• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂತ್ರಾಲಯದಲ್ಲಿ ಸ್ಥಳೀಯ ಲಾಕ್ ಡೌನ್; ಭಕ್ತರಿಗೆ ಪ್ರವೇಶವಿಲ್ಲ

|
Google Oneindia Kannada News

ರಾಯಚೂರು, ಏಪ್ರಿಲ್ 30; ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವು ರಾಜ್ಯಗಳು ಲಾಕ್ ಡೌನ್ ಘೋಷಣೆ ಮಾಡಿವೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧವನ್ನು ಹೇರಿವೆ.

ಮಂತ್ರಾಲಯ ಮಠದಲ್ಲಿ ಭಕ್ತರ ಹಿತದೃಷ್ಟಿಯಿಂದ ಸ್ಥಳೀಯವಾದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಶುಕ್ರವಾರ ಶ್ರೀ ರಾಘವೇಂದ್ರಸ್ವಾಮಿ ಮಠದ ಆಡಳಿತ ಮಂಡಳಿ ಈ ಕುರಿತು ಪ್ರಕಟಣೆ ಹೊರಡಿಸಿದೆ.

ಕೋವಿಡ್ 19 ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ಜಪಾನ್ ಕೋವಿಡ್ 19 ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ಜಪಾನ್

ಮೇ 1ರ ಶನಿವಾರದಿಂದಲೇ ಸ್ಥಳೀಯ ಲಾಕ್ ಡೌನ್ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಭಕ್ತರಿಗೆ ಪ್ರತ್ಯಕ್ಷ ದರ್ಶನ, ತೀರ್ಥ, ಪ್ರಸಾದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮುಂದಿನ ಸೂಚನೆ ತನಕ ಭಕ್ತರು ಮಂತ್ರಾಲಯಕ್ಕೆ ಬರಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್? ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?

ಸ್ಥಳೀಯ ಲಾಕ್ ಡೌನ್ ಇದ್ದರೂ ಸಹ ಎಂದಿನಂತೆ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು, ಪಂಚಾಮೃತ, ರಥೋತ್ಸವಾದಿ ಸೇವೆಗಳು ನಡೆಯಲಿವೆ. ಭಕ್ತರು ಆನ್‌ಲೈನ್ ಮೂಲಕ ಈ ಸೇವೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕೋವಿಡ್ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ವತಿಯಿಂದ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಆರು ತಿಂಗಳ ಬಳಿಕ ಭಕ್ತರಿಗೆ ಬಾಗಿಲು ತೆರದ ಮಂತ್ರಾಲಯ ಮಠ ಆರು ತಿಂಗಳ ಬಳಿಕ ಭಕ್ತರಿಗೆ ಬಾಗಿಲು ತೆರದ ಮಂತ್ರಾಲಯ ಮಠ

   ಜನತಾ ಕರ್ಫ್ಯೂ ಜಾರಿಗೂ ಜನ ಡೋಂಟ್ ಕೇರ್-ಅನಾವಶ್ಯಕವಾಗಿ ಓಡಾಡ್ತಿದ್ದ ಬೈಕ್, ಆಟೋ ಸೀಜ್ | Oneindia Kannada

   ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಮಠಕ್ಕೆ ಭಕ್ತರು ಆಗಮಿಸುತ್ತಾರೆ. ಕೋವಿಡ್ ಸೋಂಕು ಹರಡುವಿಕೆ ತಡೆಯಲು ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

   English summary
   Due to COVID situation Sri Raghavendra Swamy mutt Mantralayam announced local lock down from May 1, 2021. Devotes entry banned till next order.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X