ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಹೈದ್ರಾಬಾದ್ ಕರ್ನಾಟಕ ಬೆಂಬಲವಿಲ್ಲ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್ .01: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ನಾಳೆ ಉತ್ತರ ಕರ್ನಾಟಕ ಬಂದ್'ಗೆ ಹೈದ್ರಾಬಾದ್ ಕರ್ನಾಟಕ ಭಾಗದ ಜನ ಬೆಂಬಲಿಸದಿರಲು ನಿರ್ಧರಿಸಿದ್ದಾರೆ. ಇನ್ನು ಬೆಳಗಾವಿ ಎರಡನೆಯ ರಾಜಧಾನಿ ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯ ವಿರೋಧಿಸಿ ರಾಯಚೂರಿನ ತಹಶೀಲ್ದಾರ್ ಕಛೇರಿ ಮುಂದೆ ಧರಣಿ ಮಾಡಲು ನಿರ್ಧರಿಸಿದ್ದಾರೆ.

ಈ ಕುರಿತು ಹೈಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಮಾತನಾಡಿ, ಮುಖ್ಯಮಂತ್ರಿಗಳು ಮುಂಬೈ ಕರ್ನಾಟಕದವರೊಂದಿಗೆ ಸಭೆ ನಡೆಸಿದ್ದು, ಬೆಳಗಾವಿ ಎರಡನೆಯ ರಾಜಧಾನಿ ಮಾಡುವುದಕ್ಕೆ ವಿರೋಧವಿದೆ. ಹೈದ್ರಾಬಾದ್ ಕರ್ನಾಟಕದ ಯಾವುದಾದರೂ ಒಂದು ಜಿಲ್ಲಾ ಕೇಂದ್ರವನ್ನು ಎರಡನೆಯ ರಾಜಧಾನಿ ಮಾಡಬೇಕು‌ ಎಂದರು.

Hyderabad Karnataka is not supported to separate state for north karnataka

ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

ಅಲ್ಲದೇ 371 ಜೆ ಕಲಂ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆ ಹೈ ಕ ಭಾಗದ 6 ಜಿಲ್ಲೆಗಳಲ್ಲಿ ಧರಣಿ ನಡೆಸಲು ನಿರ್ಧಾರ ಮಾಡಲಾಗಿದೆ. ಧರಣಿಯಲ್ಲಿ ಜನಪರ, ಪ್ರಗತಿಪರ, ಕನ್ನಡಪರ ಮತ್ತು ವಿವಿಧ ಸಂಘಟನೆಗಳು ಬೆಂಬಲಿಸಲಿವೆ ಎಂದರು.

English summary
Fighter Dr. Razak Ustad Said Hyderabad Karnataka is not supported to separate state for north karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X