• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರಿನ ವೈಟಿಪಿಎಸ್ ಘಟಕದಲ್ಲಿ ಬೆಂಕಿ ಅವಘಡ

By ರಾಯಚೂರು ಪ್ರತಿನಿಧಿ
|

ರಾಯಚೂರು, ಸೆಪ್ಟೆಂಬರ್ 4: ರಾಯಚೂರಿನ ವೈಟಿಪಿಎಸ್ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಇಂದು ನಡೆದಿದೆ.

   SriLanka ನೀರಿನಲ್ಲಿ IOC ಕಚ್ಚಾ ತೈಲ ಹಡಗಿನಲ್ಲಿ ಬೆಂಕಿ | Oneindia Kannada

   ರಾಯಚೂರು ಹೊರವಲಯದ ಯರಮರಸ್ ನ ವೈಟಿಪಿಎಸ್ ಘಟಕದಲ್ಲಿ ವಿದ್ಯುತ್ ಉತ್ಪಾದನೆ ವೇಳೆ 315 ಎಂಯುಎ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

   ಗೇರುಬೀಜ ಫ್ಯಾಕ್ಟರಿಯಲ್ಲಿ ಬೆಂಕಿ: ಎರಡು ಲಾರಿ ಸಹಿತ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮ

   ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ‌ನಂದಿಸಲು ಹರಸಾಹಸ ಪಟ್ಟರು. ಕೊನೆಗೂ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಸ್ಥಳಕ್ಕೆ ವೈಟಿಪಿಎಸ್ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

   ಎರಡು ಘಟಕಗಳನ್ನು ಒಟ್ಟಿಗೆ ಆನ್ ಮಾಡಿದ್ದೇ ಬೆಂಕಿ ಅವಘಡ ಸಂಭವಿಸಲು ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

   English summary
   Millions of rupees worth of goods have been destroyed in a fire accident at YTPS unit in Raichur today
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X