• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂತ್ರಾಲಯದಲ್ಲಿ ಪ್ರತಿ ಬಾರಿಯಂತೆ ನಡೆಯುವುದೇ ಆರಾಧನೆ?

By ರಾಯಚೂರು ಪ್ರತಿನಿಧಿ
|

ರಾಯಚೂರು, ಜುಲೈ 16: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಜೃಂಭಣೆಯಿಂದ ನಡೆಯುವ ಆರಾಧನೆಗೆ ಪ್ರತಿ ಬಾರಿ ಲಕ್ಷಾಂತರ ಜನ ಸೇರುವುದು ವಾಡಿಕೆ. ಆದರೆ ಈ ಬಾರಿ ಆರಾಧನೆಗೆ ಕೊರೊನಾ ಅಡ್ಡಿಯಾಗಿದೆ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ಈ ಬಾರಿ ರಾಯರ 349ನೇ ಆರಾಧನೆಗೆ ಮಠದಲ್ಲಿ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 2ರಿಂದ ಆಗಸ್ಟ್‌ 8ರವರೆಗೆ ಸಪ್ತರಾತ್ರೋತ್ಸವ ನಡೆಯುವುದೆಂದು ಮಠದಿಂದ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದೆ. ಆದರೆ ನಿನ್ನೆಯಷ್ಟೇ ಮಠದ ಅರ್ಚಕರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಮತ್ತೆ ಆತಂಕ ತಂದಿದೆ. ಆರಾಧನೆಯು ಕೇವಲ ಮಠದ ಅರ್ಚಕರು, ಸ್ವಾಮೀಜಿಗಳು ಹಾಗೂ ಕೆಲವೇ ಜನರ ಸಮ್ಮುಖದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಕುರಿತು ಶ್ರೀಮಠದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

   ಮಂತ್ರಾಲಯ ರಾಯರ ದರ್ಶನ ಭಾಗ್ಯ ಸದ್ಯಕ್ಕಿಲ್ಲ

   ಆದರೆ ‌ಮಂತ್ರಾಲಯದ ನೆರೆಹೊರೆಯ ಗ್ರಾಮಗಳಲ್ಲಿ ಸೋಂಕು ಅಧಿಕವಾಗಿರುವುದರಿಂದ ಕರ್ನೂಲ್ ಜಿಲ್ಲಾಡಳಿತ ಈ ಬಾರಿ ಅದ್ಧೂರಿ ಆರಾಧನೆಗೆ ಅನುಮತಿ ನೀಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಜೊತೆಗೆ ಇದುವರೆಗೂ ಮಂತ್ರಾಲಯದಲ್ಲೇ ಒಟ್ಟು 6 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಬಾರಿ ರಾಯರ ಆರಾಧನೆಯನ್ನು ಕೆಲವೇ ಜನರ ಮಧ್ಯೆ ನಡೆಸುವ ಸಾಧ್ಯತೆ ಇದೆ.

   English summary
   Every year, millions of people gather for raghavendra swamy aradhane at Mantralaya. But this time, coronavirus has become problematic for this,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X