ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರ ಮೇಲೆ ರೇಗಾಡಿ ತಪ್ಪು ಮಾಡಿದೆ: ಕುಮಾರಸ್ವಾಮಿ

|
Google Oneindia Kannada News

Recommended Video

ಬಿಜೆಪಿ ಪ್ರಾಯೋಜಿತ ಗುಂಪಿನಿಂದ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ: ಎಚ್‌ಡಿಕೆ

ರಾಯಚೂರು, ಜೂನ್ 26: ಇಂದು ಬೆಳಿಗ್ಗೆ ತಾವು ಸಂಚರಿಸುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಿದ ಕಾರ್ಮಿಕರ ವಿರುದ್ಧ ಕೂಗಾಡಿದ ಕುಮಾರಸ್ವಾಮಿ, ಆ ನಂತರ, 'ಕೂಗಾಡಿ ತಪ್ಪು ಮಾಡಿದೆ' ಎಂದು ಪಶ್ಚಾತಾಪ ಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಕುಮಾರಸ್ವಾಮಿ ಅವರು ಕರೆಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ವೈಟಿಪಿಎಸ್‌ನ ಕಾರ್ಮಿಕರು ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಬಸ್‌ಗೆ ಅಡ್ಡ ಬಂದು ಪ್ರತಿಭಟನೆ ನಡೆಸಿದರು.

ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ

ಈ ಸಮಯ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ ಅವರು, ನರೇಂದ್ರ ಮೋದಿಗೆ ವೋಟು ಹಾಕಿ, ನನ್ನನ್ನು ಕೇಳಲು ಬಂದಿದ್ದೀರಾ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ಪೊಲೀಸರು ನಿಮ್ಮ ಮೇಲೆ ಲಾಠಿ ಚಾರ್ಜ್‌ ಮಾಡಬೇಕಾ? ಎಂದು ಸಹ ಪ್ರಶ್ನೆ ಮಾಡಿದರು.

I would not talked like that with protesters: CM Kumaraswamy

ಆದರೆ ಆ ನಂತರ ತಮ್ಮ ತಪ್ಪು ತಿದ್ದಿಕೊಂಡ ಸಿಎಂ ಕುಮಾರಸ್ವಾಮಿ ಅವರು, ಕಾರ್ಮಿಕರು ಪ್ರತಿಭಟನೆ ಮಾಡಿ ಡ್ರಾಮಾ ಮಾಡಿದರು, ಆಗ ನಾನು ಅವರ ಮೇಲೆ ಕೂಗಾಡಿ ತಪ್ಪು ಮಾಡಿದೆ, ಇನ್ನು ಮುಂದೆ ಹೀಗೆ ನಡೆದುಕೊಳ್ಳವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರು ರೇಗಾಡಿ ಆಡಿದ ಮಾತುಗಳಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಕುಮಾರಸ್ವಾಮಿ ಅವರ ಮಾತುಗಳನ್ನು ಟೀಕಿಸಿದ್ದಾರೆ.

English summary
CM Kumaraswamy said i would not talked like that with the protesters. i do not behave like that in future. In the morning Kumaraswamy rudely argued with protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X