• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಸಿಐಡಿಗೆ

|

ರಾಯಚೂರು, ಏಪ್ರಿಲ್ 21 : ರಾಜ್ಯಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿದ್ದ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಏ.16ರಂದು ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು.

ಕರ್ನಾಟಕ ಸರ್ಕಾರ ಶನಿವಾರ ರಾತ್ರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಎಸ್ಪಿ ಶರಣಪ್ಪ, ಅನೂಪ್ ಶೆಟ್ಟಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದರ್ಶನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.

ರಾಯಚೂರು ವಿದ್ಯಾರ್ಥಿನಿ ಸಾವು : ಎಚ್.ಡಿ.ಕುಮಾರಸ್ವಾಮಿ ವಿಷಾದ

ಪ್ರಕರಣ ಸಿಐಡಿಗೆ ವರ್ಗಾವಣೆ ಆಗುತ್ತಿದ್ದಂತೆ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಸಿಐಡಿ ತಂಡ ರಾಯಚೂರಿಗೆ ಆಗಮಿಸಲಿದ್ದು, ತನಿಖೆಯನ್ನು ಆರಂಭಿಸಲಿದೆ. ಸ್ಥಳೀಯ ಪೊಲೀಸರಿಂದ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು, ಅನುಮಾನಕ್ಕೆ ಕಾರಣವಾದ ಅಂಶಗಳು

ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಏಪ್ರಿಲ್ 13ರಂದು ಪರೀಕ್ಷೆ ಬರೆಯಲು ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಏಪ್ರಿಲ್ 16ರಂದು ಕಾಲೇಜಿನಿಂದ 4 ಕಿ.ಮೀ.ದೂರದಲ್ಲಿ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಯುವತಿ ಸಾವಿನ ಕುರಿತು ಯೋಗರಾಜ್ ಭಟ್ ಬರೆದ ಮನಮಿಡಿಯುವ ಪತ್ರ

ಆತ್ಮಹತ್ಯೆಯಲ್ಲ ಕೊಲೆ?

ಆತ್ಮಹತ್ಯೆಯಲ್ಲ ಕೊಲೆ?

ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಡೆತ್ ನೋಟ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ರಾಜ್ಯದಲ್ಲಿ ಆಕ್ರೋಶವೆದ್ದಿದೆ. ವಿದ್ಯಾರ್ಥಿನಿಗೆ ನ್ಯಾಯಕೊಡಿಸಿ ಎಂದು ಒತ್ತಾಯಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸಾಮಾಜಿಕ ಜಾಲತಾಣದಲ್ಲಿ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಟ್ವೀಟರ್‌ನಲ್ಲಿ ಈ ಪ್ರಕರಣ ಟ್ರೆಂಡ್ ಆಗಿದೆ. ವಿದ್ಯಾರ್ಥಿನಿ ಸಾವಿಗೆ ನ್ಯಾಯಕೊಡಿಸಿ ಎಂದು ನಟ-ನಟಿಯರು ಸಹ ಒತ್ತಾಯಿಸಿದ್ದರು.

ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕುರಿತು ಟ್ವೀಟ್ ಮಾಡಿದ್ದರು, 'ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಹೆಣ್ಣುಮಕ್ಕಳ ಮೇಲಿನ ಇಂತಹ ಪೈಶಾಚಿಕ ಕೃತ್ಯ ಖಂಡನೀಯ' ಎಂದು ಹೇಳಿದ್ದರು.

ಒಬ್ಬ ಆರೋಪಿ ಬಂಧನ

ಒಬ್ಬ ಆರೋಪಿ ಬಂಧನ

ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದರ್ಶನ್ ಎಂಬ ಆರೋಪಿನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಪ್ರೀತಿಸಲು ನಿರಾಕರಿಸಿದ್ದೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ರಾಯಚೂರು ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ರಾಜಾ ಅಮರೇಶ್ ನಾಯಕ್ ಬಿ ಜೆ ಪಿ ಗೆದ್ದವರು 5,98,337 53% 1,17,716
ಬಿವಿ ನಾಯಕ್ ಐ ಎನ್ ಸಿ ರನ್ನರ್ ಅಪ್ 4,80,621 43% 1,17,716
2014
ಬಿ.ವಿ. ನಾಯಕ ಐ ಎನ್ ಸಿ ಗೆದ್ದವರು 4,43,659 46% 1,499
ಅರಕೆರಾ ಶಿವನಗೌಡ ನಾಯಕ ಬಿ ಜೆ ಪಿ ರನ್ನರ್ ಅಪ್ 4,42,160 46% 0
2009
ಪಕ್ಕಿರಪ್ಪ ಎಸ್. ಬಿ ಜೆ ಪಿ ಗೆದ್ದವರು 3,16,450 46% 30,636
ರಾಜಾ ವೆಂಕಟಪ್ಪ ನಾಯಕ ಐ ಎನ್ ಸಿ ರನ್ನರ್ ಅಪ್ 2,85,814 42% 0
2004
ಎ. ವೆಂಕಟೇಶ ನಾಯ್ಕ ಐ ಎನ್ ಸಿ ಗೆದ್ದವರು 2,89,424 35% 508
ರಾಜಾ ಮದನಗೋಪಾಲ ನಾಯಕ ಜೆ ಡಿ (ಎಸ್) ರನ್ನರ್ ಅಪ್ 2,88,916 35% 0
1999
ಎ. ವೆಂಕಟೇಶ ನಾಯಕ ಐ ಎನ್ ಸಿ ಗೆದ್ದವರು 3,59,946 52% 1,72,206
ಅಬ್ದುಲ್ ಸಮದ್ ಸಿದ್ದಿಕ್ ಜೆ ಡಿ (ಯು) ರನ್ನರ್ ಅಪ್ 1,87,740 27% 0
1998
ಎ. ವೆಂಕಟೇಶ ನಾಯ್ಕ ಐ ಎನ್ ಸಿ ಗೆದ್ದವರು 2,64,187 45% 78,278
ರಾಜಾ ರಂಗಪ್ಪ ನಾಯ್ಕ ಜೆ ಡಿ ರನ್ನರ್ ಅಪ್ 1,85,909 32% 0
1996
ರಾಜಾ ರಂಗಪ್ಪ ನಾಯ್ಕ ಜೆ ಡಿ ಗೆದ್ದವರು 2,14,920 45% 36,405
ಎ. ವೆಂಕಟೇಶ ನಾಯಕ ಐ ಎನ್ ಸಿ ರನ್ನರ್ ಅಪ್ 1,78,515 37% 0
1991
ವೆಂಕಟೇಶ ನಾಯ್ಕ ಐ ಎನ್ ಸಿ ಗೆದ್ದವರು 1,94,709 52% 1,22,458
ನಝೀರ ಅಹ್ಮದ ಸಿದ್ದಿಕಿ ಜೆ ಡಿ ರನ್ನರ್ ಅಪ್ 72,251 19% 0
1989
ಆರ್. ಅಂಬಣ್ಣ ನಾಯ್ಕ ದೊರೆ ಐ ಎನ್ ಸಿ ಗೆದ್ದವರು 2,28,065 46% 88,922
ನಝೀರ್ ಅಹ್ಮದ್ ಸಿದ್ದಿಕಿ ಜೆ ಡಿ ರನ್ನರ್ ಅಪ್ 1,39,143 28% 0
1984
ಬಿ.ವಿ. ದೇಸಾಯಿ ಐ ಎನ್ ಸಿ ಗೆದ್ದವರು 2,12,244 54% 57,386
ವಿಶ್ವನಾಥ ರೆಡ್ಡಿ ಜೆ ಎನ್ ಪಿ ರನ್ನರ್ ಅಪ್ 1,54,858 39% 0
1980
ಬಿ.ವಿ. ದೇಸಾಯಿ ಐ ಎನ್ ಸಿ (ಐ) ಗೆದ್ದವರು 1,75,888 66% 1,29,050
ರಾಜಾ ಪಿಡ ನಾಯ್ಕ ಐ ಎನ್ ಸಿ (ಯು) ರನ್ನರ್ ಅಪ್ 46,838 18% 0
1977
ರಾಜಶೇಖರ ಮಲ್ಲಪ್ಪ ಐ ಎನ್ ಸಿ ಗೆದ್ದವರು 2,12,232 74% 1,36,422
ಎಂ. ನಾಗಪ್ಪ ಬಸಪ್ಪ ಬಿ ಎಲ್ ಡಿ ರನ್ನರ್ ಅಪ್ 75,810 26% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A probe by the Criminal Investigation Department (CID) has been ordered into Raichur engineering student death case. Engineering student found dead under mysterious circumstances on April 16, 2019.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more