ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ತಿಂಗಳ ಬಳಿಕ ಭಕ್ತರಿಗೆ ಬಾಗಿಲು ತೆರದ ಮಂತ್ರಾಲಯ ಮಠ

|
Google Oneindia Kannada News

ರಾಯಚೂರು, ಅಕ್ಟೋಬರ್ 02: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರವನ್ನು ತೆರೆದರು. ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಏನೇನಿದೆ?ರಾಜ್ಯ ಸರ್ಕಾರದ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಏನೇನಿದೆ?

ಮಠದ ಹೊರಗೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ಸಾಮಾನ್ಯ ದರ್ಶನವಾಗಿದೆ. ವಿಐಪಿಗಳ ದರ್ಶನಕ್ಕೆ ಇನ್ನೂ ಅವಕಾಶವನ್ನು ಕಲ್ಪಿಸಿಲ್ಲ. ಜುಲೈನಲ್ಲಿ ಮಠದ ಬಾಗಿಲು ತೆರೆಯಬಹುದು ಎಂದು ಅಂದಾಜಿಸಲಾಗಿತ್ತು. ಅದರೆ, ಅದನ್ನು ಮುಂದಕ್ಕೆ ಹಾಕಲಾಗಿತ್ತು.

ಕೆಲವು ನಿಬಂಧನೆಗಳೊಂದಿಗೆ ಹೊರನಾಡು ದೇವಾಲಯ ಓಪನ್ಕೆಲವು ನಿಬಂಧನೆಗಳೊಂದಿಗೆ ಹೊರನಾಡು ದೇವಾಲಯ ಓಪನ್

Mantralaya Raghavendra Swamy Mutt Open For Devotees

ಮಠದ ಬಾಗಿಲು ತೆರೆಯುವ ಹಿನ್ನಲೆಯಲ್ಲಿ ಮಠದ ಆವರಣವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ವಾದ್ಯ, ವೇದಘೋಷಗಳ ಸಮೇತ ಆಗಮಿಸಿದ ಪೀಠಾಧಿಪತಿಗಳು ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿದರು.

ರಾಯಚೂರು; ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ರಾಯಚೂರು; ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

Recommended Video

ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಮಠಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಯಿತು. ಸುಮಾರು ಆರು ತಿಂಗಳ ಬಳಿಕ ಈಗ ಮತ್ತೆ ದರ್ಶನವನ್ನು ಆರಂಭಿಸಲಾಗಿದೆ.

English summary
Sri Raghavendra swamy mutt in Mantralaya open for devotees from October 2. Mutt closed after the announcement of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X