ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರಾಲಯ ರಾಯರ ದರ್ಶನ ಭಾಗ್ಯ ಸದ್ಯಕ್ಕಿಲ್ಲ

|
Google Oneindia Kannada News

ರಾಯಚೂರು, ಜುಲೈ 2: ಕೊರೊನಾ ಭೀತಿ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿರುವ ‌ಹಿನ್ನೆಲೆ, ಮಂತ್ರಾಲಯ ರಾಯರ ದರ್ಶನಕ್ಕೆ ಸದ್ಯ ಅವಕಾಶ ಸಿಗುವುದಿಲ್ಲ. ಮುಂಜಾಗ್ರತಾ ಕ್ರಮ‌ವಾಗಿ ರಾಯರ ಮಠದ ಬಾಗಿಲು ತೆರೆಯುವುದಿಲ್ಲ ಎಂದು ತಿಳಿಸಿದ್ದು, ದರ್ಶನದ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ.

ಈ ಹಿಂದೆ ಇಂದಿನಿಂದ (ಜುಲೈ 2) ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮಂತ್ರಾಲಯ ಮಠ ಆಡಳಿತ ಮಂಡಳಿ ತಿಳಿಸಿತ್ತು. ಆದರೆ, ಕೊರೊನಾ ಹೆಚ್ಚಾಗುತ್ತಿರುವ ‌ಹಿನ್ನೆಲೆಯಲ್ಲಿ ಜುಲೈ 2 ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಶ್ರೀಮಠದಿಂದ ನಿನ್ನೆ ಮತ್ತೊಂದು ಪ್ರಕಟಣೆ ಹೊರಡಿಸಿದೆ.

ಭಕ್ತರಿಗೆ ಸಿಗಂದೂರಿನಿಂದ ಬಂತು ಮತ್ತೊಂದು ಸಂದೇಶಭಕ್ತರಿಗೆ ಸಿಗಂದೂರಿನಿಂದ ಬಂತು ಮತ್ತೊಂದು ಸಂದೇಶ

ಮಠದಲ್ಲಿ ಆನ್‌ಲೈನ್‌ ಸೇವೆಗಳು ದೊರೆಯಲಿದ್ದು, ಭಕ್ತರು ಆನ್‌ಲೈನ್‌ ಪೂಜೆ‌ ಹಾಗು ಸೇವೆಗಳನ್ನು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

Mantralayam Has Extended Its Restriction on Devotees Entry To Temple

ಈ‌ ನಡುವೆ ಶ್ರೀರಾಘವೇಂದ್ರ ಸ್ವಾಮಿಗಳ 349 ನೆಯ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಆಗಸ್ಟ್ 4 ರಂದು ಪೂರ್ವಾರಾಧನೆ, ಅಗಸ್ಟ 5 ರಂದು ಮಧ್ಯಾರಾಧನೆ, ಅಗಸ್ಟ್ 6 ರಂದು ಉತ್ತರಾಧನೆಗೆ ತಯಾರಿ ಹಾಗು ರಥೋತ್ಸವ ನಡೆಯಲಿದೆ

ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೆಲವು ದೇವಲಯಗಳನ್ನು ತೆರೆಯಲಾಗಿತ್ತು. ಆದರೆ, ಮಂತ್ರಾಲಯದಲ್ಲಿ ಜುಲೈ 2 ರಿಂದ ದರ್ಶನಕ್ಕೆ ಅವಕಾಶ ಎಂದು ತಿಳಿಸಿದ್ದು, ಮತ್ತೆ ಮುಂದಕ್ಕೆ ಹೋಗಿದೆ. ರಾಯರ ದರ್ಶನಕ್ಕೆ ಅವಕಾಶ ಇಲ್ಲದ್ರಿಂದ ಕೋಟ್ಯಂತರ ಭಕ್ತಾದಿಗಳಲ್ಲಿ ನಿರಾಸೆ

English summary
Mantralaya Mutt has extended its restriction on entry of devotees to temple. Earlier, the mutt administration had announced that the Mantralaya Temple would be open from July 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X