• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರು ಜಿಲ್ಲೆ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಟ್ಟ ಕುಮಾರಸ್ವಾಮಿ

|

ರಾಯಚೂರು, ಜೂನ್ 26: ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 3 ಸಾವಿರ ಕೋಟಿ ರೂ. ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.

ರಾಯಚೂರಿನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ನಲ್ಲಿ ರಾಯಚೂರು ವಿವಿ‌ ಕುರಿತು ಸುಗ್ರಿವಾಜ್ಷೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ವಿವರಣೆಯನ್ನು ರಾಜ್ಯಪಾಲರಿಗೆ ಕೇಳಿದ್ದು, ಆ ಕುರಿತು ಮನವೋಲಿಸಲಾಗುವುದು ಐಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಬಿಗ್ ನ್ಯೂಸ್‌: ವೃದ್ದಾಪ್ಯ ವೇತನ, ಅಂಗವಿಕಲ ಮಾಸಾಶನ ಹೆಚ್ಚಿಸಿದ ಸಿಎಂ

ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ ಎಂಬ ವರದಿ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ.

ಅಭಿವೃದ್ಧಿ ವಿಷಯದಲ್ಲ ನಮ್ಮ ಸರಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ; ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ‌ನೀರಾವರಿಗೆ ಈ ವರ್ಷ 19 ಸಾವಿರ ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದ ಎಲ್ಲ ಜನರೂ ನನ್ನ ಸಹೋದರರು:ಎಚ್‌ಡಿಕೆ

ರಾಜ್ಯದ ಎಲ್ಲ ಜನರೂ ನನ್ನ ಸಹೋದರರು:ಎಚ್‌ಡಿಕೆ

ರಾಜ್ಯದ 6.5ಕೋಟಿ ಜನರು ನನ್ನ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿದ್ದಾರೆ. ಬಿಜೆಪಿಯವರ ಹೆಸರು ಹೇಳಿಕೊಂಡು‌ ಕೆಲಸ ಮಾಡುವ ಅಗತ್ಯ ನನಗಿಲ್ಲ. ಈ ಮುಂಚೆ ಅವರದೇ ಸರಕಾರವಿದ್ದಾಗ ಏನು ಮಾಡಿದ್ದರು...? ಎಂದು ಪ್ರಶ್ನಿಸಿದರು.

ದೇವದುರ್ಗ ತಾಲೂಕಿಗೆ ನೀರಾವರಿಯನ್ನು ಎಚ್.ಡಿ.ದೇವೇಗೌಡರು ಒದಗಿಸಿದ್ದ ಸಂದರ್ಭದಲ್ಲಿ ಆರೋಪ ಮಾಡುವ ವ್ಯಕ್ತಿ ಹುಟ್ಟಿದ್ದನೋ ಗೊತ್ತಿಲ್ಲ ಎಂದರು

ರಾಯಚೂರು ಜಿಲ್ಲೆ ಸಾಲಮನ್ನಾಕ್ಕೆ 182 ಕೋಟಿ ಬಿಡುಗಡೆ

ರಾಯಚೂರು ಜಿಲ್ಲೆ ಸಾಲಮನ್ನಾಕ್ಕೆ 182 ಕೋಟಿ ಬಿಡುಗಡೆ

ರಾಯಚೂರು ಜಿಲ್ಲೆಗೆ 182 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ, ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು‌ ಜನರಿಗೆ ಕಾಣುವುದಕ್ಕೆ ಇನ್ನೂ 4ತಿಂಗಳು ಬೇಕು ಎಂದು ಹೇಳಿದ ಅವರು, ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಅವರನ್ನು ವಿಧಾನಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.

ಕಾರ್ಮಿಕರ ಮೇಲೆ ರೇಗಾಡಿ ತಪ್ಪು ಮಾಡಿದೆ: ಕುಮಾರಸ್ವಾಮಿ

61 ಯೋಜನೆಗಳ ಜಾರಿಗೆ ಕ್ರಮ

61 ಯೋಜನೆಗಳ ಜಾರಿಗೆ ಕ್ರಮ

ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪಟ್ಟಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು, ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯಾದ್ಯಂತ ಆಗಬೇಕು ಎಂಬುದು ನಮ್ಮ ಬಯಕೆ ಎಂದರು.

'ಗ್ರಾಮ ವಾಸ್ತವ್ಯ ಮೈತ್ರಿ ಸರ್ಕಾರದ್ದು, ಪಕ್ಷದ್ದಲ್ಲ'

'ಗ್ರಾಮ ವಾಸ್ತವ್ಯ ಮೈತ್ರಿ ಸರ್ಕಾರದ್ದು, ಪಕ್ಷದ್ದಲ್ಲ'

ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸಾ.ರ.ಮಹೇಶ, ವೆಂಕಟರಾವ ನಾಡಗೌಡ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.

ಕ್ಯಾನ್ಸರ್ ರೋಗಿಗೆ ಪರಿಹಾರ ನಿಧಿಯಿಂದ 2 ಲಕ್ಷ ರೂ. ಚೆಕ್ ನೀಡಿದ ಎಚ್ಡಿಕೆ

English summary
CM Kumaraswamy gives 3000 crore rupees grant for Raichur district development. He today did village stay program in Raichur district Manvi talluk's karigudda village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X