ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಕಾಮಗಾರಿ ನಡೆಸದೇ ಸಂಪೂರ್ಣ ಬಿಲ್ ಗುಳುಂ- ಶಾಸಕ ಶಿವನಗೌಡ ವಿರುದ್ಧ ಆರೋಪ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜೂ. 3: ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಆದರೆ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಮೇಲೆ ಶೇ. 100 ಕಮಿಷನ್ ಆರೋಪ ಕೇಳಿ ಬಂದಿದೆ. ರಸ್ತೆ ಕಾಮಗಾರಿಯನ್ನೇ ನಡೆಸದೆ ಕೋಟ್ಯಾಂತರ ರೂಪಾಯಿ ಬಿಲ್ ಸಂಪೂರ್ಣವಾಗಿ ಎತ್ತಿರುವ ಬಗ್ಗೆ ದಾಖಲೆ ಸಹಿತ ಹೋರಾಟಗಾರರು ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮಾರು 20 ಕೋಟಿ ರೂಪಾಯಿ ಕಾಮಗಾರಿಯನ್ನು ಒಂದಿಂಚೂ ಕೆಲಸ ಮಾಡದೆ ಒಂದು ಹಿಡಿ ಮಣ್ಣು ಸಹ ಹಾಕದೆ ಸಂಪೂರ್ಣ ಬಿಲ್ ಎತ್ತಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲಾಖೆ ದಾಖಲೆ ಸೃಷ್ಟಿಸಿದ್ದಾರೆ. ವಾಸ್ತವವಾಗಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇದಕ್ಕೆಲ್ಲಾ ಶಾಸಕ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ್ ಮತ್ತು ಲೋಕೋಪಯೋಗಿ ಇಲಾಖೆಯ ಇಇ ಚನ್ನಬಸಪ್ಪ ಮೆಕಾಲೆ ಕಾರಣ ಎಂದು ಆರೋಪಿಸಿ ಜೆಡಿಎಸ್ ನ ಬುಡ್ಡನಗೌಡ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ನಡೆಸದೇ ಬಿಲ್ ಎತ್ತಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ

ಕಾಮಗಾರಿ ಅನುದಾನ ದುರ್ಬಳಕೆ: ಗ್ರಾಮಸ್ಥರ ಆಕ್ರೋಶ

ಮಲದಕಲ್ ಗ್ರಾಮದಿಂದ ಮುಷ್ಟೂರುವರೆಗಿನ ಕಾಮಗಾರಿಗಳನ್ನು ವಿವಿಧ ಗುತ್ತಿಗೆದಾರರಿಗೆ ನೀಡಲಾಗಿದ್ದು ಒಂದು ಕಾಮಗಾರಿಯನ್ನು ಮಾಡದೆ ಬಿಲ್ ಎತ್ತಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಯೋಜನೆ ಯಡಿಯ ಕಾಮಗಾರಿ ಅನುದಾನ ದುರ್ಬಳಕೆ ಮಾಡಲಾಗಿದೆ. ಟೆಂಡರ್ ಕರೆದ ತಿಂಗಳಲ್ಲೇ ಕಾಮಗಾರಿ ಮುಗಿದಿದೆ ಎಂದು ಬಿಲ್ ಎತ್ತಲಾಗಿದೆ ಎಂದು ದಾಖಲೆಗಳು ತೋರಿಸುತ್ತಿವೆ.

BJP MLA Shivanagouda Nayak Faces 100 pc Commission Allegation

ಹದಗೆಟ್ಟ ರಸ್ತೆಯಲ್ಲೇ ಅಧಿಕಾರಿಗಳು ಹಾಗೂ ಶಾಸಕರಿಗೆ ಹಿಡಿಶಾಪ ಹಾಕುತ್ತಾ ಜನತೆ ಕಷ್ಟಪಟ್ಟು ಓಡಾಡುತ್ತಿದ್ದಾರೆ. ಶಾಸಕ ಬಗ್ಗೆ ಹೆಚ್ಚು ಮಾತನಾಡಿದರೆ ಪ್ರಶ್ನೆ ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಸರ್ಕಾರ ರಸ್ತೆ ಕಾಮಗಾರಿ ಮಾಡಲು ನೀಡಿದ ಹಣವನ್ನು ಇವರೇ ಜೇಬಿಗೆ ಇಳಿಸಿಕೊಂಡರೆ ಸಾಮಾನ್ಯ ಜನ ಓಡಾಡುವುದು ಎಲ್ಲಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕಾಮಗಾರಿ ನಡೆಯದೇ ಬಿಲ್ ಎತ್ತಿದ್ದಕ್ಕೆ ಮಲದಕಲ್, ರಾಮದುರ್ಗ, ಆಲ್ದರ್ತಿ, ಗೆಜ್ಜೆಭಾವಿ, ಮುಷ್ಟೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಸಾವಿರಾರು ಮೀನುಗಳ ಸಾವು: ಆತಂಕರಾಯಚೂರಿನಲ್ಲಿ ಸಾವಿರಾರು ಮೀನುಗಳ ಸಾವು: ಆತಂಕ

ಮಹಾ ಕರ್ಮಕಾಂಡ

ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರೇ ಶಾಸಕರಾಗಿರುವ ಕ್ಷೇತ್ರದ ಮಹಾ ಕರ್ಮಕಾಂಡ ಇದು. ಕೆಲ ದಿನಗಳ ಹಿಂದೆ ತಮ್ಮನ್ನು ಕೇಳದೆ ಎನ್‌ಆರ್‌ಬಿಸಿ ಕಾಮಗಾರಿ ಬಿಲ್ ಮಾಡಿದ್ದ ಕಾರಣಕ್ಕೆ ಮುಖ್ಯ ಎಂಜಿನಿಯರ್‌ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಶಿವನಗೌಡ ನಾಯಕ್ ಈಗ ಮೌನಕ್ಕೆ ಶರಣಾಗಿದ್ದಾರೆ. ಕಾಮಗಾರಿಯನ್ನೇ ಮಾಡದೆ ಅನುದಾನ ನುಂಗಿ ನೀರು ಕುಡಿದವರ ವಿರುದ್ಧ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

(ಒನ್ಇಂಡಿಯಾ ಸುದ್ದಿ)

English summary
Devadurga BJP MLA Shivanagouda Nayak Faces Allegation of Various corruption, including taking 100 percent commission in works. He is alleged to have taken grant for the work that was not done really.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X