ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ರೈತನ ಮೇಲೆ ಭಾರವಾದ ಕಲ್ಲು ಹರಿದರೂ ಅದೃಷ್ಟವಶಾತ್ ಪಾರು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜುಲೈ.01: ವ್ಯಕಿಯೋರ್ವನ ಮೇಲೆ ಒಂದು ಟನ್‌ ಭಾರವಾದ ಕಲ್ಲು ಹರಿದರೂ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಎತ್ತುಗಳ ನೇಗಿಲ ಮುಂದೆ ಓಡುತ್ತಿದ್ದ ಹುಲಿಗೆಪ್ಪ ಎಂಬ ರೈತ ಕಾಲು ಜಾರಿ ಬಿದ್ದಿದ್ದಾನೆ.

ಮರಿಯನ್ನು ರಕ್ಷಿಸಲು ಜೀವವನ್ನೂ ಲೆಕ್ಕಿಸಲಿಲ್ಲ ಈ ಕೋತಿ: ವೈರಲ್ ವಿಡಿಯೋಮರಿಯನ್ನು ರಕ್ಷಿಸಲು ಜೀವವನ್ನೂ ಲೆಕ್ಕಿಸಲಿಲ್ಲ ಈ ಕೋತಿ: ವೈರಲ್ ವಿಡಿಯೋ

ಆಗ ಎತ್ತುಗಳು ಎಳೆಯುತ್ತಿದ್ದ ಭಾರವಾದ 1 ಟನ್ ತೂಕದ ಕಲ್ಲು ರೈತನ ಮೈ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಲ್ಲಿನ ಕೆಳಗಾದ ರೈತನನ್ನು ತಕ್ಷಣವೇ ನೆರೆದಿದ್ದ ಗ್ರಾಮಸ್ಥರು ರಕ್ಷಿಸಿ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

Heavy stone falling on person video viral on social media

ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಇಡೀ ಘಟನೆಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಮೈ ಜುಮ್ ಎನಿಸುತ್ತದೆ.

ಜಿಲ್ಲೆಯ ಎಪಿಎಂಸಿ ರಾಜೇಂದ್ರ ಗಂಜ್ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭವಾಗಿದ್ದು, ಎತ್ತುಗಳಿಗಾಗಿ ಏರ್ಪಡಿಸಿರುವ ಭಾರದ ಕಲ್ಲು ಎಳೆಯುವ ಸ್ಪರ್ಧೆ ಭರ್ಜರಿಯಾಗಿ ನಡೆಯುತಿದೆ.

ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ವೆಂಕಟರಾವ್ ನಾಡಗೌಡ ಹಬ್ಬಕ್ಕೆ ಚಾಲನೆ ನೀಡಿದ್ದರು.

English summary
Heavy stone falling on farmer video viral on social media. Incident took place in Raichur district of jalibenchi village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X