ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಕಲುಷಿತ ನೀರು ಸೇವನೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

|
Google Oneindia Kannada News

ರಾಯಚೂರು, ಜೂನ್ 10: ನಗರದ ಕೆಲವು ವಾರ್ಡ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಿಂದ ಅಶ್ವಸ್ಥಗೊಂಡು, ಈಗಾಗಲೇ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಆಸ್ಪರ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಶುಕ್ರವಾರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಒಟ್ಟಾರೆ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೇರಿದೆ.

ರಾಯಚೂರು ನಗರದ 35 ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆಯಾದ ಪರಿಣಾಮ ಮೇ 31ರಂದು ವಾಂತಿ ಬೇಧಿ ಉಲ್ಭಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹಲವಾರು ಮಂದಿ ಗಂಭೀರ ಪರಿಸ್ಥಿತಿಯಲ್ಲಿ ರಿಮ್ಸ್‌ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಾರದ ಅಂತರದಲ್ಲಿ ಸಾವಿನ ಸಂಖ್ಯೆ 5ಕ್ಕೇ ಏರಿಕೆಯಾಗಿದೆ.

ರಾಯಚೂರು ಕಲುಷಿತ ನೀರು ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರಕ್ಕೆ ಪ್ರಸ್ತಾವರಾಯಚೂರು ಕಲುಷಿತ ನೀರು ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರಕ್ಕೆ ಪ್ರಸ್ತಾವ

ಕಳೆದ 15 ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ ನಗರದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ ನಗರಕ್ಕೆ ಇದೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

 ಕಲುಷಿತ ನೀರು ಕುಡಿದು ಐವರ ಸಾವು

ಕಲುಷಿತ ನೀರು ಕುಡಿದು ಐವರ ಸಾವು

ಈಗಾಗಾಗಲೆ ನೂರಾರು ಮಂದಿ ಕಲುಷಿತ ನೀರು ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ 48 ವರ್ಷದ ಜನಕರಾಜ್‌ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಸಾವಾಗಿದೆ. ಈಗಾಗಲೇ ಮಲ್ಲಮ್ಮ(40), ಅಬ್ದುಲ್ ಗಫೂರ್(37), ಅರಬ್ ಮೊಹಲ್ಲಾ ಮಹ್ಮದ್‌ ನೂರ್(43) ಮತ್ತು ಅಬ್ದುಲ್ ಕರೀಂ(50) ಮೃತಪಟ್ಟಿದ್ದರು.

ರಾಯಚೂರಲ್ಲಿ ಕಲುಷಿತ ನೀರು: ವಾಂತಿಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥರಾಯಚೂರಲ್ಲಿ ಕಲುಷಿತ ನೀರು: ವಾಂತಿಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ

 ಒಟ್ಟು 15 ಲಕ್ಷ ಪರಿಹಾರ

ಒಟ್ಟು 15 ಲಕ್ಷ ಪರಿಹಾರ

ಕಲುಷಿತ ನೀರು ಕುಡಿದು ನಾಲ್ವರು ನಿಧರಾಗುತ್ತಿದ್ದಂತೆ ಪಕ್ರರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಸ್ಥಳೀಯ ಆಡಳಿತ ದಿಂದಲೂ 10 ಲಕ್ಷ ಪರಿಹಾರ ಘೋಷಣೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ 20 ಸಾವಿರ ವೈದ್ಯಕೀಯ ವೆಚ್ಚ ನೀಡಲು ನಿರ್ಧರಿಸಲಾಗಿದೆ.

 ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ

ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ

ನೀರಿನ ಶುದ್ದೀಕರಣ ಹಾಗೂ ಸರಬರಾಜು ಮಾಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯವಹಿಸಿ ಐವರ ಸಾವಿಗೆ ಕಾರಣರಾಗಿರುವುದಕ್ಕೆ ಈಗಾಗಲೆ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಉಳಿದವರ ತಪ್ಪಿನ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಅವರಿಂದಲೂ ತಪ್ಪು ನಡೆದಿದೆ ಎಂದಾದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಆದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಪ್ರಸ್ತಾಪವಿಲ್ಲ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ತಿಳಿಸಿದ್ದಾರೆ.

25 ಲಕ್ಷ ಅನುದಾನ ನೀಡಲು ಒತ್ತಾಯ
ಅಧಿಕಾರಿಗಳ ಅಜಾಗರುಕತೆಯಿಂದ ಮೃತಪಟ್ಟವರಿಗೆ ನಷ್ಟ ಪರಿಹಾರ ಒದಗಿಸುವ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಆದರೆ ಮೃತ ಕುಟುಂಬಗಳಿಗೆ 5 ಅಥವಾ 10 ಲಕ್ಷ ಪರಿಹಾರ ನೀಡುವುದರಿಂದ ಉಪಯೋಗವಿಲ್ಲ. ತಲಾ ಒಂದು ಕುಟುಂಬಕ್ಕೆ 25 ಲಕ್ಷ ಅನುದಾನ ನೀಡಬೇಕೆಂದು ಈಗಾಗಲೆ ನಿವಾಸಿಗಳು ಪ್ರತಿಭಟನೆಯ ಮೂಲಕ ಒತ್ತಾಯಿಸಿದ್ದಾರೆ.

 ವಾಂತಿ ಬೇಧಿಯಿಂದ ನರಳಾಟ

ವಾಂತಿ ಬೇಧಿಯಿಂದ ನರಳಾಟ

ಅಧಿಕಾರಿಗಳ ಅಜಾಗರುಕತೆಯಿಂದ ಮೃತಪಟ್ಟವರಿಗೆ ನಷ್ಟ ಪರಿಹಾರ ಒದಗಿಸುವ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಆದರೆ ಮೃತ ಕುಟುಂಬಗಳಿಗೆ 5 ಅಥವಾ 10 ಲಕ್ಷ ಪರಿಹಾರ ನೀಡುವುದರಿಂದ ಉಪಯೋಗವಿಲ್ಲ. ತಲಾ ಒಂದು ಕುಟುಂಬಕ್ಕೆ 25 ಲಕ್ಷ ಅನುದಾನ ನೀಡಬೇಕೆಂದು ಈಗಾಗಲೆ ನಿವಾಸಿಗಳು ಪ್ರತಿಭಟನೆಯ ಮೂಲಕ ಒತ್ತಾಯಿಸಿದ್ದಾರೆ.

ಕಲುಷಿತ ನೀರು ಕುಡಿದ ಅಶ್ವಸ್ಥರಾಗಿ ಆಸ್ಪತ್ರೆ ಸೇರಿರುವ ಹಲವರು ಮಂದಿ ಈಗಲೂ ವಾಂತಿ ಬೇದಿಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ 20ಕ್ಕೂ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದೆ. ಕೆಲವರು ಮೂರ್ತಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರದಲ್ಲಿ ಡಯಾಲಿಸಿಸ್‌ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಸೇರಿರುವವರಲ್ಲಿ ಚಿಕ್ಕ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯು ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

English summary
Death toll in Raichur contaminated water case has raised to 5 when on June 10th 50 year old man died at RIMS hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X