ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ ಎಂದು ರೇವಣ್ಣ ಹೇಳಿದ್ದು ಯಾರಿಗೆ?

|
Google Oneindia Kannada News

ರಾಯಚೂರು, ಫೆಬ್ರವರಿ 14: ಸಚಿವ ಆನಂದ್‌ಸಿಂಗ್‌ಗೆ ಅರಣ್ಯ ಇಲಾಖೆ ನೀಡಿದ್ದು, ಕಳ್ಳನ ಕೈಯಲ್ಲಿ ಕೀಲಿಕೈ ನೀಡಿದಂತಾಗಿದೆ ಎಂದು ಮಾಜಿ ಸಚಿವ ಎಚ್‌ಎಂ ರೇವಣ್ಣ ವ್ಯಂಗ್ಯವಾಡಿದ್ದಾರೆ.

ಆನಂದ್‌ಸಿಂಗ್‌ಗೆ ಅರಣ್ಯ ಖಾತೆಯೇ ಮುಂದುವರೆದರೆ ಗಣಿ ವ್ಯವಹಾರದಲ್ಲಿ ಅರಣ್ಯವನ್ನು ಸಂಪೂರ್ಣವಾಗಿ ನಾಶಗೊಳಿಸುವುದರಲ್ಲಿ ಸಂಶಯವಿಲ್ಲವೆಂದರು.

ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು: ಸಿದ್ದರಾಮಯ್ಯಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು: ಸಿದ್ದರಾಮಯ್ಯ

ಮೈತ್ರಿ ಸರ್ಕಾರ ರೂಪಿಸಿದ್ದ ಯೋಜನೆಗಳನ್ನು ಯಡಿಯೂರಪ್ಪ ಒಂದೊಂದಾಗಿ ರದ್ದು ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದ್ದಾರೆ.

HM Revanna Shows Anger Over Anand Singh

ವಿಧಾನಸಭಾ ಪ್ರತಿಪಕ್ಷ ಸ್ಥಾನಕ್ಕೆ ಬೇಗ ಅಧ್ಯಕ್ಷರ ನೇಮಕವಾಗಬೇಕು. ಸಿದ್ದರಾಮಯ್ಯನವರೇ ಅಧ್ಯಕ್ಷರಾಗಬೇಕೆ? ಅಥವಾ ಇನ್ಯಾರಾದರೂ ಆಗಬೇಕಾ? ಎಂಬುದರ ಕುರಿತು ಹಿರಿಯರ ಅಭಿಪ್ರಾಯ ಪಡೆದಿದ್ದಾರೆ. ಇನ್ನೊಂದು ವಾರದಲ್ಲಿ ನೇಮಕವಾಗಲಿದೆ ಎಂದರು.

ಶೋಷಿತ ಸಮಾಜದಲ್ಲಿ ಮಠ ಮಾಡಿದ್ದೇವೆ. ನಾಯಕ, ಕುರುಬ ಸಮಾಜ ವಿರುದ್ಧ ದಿಕ್ಕಿನಲ್ಲಿ ಹೋಗುವ ಪರಿಪಾಠ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯದ ವಿರುದ್ಧ ವಿರುದ್ಧ ಪೋಸ್ಟ್​ ಹಾಕುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

ಎಸ್ಟಿಗೆ ಇರುವ ಮೀಸಲಾತಿಯನ್ನು ಶೇ. 3ರಷ್ಟು ಹೆಚ್ಚಿಸಬೇಕಾಗಿದೆ. ಕುರುಬ, ವಾಲ್ಮೀಕಿ ಹಾಗೂ ಮಾಲೇರ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತು ಹಿಂದೆಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಕೂಡ ಸಮಾಜದಲ್ಲಿ ನೆಮ್ಮದಿಯಾಗಿರಲಿ ಎಂಬ ಆಶಯ ನಮ್ಮದು.

English summary
Former Minister, Congress Leader HM Revanna Hits Out At Minister Anand singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X