರ್ಶನದ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಇಂದು ಮಂತ್ರಾಲಯಕ್ಕೆ ಬಂದ ಕೆಲವರು ಹೊರಗಡೆಯಿಂದ ಕೈ ಮುಗಿದು ವಾಪಸ್ ಹೋಗುತ್ತಿದ್ದಾರೆ.

ಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆ

ಕೊರೊನಾ ವೈರಸ್‌ ಸೋಂಕಿನ ಕಾರಣ ಮಂತ್ರಾಲಯದಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆದರೆ, ಅದರ ಸಿದ್ಧತಾ ಕಾರ್ಯ ಇನ್ನೂ ನಡೆಯುತ್ತಿದ್ದು, ಅವುಗಳು ಪೂರ್ಣವಾದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಠದ ನೂತನ ವ್ಯವಸ್ಥಾಪಕ ವೆಂಕಟೇಶ್ ಜೋಶಿ ಮಾಹಿತಿ ನೀಡಿದ್ದಾರೆ.

Mantralaya Temple Darshan Date Postponed

ಮಂತ್ರಾಲಯಕ್ಕೆ ಬೇರೆ ಜಿಲ್ಲೆಗಳಿಂದ ಬೇರೆ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಆದರೆ, ಪ್ರಾರಂಭದಲ್ಲಿ ಸ್ಥಳಿಯರಿಗೆ ಮಾತ್ರ ಅವಕಾಶ ನೀಡಲಾಗುವುದಂತೆ. ಬಳಿಕ ಎಲ್ಲ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.

ದರ್ಶನಕ್ಕೆ ಅವಕಾಶ ನೀಡುವ ದಿನಾಂಕವನ್ನು ಅನಿರ್ದಿಷ್ಟ ಅವಧಿಗೆ ಮುಂದುಡಿದ್ದು, ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

English summary
Raichur Mantralaya temple postponed darshan date. Temple administrators will announce a date soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X