ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು; ಮೂರು ರಾಜ್ಯಗಳ ಪೊಲೀಸರ ಮಹತ್ವದ ಸಭೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು ಮೇ 06: "ಗಡಿ ಭಾಗದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಮೂರು ರಾಜ್ಯ ಪೊಲೀಸರ ಮಧ್ಯೆ ನಿರಂತರ ಸಂಪರ್ಕ ಅಗತ್ಯತೆ ಕಾಪಾಡಿಕೊಳ್ಳಬೇಕು" ಎಂದು ರಾಯಚೂರು ಡಿವೈಎಸ್‌ಪಿ ವೆಂಕಟೇಶ ಊಗಿ ಬಂಡಿ ಹೇಳಿದರು.

ಶುಕ್ರವಾರ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿ ಜಿಲ್ಲೆಗಳ ಡಿವೈಎಸ್ಪಿಗಳ ಸಭೆ ಶಕ್ತಿನಗರದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಿಯಂತ್ರಣ ಮತ್ತು ಇಲ್ಲಿಯವರಿಗೆ ನಡೆದ ಪ್ರಕರಣಗಳ ತನಿಖೆ ಹಾಗೂ ಗಡಿ ಭದ್ರತೆಯ ಪ್ರಮುಖ ವಿಷಯಗಳ ಬಗ್ಗೆ ಪರಸ್ಪರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಮೂರು ರಾಜ್ಯಗಳ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಕಾಣೆಯಾದ ಅಪರಾಧಿಗಳು, ಪತ್ತೆಯಾಗದ ಶವಗಳು ಮತ್ತು ಗಡಿಭಾಗದಲ್ಲಿ ಇತರೆ ಭದ್ರತಾ ಅಂಶಗಳ ಮೇಲೆ ತನಿಖೆ, ಮಾನವ ಸಾಗಾಣಿಕೆ ಮತ್ತು ಕಳುವಿನ ಪ್ರಕರಣಗಳಲ್ಲಿ ಮೂರು ರಾಜ್ಯಗಳ ಗಡಿ ಭಾಗದ ಪೊಲೀಸರ ಮಧ್ಯತೆ ಪರಸ್ಪರ ಸಂಪರ್ಕ ಇರಲಿ ಎನ್ನವ ಕುರಿತು ಸಲಹೆಗಳ ಸಭೆಯಲ್ಲಿ ಕೇಳಿ ಬಂದವು.

Andhra Pradesh, Karnataka and Telangana Police Meeting In Raichur

ಅಪರಿಚಿತ ಶವಗಳ ಮಾಹಿತಿ ವಿನಿಮಯ: ನಾಪತ್ತೆ, ಡಕಾಯಿತಿ, ದರೋಡೆ, ಕಳ್ಳತನ, ಕೊಲೆ, ಡ್ರಗ್, ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಮೂರು ರಾಜ್ಯಗಳಲ್ಲಿ ಪತ್ತೆಯಾದ ಅಪರಿಚಿತ ಶವಗಳ ಸಾಕ್ಷಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

Andhra Pradesh, Karnataka and Telangana Police Meeting In Raichur

ಗಡಿ ಭಾಗದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಮೂರು ರಾಜ್ಯ ಪೊಲೀಸರ ಮಧ್ಯೆ ನಿರಂತರ ಸಂಪರ್ಕ ಅಗತ್ಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಯಾವುದೇ ರಾಜ್ಯದ ಗಡಿ ಜಿಲ್ಲೆಯಲ್ಲಿ ಅಪರಾಧ ಪ್ರಕಣಗಳಲ್ಲಿ ಭಾಗಿಯಾಗುವ ಅಪರಾಧಿಗಳು ನೆರೆ ಗಡಿ ಜಿಲ್ಲೆಗಳಲ್ಲಿ ತಲೆ ಮರಿಸಿಕೊಳ್ಳು ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಜಂಟಿ ಮಹತ್ವ ಪಡೆದುಕೊಂಡಿದೆ.

ಸಭೆಯಲ್ಲಿ ತೆಲಂಗಾಣದ ನಾರಾಯಣಪೇಟ ಡಿವೈಎಸ್‌ಪಿ ವೆಂಕಟೇಶ, ಆಂಧ್ರಪ್ರದೇಶ ಡಿವೈಎಸ್ಪಿ ವೆಂಕಟೇಶ್ವರ ರಾವ್ ಮತ್ತು ಕರ್ನಾಟಕ ರಾಜ್ಯದ ಅವರು ಸೇರಿ ಅನೇಕ ಪೊಲೀಸ್ ಅಧಿಕಾರಿಗಳು ಉಸ್ಥಿತರಿದ್ದರು.

English summary
Andhra Pradesh, Karnataka and Telangana police meeting in Raichur. In a meeting discus about interstate crimes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X