ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಳಿಗೆ ತಮ್ಮವರೇ ಕಾರಣ: ಕಾಂಗ್ರೆಸ್ ಮುಖಂಡನ ಅನುಮಾನ

|
Google Oneindia Kannada News

ರಾಯಚೂರು: ಗುರುವಾರ ತಮ್ಮ ನಿವಾಸದ ಮೇಲೆ ನಡೆದ ಜಂಟಿ ದಾಳಿಗೆ ಸ್ವಪಕ್ಷೀಯ ಮುಖಂಡರ ಮೇಲೆಯೇ ಕಾಂಗ್ರೆಸ್ ಮುಖಂಡ ಎ. ವಸಂತಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ವಾಸವಿ ನಗರದಲ್ಲಿರುವ ಕಾಡಾ ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬಕಾರಿ ಇಲಾಖೆ ಮತ್ತು ಚುನಾವಣಾ ಲೆಕ್ಕ ಪರಿಶೋಧನಾ ಅಧಿಕಾರಿಗಳ ತಂಡ ಜಂಟಿಯಾಗಿ ದಾಳಿ ನಡೆಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ಮೇಲೆ ಬಿತ್ತು ಐಟಿ ಕಣ್ಣುಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ಮೇಲೆ ಬಿತ್ತು ಐಟಿ ಕಣ್ಣು

ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇರಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು. ದಾಳಿ ವೇಳೆ ಯಾವುದೇ ಮದ್ಯ ದೊರೆತಿಲ್ಲ ಎಂದು ಮೂಲಗಳು ತಿಳಿಸಿದ್ದವು.

Congress leader Vasanthkumar accused own party leaders for raid

ಈ ದಾಳಿಯು ದುರುದ್ದೇಶಪೂರ್ವಕವಾಗಿದ್ದು, ತಮ್ಮದೇ ಪಕ್ಷದ ಮುಖಂಡರು ಇದರ ಹಿಂದಿರುವ ಅನುಮಾನವಿದೆ ಎಂದು ವಸಂತಕುಮಾರ್ ಹೇಳಿದ್ದಾರೆ.

ಬೆಳ್ಳಂಬೆಳಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗನಿಗೆ ಐಟಿ ಶಾಕ್ಬೆಳ್ಳಂಬೆಳಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗನಿಗೆ ಐಟಿ ಶಾಕ್

ಕಾಂಗ್ರೆಸ್‌ನಲ್ಲಿ ನನ್ನ ಬೆಳವಣಿಗೆ ಸಹಿಸದ ಕೆಲವರು, ತೇಜೋವಧೆ ಮಾಡುವ ಸಲುವಾಗಿ ಈ ರೀತಿ ದೂರು ನೀಡಿ ದಾಳಿ ಮಾಡಿಸಿದ್ದಾರೆ. ಈ ಬಗ್ಗೆ ಖಚಿತಪಡಿಸಿಕೊಂಡು ರಾಜ್ಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ಕುತಂತ್ರದಲ್ಲಿ ಬಿಜೆಪಿ ಮುಖಂಡರ ಕೈವಾಡವೂ ಇರುವುದು ಸ್ಪಷ್ಟ. ಕಾಂಗ್ರೆಸ್ಸಿಗರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ಐಟಿಯಂಥ ಸಂಸ್ಥೆಗಳನ್ನು ಬಳಸಿಕೊಂಡು ಹೆದರಿಸುತ್ತಿದ್ದಾರೆ. ನನ್ನನ್ನು ಕಟ್ಟಿ ಹಾಕಲು ಅಕ್ರಮ ಮದ್ಯ, ಹಣ ಸಂಗ್ರಹ ಎಂಬ ಸುಳ್ಳು ಮಾಹಿತಿಗಳನ್ನು ನೀಡಿ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

English summary
Congress leader from Raichur A. Vasanthkumar accused his own party leaders for joint raid on his house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X