• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೈನತ್ತ ಬೆರಳು ತೋರಿ ಟಾಂಗ್ ಕೊಟ್ಟ ನಳಿನ್ ಕುಮಾರ್ ಕಟೀಲ್ !

|
Google Oneindia Kannada News

ರಾಯಚೂರು, ಏಪ್ರಿಲ್ 12: ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಇದು ಷಡ್ಯಂತ್ರ ಎಂಬುದು ಈಗ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟಿದ್ದಾರೆ. ಸಿಡಿ ಪ್ರಕರಣ ಕುರಿತು ಸಿಡಿಲೇಡಿ ಯು ಟರ್ನ್ ಆಗಿದ್ದಾಳೆ ಎಂಬ ಸುದ್ದಿ ಹೊರ ಬಿದ್ದ ನಂತರ ನಳಿನ್ ಕುಮಾರ್ ಕಟೀಲು ರಾಯಚೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.ಅವರು ನೀಡಿರುವ ಶಾಕಿಂಗ್ ಹೇಳಿಕೆ ವಿವರ ಇಲ್ಲಿದೆ ನೋಡಿ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಷಡ್ಯಂತ್ರ ಮಾಡಬೇಕು. ಆದ್ರೆ, ಯಾರದ್ದೋ ಕಾಲು ಎಳೆಯಬೇಕು ಎಂದು ಮುಗ್ಧ ಹೆಣ್ಣು ಮಗಳನ್ನು ಬಳಸಿಕೊಳ್ಳುವುದು ಮಹಾ ಅಪರಾಧ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಇದ್ದಾರೋ ಅವರಿಗೆಲ್ಲರೂ ಶಿಕ್ಷೆ ಆಗುತ್ತದೆ. ಹನಿಟ್ರ್ಯಾಪ್ ಅಂದ್ರೆ ಆಕೆಯನ್ನು ಯಾರೋ ಉಪಯೋಗ ಮಾಡಿದ್ದಾರೆ. ಸುಳ್ಳು ಹೇಳಿ ಮಾಡಿಸಿದ್ದಾರೆ ಎನ್ನೋದು ಸತ್ಯ ಆಯ್ತು ಎಂದು ತಿಳಿಸಿದರು.

   ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಮಾಜಿ ಸಚಿವ ಯು ಟಿ ಖಾದರ್‌ ಕಾರು! | Oneindia Kannada

   ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಬೆಳಕಿಗೆ ಬಂದು ನಲವತ್ತು ದಿನಗಳೇ ಕಳೆದು ಹೋಗಿವೆ. ಈಗಾಗಲೇ ಎರಡು ಪ್ರಕರಣದಲ್ಲಿ ವಿಚಾರಣೆ ಮುಗಿಸಿರುವ ಸಿಡಿ ಸಂತ್ರಸ್ತ ಯುವತಿಯನ್ನು ರಮೇಶ್ ಜಾರಕಿಹೊಳಿ ದಾಖಲಿಸಿರುವ ಪ್ರಕರಣದಲ್ಲಿ ಸಿಡಿ ಯುವತಿಯ ವಿಚಾರಣೆ ಬಾಕಿಯಿದೆ. ಈ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿಗಳಿಬ್ಬರಿಗಾಗಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

   English summary
   BJP president Nalin Kumar Kateel has commented that the CD case is nothing but a political conspiracy know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X