ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲುಷಿತ ನೀರು ಪೂರೈಕೆಯಿಂದ ಮೂವರ ಸಾವು ಖಂಡಿಸಿ ರಾಯಚೂರು ಬಂದ್

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು.ಜೂ. 6: ಕಲುಷಿತ ನೀರು ಪೂರೈಕೆಯಿಂದ ಮೂವರ ಸಾವು ಮತ್ತು ನೂರಾರು ಜನರ ನರಳಾಟದ ವಿರುದ್ಧ ರಾಯಚೂರು ನಾಗರೀಕರ ವೇದಿಕೆಯಿಂದ ರಾಯಚೂರು ಬಂದ್ ಮತ್ತು ನಗರಸಭೆ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಬಂದ್ ಪ್ರತಿಭಟನಾಕಾರರು ಪೂರ್ವ ಘೋಷಣೆಯಂತೆ ಬಸ್ ಸಂಚಾರ ಮತ್ತು ಶಾಲಾ, ಕಾಲೇಜುಗಳು ವಿನಾಯಿತಿಯೊಂದಿಗೆ ವಾಣಿಜ್ಯ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಮುಷ್ಕರ ನಿರತರು ನಗರದಲ್ಲಿ ಬೈಕ್ ರ್ಯಾಲಿ ಮತ್ತಿತರ ರ್ಯಾಲಿಗಳ ಮೂಲಕ ಬಂದ್ ಯಶಸ್ವಿಗೆ ಮುಂದಾದರು. ಕೆಲವೆಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದರೇ, ಇನ್ನೂ ಕೆಲವೆಡೆ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಸಂಘಟಕರು ಮಧ್ಯಾಹ್ನದವರೆಗೂ ಬಂದ್ ಯಶಸ್ವಿಗೆ ಪ್ರಯತ್ನ ನಡೆಸಿದರು. ತರಕಾರಿ ಮಾರುಕಟ್ಟೆ, ಬಟ್ಟೆ ಬಜಾರ್, ತೀನ್ ಖಂದೀಲ್, ಕಿರಾಣಿ ಬಜಾರ್ ಹಾಗೂ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಬಂದ್ ಭಾಗಶಃವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ವಾರದ ಮೊದಲನೇ ದಿನವಾದ ಸೋಮವಾರ ಜನರ ಓಡಾಟ ಅತ್ಯಂತ ಕಡಿಮೆಯಾಗಿರುವುದು ಕಂಡು ಬಂದಿತು.

ರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರುರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು

 ಜನಪ್ರತಿನಿಧಿಗಳು - ಶಾಸಕರ ವಿರುದ್ಧ ಕಿಡಿಕಾರಿದ ಜನರು

ಜನಪ್ರತಿನಿಧಿಗಳು - ಶಾಸಕರ ವಿರುದ್ಧ ಕಿಡಿಕಾರಿದ ಜನರು

ಪ್ರಮುಖ ಮಾರುಕಟ್ಟೆಗಳಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಬಂದ್ ಮುಷ್ಕರ ನಿರತ ಯುವಕರು ಸಂಚರಿಸುವ ಬೈಕ್ ಗಳ ಹಿಂದೆ ಪೊಲೀಸರ ಕಾವಲು ಪಡೆ ನಿಯುಕ್ತಿಗೊಳಿಸಲಾಗಿತ್ತು.

ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ನಗರಸಭೆ ಮುಂಭಾಗದಲ್ಲಿ ನಾಗರೀಕರ ವೇದಿಕೆಯ ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೇ, ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆಯೂ ನೀಡಲಾಗಿತ್ತು. ವೇದಿಕೆಯಲ್ಲಿ ಕ್ರಾಂತಿಗೀತೆ ಹಾಡುವ ಮೂಲಕ ರಾಯಚೂರಿನ ಪರಿಸ್ಥಿತಿಯನ್ನು ಹಾಡುಗಳ ಮೂಲಕ ಕೇಳಲಾಯಿತು. ಎರಡು ನದಿಗಳ ಕಲುಷಿತ ನೀರು, ದುರಾಡಳಿತ, ಶೇ.40ರಷ್ಟು ಕಮಿಷನ್, ರಸ್ತೆಗಳ ದುಸ್ಥಿತಿ, ಕಸದ ವಿಲೇವಾರಿ ನಿರ್ಲಕ್ಷ್ಯ, ನಾಗರೀಕರಿಗೆ ಶಾಪವಾಗಿದೆಂದು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಶಾಸಕರ ವಿರುದ್ಧ ಕಿಡಿಕಾರಿದರು. ಮಧ್ಯಾಹ್ನ ಸ್ಥಳಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮತ್ತು ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ ಅವರು ಆಗಮಿಸಿ, ಪ್ರತಿಭಟನೆಕಾರರಿಂದ ಮನವಿ ಸ್ವೀಕರಿಸಿದರು.

 ರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ ರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ

 25 ಲಕ್ಷ ಅನುದಾನಕ್ಕೆ ಒತ್ತಾಯ

25 ಲಕ್ಷ ಅನುದಾನಕ್ಕೆ ಒತ್ತಾಯ

ಮೃತಪಟ್ಟವರಿಗೆ ನಷ್ಟ ಪರಿಹಾರ ಒದಗಿಸುವ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವುದರಿಂದ ಉಪಯೋಗವಿಲ್ಲ. ತಲಾ ಒಂದು ಕುಟುಂಬಕ್ಕೆ 25 ಲಕ್ಷ ಅನುದಾನ ನೀಡಬೇಕೆಂದು ಮುಷ್ಕರ ನಿರತರು ಒತ್ತಾಯಿಸಿದರು. ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ನಂತರ 15 ದಿನ ಗಡುವು ನೀಡಿ, ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಹಿನ್ನೆಲೆಯಲ್ಲಿ ನಗರಸಭೆ ಇಂದು ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು. ಈ ಬಂದ್ ಮುಷ್ಕರದಲ್ಲಿ ಬಷೀರುದ್ದೀನ್, ವಿರೂಪಾಕ್ಷಿ, ರವಿ ಬೋಸರಾಜು, ರಾಮನಗೌಡ ಏಗನೂರು, ಜಯಣ್ಣ, ಅಂಬಣ್ಣ ಅರೋಲಿಕರ್, ರಜಾಕ್ ಉಸ್ತಾದ್, ರಮೇಶ ಯಾದವ್, ಎಸ್.ಮಾರೆಪ್ಪ, ಜೆ.ಬಿ.ರಾಜು, ಕೆ.ಈ.ಕುಮಾರ, ಶ್ರೀನಿವಾಸ ರೆಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 ಸೇವೆಯಿಂದ ವಜಾಗೊಳಿಸಲು ಆದೇಶ

ಸೇವೆಯಿಂದ ವಜಾಗೊಳಿಸಲು ಆದೇಶ

ಕಲುಷಿತ ಕುಡಿಯುವ ನೀರಿನಿಂದ ಮೂವರು ಮೃತಪಟ್ಟು ನೂರಾರು ಜನ ಆಸ್ಪತ್ಪೆ ಪಾಲಾದ ಘಟನೆಗೆ ಸಂಬಂಧಿಸಿ ನಗರಸಭೆಯ ನೀರು ನಿರ್ವಹಣಾ ಕಿರಿಯ ಅಭಿಯಂತರ (ಕನಿಷ್ಠ ವೇತನ ತಾತ್ಕಾಲಿಕ ನೌಕರರು) ಕೃಷ್ಣ ಇವರನ್ನು ಸೇವೆಯಿಂದ ವಜಾಗೊಳಿಸಿ, ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಲುಷಿತ ಕುಡಿವ ನೀರಿನ ಪ್ರಕರಣಕ್ಕೆ ಸಂಬಂಧಿಸಿ ಕಳೆದ 9 ದಿನಗಳ ನಂತರ ನಗರಸಭೆಯ ಕಿರಿಯ ಅಭಿಯಂತರ ವಜಾದೊಂದಿಗೆ ತಲೆದಂಡ ಆರಂಭಗೊಂಡಿದೆ. ಕುಡಿವ ನೀರಿನ ಪೂರೈಕೆ ಮತ್ತು ಶುದ್ಧೀಕರಣ ಘಟಕಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ಹಿನ್ನೆಲೆ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಅವರ ಸೇವೆಯನ್ನು ನಗರಸಭೆಯಿಂದ ಹಿಂಪಡೆದು, ಬೇರೊಬ್ಬ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಈ ಹುದ್ದೆಗೆ ವರ್ಗಾಯಿಸುವಂತೆ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

 ವರದಿ ಬಂದ ನಂತರ ಕ್ರಮ

ವರದಿ ಬಂದ ನಂತರ ಕ್ರಮ

ನಗರಸಭೆ ಮುಂಭಾಗದಲ್ಲಿ ನಾಗರೀಕರ ವೇದಿಕೆಯ ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೇ, ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆಯೂ ನೀಡಲಾಗಿತ್ತು. ನಗರಸಭೆ ಕಲುಷಿತ ನೀರು ಕುಡಿದು ಮೃತಪಟ್ಟ ಕುಟುಂಬಸ್ಥರಿಗೆ ಸಿಎಂ ರಿಲೀಫ್ ಫಂಡ್ ನಿಂದ ಪ್ರತಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ರಾಯಚೂರು ನಗರಸಭೆ ವತಿಯಿಂದ ಕಲುಷಿತ ನೀರು ಸರಬರಾಜು ಮಾಡಿದ್ದ ಪ್ರಕರಣದಲ್ಲಿ ಇದುವರೆಗೂ ಮೂರು ಜನ ಮೃತಪಟ್ಟಿದ್ದು, ಇದೀಗ ರಾಯಚೂರು ನಗರದಲ್ಲಿ ಪ್ರತಿಭಟನೆ ಕಾವು ಮತ್ತಷ್ಟು ಏರತೊಡಗಿದೆ. ಇದರಿಂದ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೃತಪಟ್ಟ ಮೂರು ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗುವುದು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದರು.

(ಒನ್ಇಂಡಿಯಾ ಸುದ್ದಿ)

English summary
Bandh observed in Raichur on Monday condemning the incident of 3 people died due to contaminated drinking water. Raichur Citizens' Forum does Dharna on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X