ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನ ಮಸ್ಕಿಯಲ್ಲಿ ಮಳೆ, ಬಿರುಗಾಳಿ ರೌದ್ರಾವತಾರ; ನೆಲಕ್ಕುರುಳಿದ ಮರ, ಕಂಬ, ಮನೆಗಳು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜೂ. 6: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದೆ. ಮಸ್ಕಿ ತಾಲ್ಲೂಕಿನಲ್ಲಿ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಂಕುಶದೊಡ್ಡಿ ಗ್ರಾಮದ ಬಳಿ ಲಿಂಗಸುಗೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಮರವೊಂದು ರಾತ್ರಿ ಉರುಳಿದ್ದರಿಂದ ವಾಹನಗಳ‌ ಸಂಚಾರ ಎರಡು ತಾಸು ‌ಸ್ಥಗಿತಗೊಂಡಿತ್ತು.

ಮಾರಲದಿನ್ನಿ ರಸ್ತೆಯ ಕಾಟಗಲ್ ಬಳಿ ಮರ ಉರುಳಿ ಬಿದ್ದ ಕಾರಣ ಈ ಮಾರ್ಗದ ರಸ್ತೆ ಬಂದ್ ಆಗಿತ್ತು. ಲಿಂಗಸುಗೂರು ರಸ್ತೆಯ ಮುದಬಾಳ ಕ್ರಾಸ್ ಬಳಿ ಇದ್ದ ಹಲವಾರು ಅಂಗಡಿಗಳ ತಗಡುಗಳು ಗಾಳಿಗೆ ಹಾರಿ ಹೋಗಿವೆ.

ರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರುರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು

ಹಿರಿಯೂರಿನಲ್ಲಿ ಮನೆಗೆ ನುಗ್ಗಿದ ನೀರು

ಹಿರಿಯೂರಿನಲ್ಲಿ ಮನೆಗೆ ನುಗ್ಗಿದ ನೀರು

ಮಸ್ಕಿ ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಇದರಿಂದ ಇಡೀ ರಾತ್ರಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.‌ ಜೆಸ್ಕಾಂ ಸಿಬ್ಬಂದಿ ರಾತ್ರಿಯಿಡಿ ಕೆಲಸ ಮಾಡಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದರು. ಬೀಸಿದ ಮಳೆ ಗಾಳಿಗೆ ಪರಿಣಾಮ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ವಾರ್ಡ್ ನಂಬರ್ 07ರಲ್ಲಿ ವಾಸಿಸುವ ಅಲೆಮಾರಿ ಬಡ ಕುಟುಂಬಗಳ ಮನೆಯ ಮೇಲ್ಚಾವಣೆಯ ಗಾಳಿ ಬೀಸಿದ ಪರಿಣಾಮವಾಗಿ ಟಿನ್ ಗಳು ಗಾಳಿಗೆ ಹಾರಿ ಹೋಗಿದ್ದು ಮೇಲ್ಚಾವಣಿ ಚಾವಣಿ ಮೇಲೆ ಬೀಳುವ ಕಲ್ಲುಗಳಿಂದ ಕೂದಲು ಎಳೆ ಅಂತರದಲ್ಲಿ ಹನ್ನೊಂದು ವರ್ಷದ ವಿದ್ಯಾರ್ಥಿನಿಯು ಸಾವಿನಿಂದ ಪಾರಾಗಿದ್ದಾಳೆ ಆದರೆ ಆ ವಿದ್ಯಾರ್ಥಿನಿಗೆ ಕಲ್ಲು ಬೀಳುವ ಪರಿಣಾಮದಿಂದ ಬಲಗಾಲನ್ನು ಕಾಲು ಮುರಿದ ಪರಿಣಾಮ ವಿದ್ಯಾರ್ಥಿನಿಯನ್ನು ನಿನ್ನೆ ತಡರಾತ್ರಿಯಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .

ರಾಯಚೂರಿನಲ್ಲಿ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿರಾಯಚೂರಿನಲ್ಲಿ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ

ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ

ರಾಯಚೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 20ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.

ಕಾಡ್ಲೂರು ಗ್ರಾಮದಲ್ಲಿ ಜಿಂದಾವಲಿ, ಬಸಮ್ಮ , ಮೋದಿನ್ ಸಾಬ್ ಚೌದ್ರಿ , 20 ಮನೆಗಳ ಮೇಲ್ಛಾವಣಿ ಹಾರಿಕೊಂಡು ಹೋಗಿವೆ. ಅಲ್ಲಲ್ಲಿ ಮರಗಿಡಗಳು, ವಿದ್ಯುತ್ ಕಂಬಗಳು ಬಿದ್ದಿವೆ. ರಸ್ತೆಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಸುರಿದ ಗಾಳಿ ಸಹಿತ ಮಳೆಗೆ ದವಸ ದಾನ್ಯಗಳು ಹಾಳಾಗಿವೆ. ಸೇರಿದಂತೆ ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ದೇವಸೂಗರು, ಶಕ್ತಿನಗರ, ಯದ್ಲಾಪುರ,ಗುರ್ಜಾಪುರ, ಕಾಡ್ಲೂರು ಸೇರಿದಂತೆ ಎಲ್ಲೆಡೆ ಮಳೆ ಆಗಿರುವ ವರದಿ ಆಗಿದೆ.

ಲಕ್ಷಾಂತರ ರೂಪಾಯಿ ನಷ್ಟ

ಲಕ್ಷಾಂತರ ರೂಪಾಯಿ ನಷ್ಟ

ಕಳೆದ ದಿನಗಳಲ್ಲಿ ಸುರಿದ ಆಲಿಕಲ್ಲಿನ ಮಳೆಯಿಂದ ರೈತರ ಮಾವು ತೋಟಗಳು ನೆಲಕೆಚ್ಚಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.

ರಾಯಚೂರು ತಾಲ್ಲೂಕಿನ ವಡ್ಲುರು, ಹನುಮನದೊಡ್ಡಿ , ದೇವಸೂಗೂರು , ಯದ್ಲಾಪುರ, ಶಕ್ತಿನಗರ, ಕೊರವಿಹಾಳ್, ಕೊರ್ತಕುಂದಾ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತಿ ಆಲಿಕಲ್ಲು ಮಳೆ ಸುರಿದಿದೆ. ಆ ಸೀಮಾಂತರದ ಪ್ರದೇಶದ ಜಮೀನುಗಳಲ್ಲಿ ಬೆಳೆದಿದ್ದ ಮಾವು ತೋಟಗಳು ಹಾಳಾಗಿರುವುದರಿಂದ ಸಾಲ ಮಾಡಿ ಬೆಳೆದಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು , ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

 ಗ್ರಾಮಲೆಕ್ಕಾಧಿಕಾರಿ ಭೇಟಿ

ಗ್ರಾಮಲೆಕ್ಕಾಧಿಕಾರಿ ಭೇಟಿ

ಮಳೆಗಿಂತ ಗಾಳಿ ಮತ್ತು ಆಲಿಕಲ್ಲುಗಳು ಆರ್ಭಟ ಹೆಚ್ಚಾಗಿತ್ತು. 6 ಎಕೆರೆಯಲ್ಲಿ ಬೆಳೆದಿದ್ದ ಮಾವು ತೋಟ ತೋಟ ನೆಲಕೆಚ್ಚಿದ್ದು 12 ಲಕ್ಷಾ ರೂಪಾಯಿ ನಷ್ಟವಾಗಿದೆ ಎಂದು ಕೊರವಿಹಾಳ್ ಗ್ರಾಮದ ರೈತ ರವೀಂದ್ರ ಅವರನ್ನು ಸಂಪರ್ಕಿಸಿದಾಗ ಹೇಳಿದರು. ಆಲಿಕಲ್ಲು ಮಳೆಯಿಂದಾಗಿ ದೇವಸೂಗೂರು ಗ್ರಾಮದ ಜನತಾ ಕಾಲೊನಿಯಲ್ಲಿ ಎರಡು ಕುರಿಗಳು ಮೃತಪಟ್ಟಿವೆ. ಜಂಭಣ್ಣ ಪೂಜಾರಿ ಅವರ ಟಗರುಗಳು ಮೃತಪಟ್ಟಿದ್ದು ಅಂದಾಜು 40 ಸಾವಿರ ರೂಪಾಯಿ ನಷ್ಟ ಆಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸುರೇಶ್ ಮತ್ತು ಪಶು ವೈದ್ಯ ಡಾ.ಮಹಾದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

(ಒನ್ಇಂಡಿಯಾ ಸುದ್ದಿ)

English summary
Heavy rainfall and wind caused havoc in Maski taluk of Raichur. Several trees and electricity poles were felled to ground. Houses were damaged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X