ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನಲ್ಲಿ ಬಿರುಗಾಳಿ ಆಲಿಕಲ್ಲು ಮಳೆ, ನೆಲಕಚ್ಚಿದ ಮಾವು ತೋಟಗಳು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಮೇ 17: ಬಿರುಗಾಳಿ, ಗುಡುಗು ಸಹಿತ ಸೋಮವಾರ ಸಂಜೆ ಸುರಿದ ಆಲಿಕಲ್ಲಿನ ಮಳೆಯಿಂದ ರೈತರ ಮಾವು ತೋಟಗಳು ನೆಲಕೆಚ್ಚಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.

ರಾಯಚೂರು ತಾಲ್ಲೂಕಿನ ವಡ್ಲುರು, ಹನುಮನದೊಡ್ಡಿ , ದೇವಸೂಗೂರು , ಯದ್ಲಾಪುರ, ಶಕ್ತಿನಗರ, ಕೊರವಿಹಾಳ್, ಕೊರ್ತಕುಂದಾ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತಿ ಆಲಿಕಲ್ಲು ಮಳೆ ಸುರಿದಿದೆ. ಆ ಸೀಮಾಂತರದ ಪ್ರದೇಶದ ಜಮೀನುಗಳಲ್ಲಿ ಬೆಳೆದಿದ್ದ ಮಾವು ತೋಟಗಳು ಹಾಳಾಗಿರುವುದರಿಂದ ಸಾಲ ಮಾಡಿ ಬೆಳೆದಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು , ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

 ಶಾಲೆ ಆರಂಭ; ಎತ್ತಿನ ಬಂಡಿಯಲ್ಲಿ ಬಂದ ಮಕ್ಕಳು ಶಾಲೆ ಆರಂಭ; ಎತ್ತಿನ ಬಂಡಿಯಲ್ಲಿ ಬಂದ ಮಕ್ಕಳು

6 ಎಕೆರೆಯಲ್ಲಿ ಬೆಳೆದಿದ್ದ ಮಾವು ತೋಟ

ಮಳೆಗಿಂತ ಗಾಳಿ ಮತ್ತು ಆಲಿಕಲ್ಲುಗಳು ಆರ್ಭಟ ಹೆಚ್ಚಾಗಿತ್ತು. 6 ಎಕೆರೆಯಲ್ಲಿ ಬೆಳೆದಿದ್ದ ಮಾವು ತೋಟ ತೋಟ ನೆಲಕೆಚ್ಚಿದ್ದು 12 ಲಕ್ಷಾ ರೂಪಾಯಿ ನಷ್ಟವಾಗಿದೆ ಎಂದು ಕೊರವಿಹಾಳ್ ಗ್ರಾಮದ ರೈತ ರವೀಂದ್ರ ಅವರನ್ನು ಸಂಪರ್ಕಿಸಿದಾಗ ಹೇಳಿದರು.

Mango crop loss due to heavy rain in Raichur

ಸಿಡಿಲಿಗೆ ಎರಡು ಕುರಿ ಬಲಿ

ಆಲಿಕಲ್ಲು ಮಳೆಯಿಂದಾಗಿ ದೇವಸೂಗೂರು ಗ್ರಾಮದ ಜನತಾ ಕಾಲೊನಿಯಲ್ಲಿ ಎರಡು ಕುರಿಗಳು ಮೃತಪಟ್ಟಿವೆ. ಜಂಭಣ್ಣ ಪೂಜಾರಿ ಅವರ ಟಗರುಗಳು ಮೃತಪಟ್ಟಿದ್ದು ಅಂದಾಜು 40 ಸಾವಿರ ರೂಪಾಯಿ ನಷ್ಟ ಆಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸುರೇಶ್ ಮತ್ತು ಪಶು ವೈದ್ಯ ಡಾ.ಮಹಾದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

English summary
Mango growers who were expecting bumper crop this year has been in trouble as they have suffered crop loss due to unseasonal rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X