ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಜಿಲ್ಲಾ ಆಸ್ಪತ್ರೆ ಮುಂದೆ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್ 24: ರಾಯಚೂರು ಜಿಲ್ಲಾ ಪೊಲೀಸರಿಗೆ ತಲೆನೋವಾಗಿದ್ದ ರಿಮ್ಸ್ ಆಸ್ಪತ್ರೆ ಮುಂದೆ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 17 ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಮು, ಬಸವರಾಜ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5,02,000 ರೂ. ಮೌಲ್ಯದ ಒಟ್ಟು 17 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಿಮ್ಸ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಬೈಕ್ ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.

ಅದರಲ್ಲೂ ಹೀರೋ ಹೊಂಡಾ ಕಂಪನಿಯ ಬೈಕ್ ಗಳನ್ನೇ ಈ ಖದೀಮರು ಟಾರ್ಗೆಟ್ ಮಾಡಿ ಕದ್ದಿದ್ದಾರೆ. ಆರೋಪಿಗಳಿಬ್ಬರು ಆರ್.ಟಿ.ಪಿ.ಎಸ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Raichur: Bike Robbers Arrested In Front Of Raichur District Hospital

Recommended Video

ಭಾರತದ ಪವರ್ ಗೆ ಶಾಕ್ ಆದ China | Oneindia Kannada

ರಾಯಚೂರಿನಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಲಿಂಗಸುಗೂರು, ಸಿಂಧನೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಳ್ಳರು ಬೇರೆಲ್ಲೂ ಕೈಚಳಕ ತೋರಿಲ್ಲ. ಕೇವಲ ರಿಮ್ಸ್ ಆಸ್ಪತ್ರೆ ಪಾರ್ಕಿಂಗ್ ಸ್ಥಳವನ್ನೇ ಟಾರ್ಗೆಟ್ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

English summary
17 bikes have been seized and two accused have been arrested in Raichur rural police operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X