ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ | ಬಿ ಎಸ್ ವೈ ವಿರುದ್ಧ ದೂರು ದಾಖಲು | Oneindia Kannada

ರಾಯಚೂರು, ಫೆಬ್ರವರಿ 14: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಹಾಗೂ ಶಾಸಕರಾದ ಶಿವನಗೌಡ ನಾಯಕ್, ಪ್ರೀತಮ್‌ಗೌಡ ಹಾಗೂ ಯಡಿಯೂರಪ್ಪ ಮಾಧ್ಯಮ ಸಲಹೆಗಾರ ಎಂಬಿ ಮರಂಕಲ್ ಅವರ ವಿರುದ್ಧ ಗುರುಮಿಟ್ಕಲ್ ಶಾಸಕರ ಪುತ್ರ ಶರಣಗೌಡ ಕಂದಕೂರ ರಾಯಚೂರು ಎಸ್‌ಪಿ ಡಿ. ಕಿಶೋರಬಾಬುಗೆ ದೂರು ನೀಡಿದ್ದಾರೆ.

ಈ ಎಲ್ಲರೂ ಬಿಜೆಪಿಗೆ ಬರಬೇಕೆಂದು ಹಣದ ಆಮಿಷವೊಡ್ಡಿದ್ದು, ಒಂದೊಮ್ಮೆ ಬಾರದಿದ್ದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಹೇಳಿ ಯಡಿಯೂರಪ್ಪ ಸೇರಿ ಇನ್ನೂ ಮೂರು ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಬಿಎಸ್‌ವೈ ಸವಾಲಿಗೆ ಎಚ್ಡಿಕೆ ಪ್ರತಿ ಸವಾಲು, 80 ನಿಮಿಷದ ಆಡಿಯೋ ರಿಲೀಸ್ಬಿಎಸ್‌ವೈ ಸವಾಲಿಗೆ ಎಚ್ಡಿಕೆ ಪ್ರತಿ ಸವಾಲು, 80 ನಿಮಿಷದ ಆಡಿಯೋ ರಿಲೀಸ್

ಎಸ್‌ಪಿಗೆ ಮೂರು ಪುಟಗಳ ದೂರಿನ ಪ್ರತಿಯೊಂದಿಗೆ ಅವರ ಜೊತೆಗಿನ ಮಾತುಕತೆಯ ಸಿಡಿ ನೀಡಿದ್ದಲ್ಲದೆ, ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಸಂಪೂರ್ಣ ಘಟನೆಯ ವಿವರವನ್ನು ಒಂದೂವರೆ ತಾಸು ವಿವರಿಸಿದ್ದಾರೆ.

Audio tapes: FIR against Yeddyurappa, three others

ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್

ನಂತರ ದೇವದುರ್ಗಕ್ಕೂ ತೆರಳಿ ಅಲ್ಲಿನ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಅಪರಾಧಿಕ ಒಳಸಂಚು ನಡೆಸಿದ್ದಕ್ಕಾಗಿ ಐಪಿಸಿ 120 ಬಿ, ಅಪರಾಧಿಕ ಬೆದರಿಕೆಗಾಗಿ ಐಪಿಸಿ 506, ಏಕೋದ್ದೇಶದಿಂದ ಕೃತ್ಯ ಎಸಗಲು ಪ್ರಯತ್ನಿಸಿದ್ದಕ್ಕಾಗಿ 34 ಹಾಗೂ ಭ್ರಷ್ಟಾಚಾರ ಅಧಿನಿಯಮ ಪ್ರಕಾರ ಎಫ್‌ಐಆರ್‌ ದಾಖಲಿಸಲಾಗಿದೆ.

English summary
Raichur district police registered an FIR against BJP State president B.S. Yeddyurappa under the Prevention of Corruption Act, 1988, for allegedly trying to woo JD(S) MLA Naganagouda Kandkur’s son Sharanagouda with promise of money and ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X