• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಶ್ರೀರಾಮುಲು ಆಪ್ತನ ಮಗಳ ಮದುವೆಯಲ್ಲಿ ಕೊರೊನಾ ನಿಯಮ ಪಾಲನೆ ಇಲ್ಲ

By ರಾಯಚೂರು ಪ್ರತಿನಿಧಿ
|

ರಾಯಚೂರು, ಅಕ್ಟೋಬರ್ 30: ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ.

ಸಚಿವ ಬಿ.ಶ್ರೀರಾಮುಲು ಸ್ವತಃ ಈ ಅದ್ಧೂರಿ ಮದುವೆಗೆ ಆಗಮಿಸಿ ವಧು-ವರರಿಗೆ ಶುಭ ಹಾರೈಸಿ ಹೋಗಿದ್ದಾರೆ. ಆದರೆ ಕೊರೊನಾ ಇರುವ ಸಂದರ್ಭದಲ್ಲಿ ಅದ್ಧೂರಿ ಮದುವೆ ಮಾಡಿರುವುದು ಸರ್ಕಾರದ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

ಸಿಂಧನೂರು ನಗರದ ಹೊರವಲಯದಲ್ಲಿ ಇರುವ ಹೊಸಳ್ಳಿ ಜೆ.ಇ ಗ್ರಾಮ ವ್ಯಾಪ್ತಿಯಲ್ಲಿನ ಕಮ್ಮವಾರಿ ಸಂಘದ ಯಲಮಂಚಿಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಸುಮಾರು 80 ಲಕ್ಷ ರೂ. ಮೌಲ್ಯದ ಸೆಟ್ ಹಾಕಿಸಿ ಮದುವೆ ಮಾಡಲಾಗಿದೆ.

ಸಚಿವ ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ತಮ್ಮ ಮಗಳ ಮದುವೆಯನ್ನು ಕೋವಿಡ್ ನಿಯಮ ಉಲ್ಲಂಘಿಸಿ ಸಾವಿರಾರು ಜನರನ್ನು ಸೇರಿಸಿ ಅದ್ಧೂರಿಯಾಗಿ ಮಾಡಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಮದುವೆಯ ಮೆರವಣಿಗೆ ನಡೆದಿದೆ. ಯಾರೋಬ್ಬರು ಮಾಸ್ಕ್ ಹಾಕದೇ ಗುಂಪು ಗುಂಪಾಗಿ ಸೇರಿಕೊಂಡು ಮದುವೆ ಕಾರ್ಯ ಮಾಡಿರುವುದು ಕಂಡುಬಂದಿದೆ.

ರಾಯಚೂರಿನಲ್ಲಿ ಸತತ ಮಳೆಗೆ ಮಸ್ಕಿ ಜಲಾಶಯ ಭರ್ತಿ

ಇಡೀ ಕಲ್ಯಾಣ ಮಂಟಪಕ್ಕೆ ಅದ್ಧೂರಿಯಾಗಿ ಅಲಂಕಾರ ಮಾಡಲಾಗಿತ್ತು. ಇದೇ ವೇಳೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಮದುವೆಯ ಮೆರವಣಿಗೆ ನಡೆದಿದೆ. ಮದುವೆ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ನೂರಾರು ಬಂಧು ಬಳಗ, ಸಾವಿರಾರು ಜನ ಮದುವೆಯಲ್ಲಿ ಭಾಗವಹಿಸಿದ್ದರು.

ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಹೊಸಳ್ಳಿ ಇ.ಜೆ ಗ್ರಾ.ಪಂ ಕೊವಿಡ್ ನಿಯಮ ಪಾಲಿಸುವಂತೆ ಈ ಮೊದಲೆ ಸೂಚಿಸಿತ್ತು. ಆದರೆ ಗ್ರಾಮ ಪಂಚಾಯತಿಯ ಮುನ್ನೆಚ್ಚರಿಕೆ ಪತ್ರವನ್ನು ಉಲ್ಲಂಘಿಸಿ ಅದ್ಧೂರಿ ಮದುವೆ ಮಾಡಲಾಗಿದ್ದು, ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸಹ ಕೋವಿಡ್ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ.

   Ground ಅಲ್ಲು ವಿರಾಟ್ ಕೊಹ್ಲಿ- ಅನುಷ್ಕಾ LOVE | Oneinida Kannada

   English summary
   Social Welfare Minister B.Sriramulu Close Aide Nagaraj Nekkunty has made his daughter's wedding on the outskirts of Sindhanur in Raichur district in violation of Corona guidelines.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X