• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಚಾಯಿತಿ ಚುನಾವಣೆ; ಅಭ್ಯರ್ಥಿ ಚಿನ್ಹೆ ಬದಲು, ಮತದಾನ ಸ್ಥಗಿತ

|

ರಾಯಚೂರು, ಡಿಸೆಂಬರ್ 22: ರಾಯಚೂರು ಜಿಲ್ಲೆಯ ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಚಿನ್ಹೆ ಮತಪತ್ರದಲ್ಲಿ ತಪ್ಪಾಗಿ ಮುದ್ರಣವಾಗಿದೆ. ಮತಪತ್ರದಲ್ಲಿನ ದೋಷದ ಕಾರಣ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ಗಣದಿನ್ನಿ ಗ್ರಾಮ ಪಂಚಾಯಿತಿ ವಾರ್ಡ್‌ ಸಂಖ್ಯೆ 2 ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಿದ್ದಮ್ಮ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮಡಿಕೆ ಚಿನ್ಹೆಯನ್ನು ನೀಡಲಾಗಿತ್ತು. ಆದರೆ, ಮತಪತ್ರದಲ್ಲಿ ಆಟೋ ಮುದ್ರಣವಾಗಿದೆ.

Gram Panchayat Polls 2020 Voting Live: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಆರಂಭ Gram Panchayat Polls 2020 Voting Live: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಆರಂಭ

ದೇವಮ್ಮ ಎಂಬ ಅಭ್ಯರ್ಥಿ ಟ್ರ್ಯಾಕ್ಟರ್ ಚಿನ್ಹೆ ಪಡೆದಿದ್ದರು. ಆದರೆ, ಮತಪತ್ರದಲ್ಲಿ ಸಿಲಿಂಡರ್ ಚಿನ್ಹೆ ಅವರ ಹೆಸರಿನ ಮುಂದೆ ಇದೆ. ಮತದಾನ ಆರಂಭದಾ ಕೆಲವೇ ಹೊತ್ತಿನಲ್ಲಿ ಮತಪತ್ರದಲ್ಲಿನ ದೋಷ ಪತ್ತೆಯಾಗಿದೆ.

ಗ್ರಾಮ‌ ಪಂಚಾಯಿತಿ ಚುನಾವಣೆ: 80 ಸಾವಿರ ಪೊಲೀಸರ ನಿಯೋಜನೆ ಗ್ರಾಮ‌ ಪಂಚಾಯಿತಿ ಚುನಾವಣೆ: 80 ಸಾವಿರ ಪೊಲೀಸರ ನಿಯೋಜನೆ

ಮತಗಟ್ಟೆಯಲ್ಲಿನ ಮತದಾನವನ್ನು ಚುನಾವಣಾಧಿಕಾರಿಗಳು ಸ್ಥಗಿತಗೊಳಿಸಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮತಗಟ್ಟೆ ಸಿಬ್ಬಂದಿ ಹೇಳಿದ್ದಾರೆ.

ಗ್ರಾ. ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕಿದರೆ ಎಫ್‌ಐಆರ್ ಗ್ರಾ. ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕಿದರೆ ಎಫ್‌ಐಆರ್

ಒಂದು ವೇಳೆ ಮತಪತ್ರದಲ್ಲಿನ ತಪ್ಪನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಡಿಸೆಂಬರ್ 29ರಂದು ಗ್ರಾಮದಲ್ಲಿ ಮರು ಚುನಾವಣೆ ನಡೆಸುವ ಸಾಧ್ಯತೆ ಇದೆ.

ಕರ್ನಾಟಕದ 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

   UKಯಿಂದ ಬಂದವರಿಗೆ ಸಾಂಸ್ಥಿಕ ಕ್ವಾರೆಂಟೈನ್‌, ಸರ್ಕಾರದ ನಿರ್ಧಾರದ ವಿರುದ್ಧ ಪ್ರಯಾಣಿಕರ ಆಕ್ರೋಶ | Oneindia Kannada
   English summary
   Gram panchayat election symbol allotted to candidate changed in Raichur district Siravara. Voting stopped after error found in ballet paper.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X