ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಸುಗೂರು ಕ್ರೀಡಾಪಟುಗಳ ಬಹು ವರ್ಷಗಳ ಕನಸು ನನಸಾಗುವುದೇ?

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜುಲೈ.25: ಅದು ಲಿಂಗಸುಗೂರು ಪಟ್ಟಣದ ಕ್ರೀಡಾಪಟುಗಳ ಬಹು ವರ್ಷಗಳ ಕನಸು. ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡರೇ ಆಟಕ್ಕೆ ಅನುಕೂಲವಾದಿತು ಎಂದು ಆಸೆ ಪಟ್ಟಿದ್ದರು. ಆದ್ರೆ ಆ ಯೋಜನೆ ದಶಕ ಕಳೆಯುತ್ತ ಬಂದರೂ ಮುಗಿದಿಲ್ಲ. ಇದ್ರಿಂದ ಕ್ರೀಡಾಪಟುಗಳಿಗೆ ನಿರಾಸೆ ಮುಂದುವರೆದಿದೆ.

ಗಿಡ, ಕಸದಿಂದ ಆವರಿಸಿರೋ ಮೈದಾನ, ಪೆವಿಲಿಯನ್​ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡ ಗುತ್ತಿಗೆದಾರರು..ಈ ಚಿತ್ರಣ ಕಂಡು ಬರೋದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ. ಕಾಮಗಾರಿಗೆ ಚಾಲನೆ ಸಿಕ್ಕು ಒಂಭತ್ತು ವರ್ಷ ಕಳೆದ್ರೂ ಪೂರ್ಣಗೊಂಡಿಲ್ಲ ಈ ಕ್ರೀಡಾಂಗಣ.

ಮೆಟ್ರೋ ಕಾಮಗಾರಿ ಯಾವಾಗ ಪೂರ್ಣ, ಸತ್ಯ ಯಾವುದು?ಮೆಟ್ರೋ ಕಾಮಗಾರಿ ಯಾವಾಗ ಪೂರ್ಣ, ಸತ್ಯ ಯಾವುದು?

ಪಟ್ಟಣದ ಸರ್ಕಾರಿ ತೋಟದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ದಶಕ ಕಳೆಯುತ್ತ ಬಂದರೂ ಇನ್ನೂ ಕ್ರೀಡಾಂಗದ ಯಾವುದೇ ಕಾಮಗಾರಿ ಆಗಿಲ್ಲ. ಲಿಂಗಸುಗೂರಿನಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ಸೂಕ್ತ ಕ್ರೀಡಾಂಗಣ ಇಲ್ಲದೇ ನಿರಾಸೆಗೊಂಡಿದ್ದಾರೆ.

Athletes disappointed for Without suitable stadium in Lingsagaruru

ಕ್ರಿಕೆಟ್​ ಸೇರಿದಂತೆ ಯಾವುದೇ ಆಟಕ್ಕೆ ಮೈದಾನವೇ ಇಲ್ಲ. 2009ರಲ್ಲಿ ಅಂದಿನ ಸರ್ಕಾರ ಲಿಂಗಸುಗೂರಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಚಾಲನೆ ನೀಡಿತ್ತು. ತಾಲೂಕು ಕ್ರೀಡಾಂಗಣಕ್ಕಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸುಮಾರು 92 ಲಕ್ಷ ರೂಪಾಯಿ ನಿಗದಿಪಡಿಸಿತ್ತು.

ಈಗಾಗಲೇ 50 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಅಪೂರ್ಣ ಕಾಮಗಾರಿ ಮಾಡಿ ಕೈ ಬಿಟ್ಟಿದ್ದಾರೆ. ಲಿಂಗಸುಗೂರು ತಾಲೂಕು ಕ್ರೀಡಾಂಗಣದಲ್ಲಿ ಪೆವಿಲಿಯನ್ ಹೊರತುಪಡಿಸಿ ಯಾವುದೇ ಕೆಲಸಗಳು ಆಗಿಲ್ಲ.

Athletes disappointed for Without suitable stadium in Lingsagaruru

ಟ್ರ್ಯಾಕ್, ವಾಲಿಬಾಲ್ ಕೋರ್ಟ್, ಲಾಂಗ್ ಜಂಪ್ ಪಿಟ್, ಬಾಸ್ಕೆಟ್ ಬಾಲ್ ಕೋರ್ಟ್ ಕೆಲಸಗಳು ನನೆಗುದಿಗೆ ಬಿದ್ದಿವೆ. ಎರಡು ಸರ್ಕಾರಗಳು ಹೋಗಿ ಮೂರನೇ ಸರ್ಕಾರ ಬಂದಿದೆ. ಈಗಲಾದರೂ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳ್ಳಲಿ. ಈ ಮೂಲಕ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬುದು ಕ್ರೀಡಾಪ್ರೇಮಿಗಳ ಆಶಯ.

English summary
Stadium work of Lingsagaruru Town was not completed even after nine years. athletes disappointed for Without suitable stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X