• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರಿನ ಅರಕೇರಾ ತಾಲ್ಲೂಕು ಕೇಂದ್ರವಾಗಿ ಘೋಷಣೆ

|

ರಾಯಚೂರು, ಸೆಪ್ಟೆಂಬರ್ 4: ರಾಯಚೂರು ಜಿಲ್ಲೆಯ ಅರಕೇರಾ ನೂತನ ತಾಲ್ಲೂಕು ಕೇಂದ್ರವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.

   BBMP Election ಮುಂದೂಡಲು ಪಾಲಿಕೆ ಪಾಲಿಟಿಕ್ಸ್!! | Oneindia Kannada

   ಸಚಿವ ಸಂಪುಟ ಸಭೆಯಲ್ಲಿ ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆಯಾಗಿದ್ದರಿಂದ ಅರಕೇರಾ ಗ್ರಾಮದಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರ ಸ್ವಗ್ರಾಮ ಅರಕೇರಾವನ್ನು ನೂತನ ತಾಲೂಕು ಮಾಡುವಂತೆ ಎರಡು ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು.

   ಅರಕೇರಾ ತಾಲ್ಲೂಕು ಘೋಷಣೆ ಮಾಡಿದ್ದರಿಂದ ಅರಕೇರಾ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ ಮನೆ ಎದುರು ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು.

   ಅರಕೇರಾ ಗ್ರಾಮ ಪಂಚಾಯತ್ 20 ಸದಸ್ಯರನ್ನು ಒಳಗೊಂಡಿದ್ದು, ಅರಕೇರಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಹೊಂದಿದೆ. ಅರಕೇರಾ ಹೋಬಳಿ ವ್ಯಾಪ್ತಿಗೆ 10 ಪಂಚಾಯತಿಗಳು ಬರುತ್ತವೆ. ಹಾಳ ಜಾಡಲದಿನ್ನಿ ಗ್ರಾಮ ಸೇರಿ 6 ವಾರ್ಡ್ ಗಳನ್ನು ಹೊಂದಿದೆ.

   ಅರಕೇರಾದಲ್ಲಿ ಅಗ್ನಿಶಾಮಕ ಠಾಣೆ, ನಾಡ ತಹಶೀಲ್ದಾರ್ ಕಾರ್ಯಾಲಯ, ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ದೇವದುರ್ಗ ತಾಲೂಕಿನಲ್ಲಿ ರಾಜಕೀಯ ಶಕ್ತಿ ಕೇಂದ್ರ ಎಂಬ ಹೆಸರು ಪಡೆದಿದೆ.

   English summary
   Arakera in Raichur district was approved in the Cabinet meeting on Thursday as the new Taluk Center.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X