ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ನಾವು ಸೋಲುವುದಿಲ್ಲ : ಅಮಿತ್ ಶಾ

|
Google Oneindia Kannada News

ರಾಯಚೂರು, ಫೆಬ್ರವರಿ 14 : 'ಹಿಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಸೋತಿದ್ದರೂ ಈ ಚುನಾವಣೆಯಲ್ಲಿ ನಾವು ಸೋಲುವುದಿಲ್ಲ' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

ರಾಯಚೂರಿನಲ್ಲಿ ಬಳ್ಳಾರಿ ಶಕ್ತಿ ಕೇಂದ್ರದ ಸಮಾವೇಶ ಉದ್ದೇಶಿಸಿ ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡಿದರು. 'ರಾಯಚೂರಿಗೆ ಆಗಮಿಸುವುದು ತಡವಾಗಿದ್ದರೂ ಇಷ್ಟು ಜನ ಬಂದಿದ್ದೀರಿ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ' ಎಂದು ಭಾಷಣ ಆರಂಭಿಸಿದರು.

ಆಪರೇಷನ್ ಕಮಲ ನಿಲ್ಲಿಸಿ: ಬಿಜೆಪಿ ಹೈಕಮಾಂಡ್‌ನಿಂದ ಸೂಚನೆಆಪರೇಷನ್ ಕಮಲ ನಿಲ್ಲಿಸಿ: ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ

'ಬಿಜೆಪಿ ಬೇರೆ ಪಕ್ಷಕ್ಕಿಂತ ಭಿನ್ನವಾಗಿ ಕೆಲಸ ಮಾಡುತ್ತದೆ.ಬಿಜೆಪಿ ಗೆಲುವಿಗೆ ಬೂತ್ ಮಟ್ಟದ ಕಾರ್ಯಕರ್ತರು ಅವಶ್ಯಕ. ಕಾರ್ಯಕರ್ತರು ಕೆಲಸ ಮಾಡಿದರೆ ನಾವು ವಿಜಯ ಸಾಧಿಸುತ್ತೇವೆ' ಎಂದು ಅಮಿತ್ ಶಾ ಕಾರ್ಯಕರ್ತರನ್ನು ಹೊಗಳಿದರು.

ಚಿಕ್ಕಬಳ್ಳಾಪುರದಿಂದ ಅಮಿತ್ ಶಾರಿಂದ ಚುನಾವಣ ಪ್ರಚಾರ ಆರಂಭಚಿಕ್ಕಬಳ್ಳಾಪುರದಿಂದ ಅಮಿತ್ ಶಾರಿಂದ ಚುನಾವಣ ಪ್ರಚಾರ ಆರಂಭ

'ಹಿಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಸೋತಿದ್ದರೂ,ಈ ಚುನಾವಣೆಯಲ್ಲಿ ನಾವು ಸೋಲುವುದಿಲ್ಲ. ದೇಶದ ಜನರು ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುತ್ತಾರೆ ಎಂದು ಈಗಲೇ ಹೇಳುತ್ತಿದ್ದಾರೆ' ಎಂದರು....

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, 6 ದಿನಕ್ಕೆ 6ಜನ ಪಿಎಂ : ಅಮಿತ್ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, 6 ದಿನಕ್ಕೆ 6ಜನ ಪಿಎಂ : ಅಮಿತ್

ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು?

ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು?

'ಚುನಾವಣೆಗಾಗಿ ನೀವು ಮಹಾಘಟ್‌ ಬಂಧನ್ ಮಾಡಿಕೊಳ್ಳುತ್ತಿದ್ದೀರಿ. ಭಯ್ಯಾ ಘಟ್ ಬಂಧನ್ ಪ್ರಧಾನಮಂತ್ರಿ ಯಾರು? ಎಂದು ಪ್ರಶ್ನಿಸಿದರು.

ಸೋಮುವಾರ ಮಾಯಾವತಿ, ಮಂಗಳವಾರ ಮಮತಾ ದೀದಿ, ಬುಧವಾರ ದೇವೆಗೌಡ, ಗುರುವಾರ ಚಂದ್ರಬಾಬು ನಾಯ್ಡು ಪ್ರಧಾನಿಯಾಗಿರುತ್ತಾರೆ' ಎಂದು ಅಮಿತ್ ಶಾ ಲೇವಡಿ ಮಾಡಿದರು.

ಸೋನಿಯಾ ಕೃಪೆಯಿಂದ ಮುಖ್ಯಮಂತ್ರಿ

ಸೋನಿಯಾ ಕೃಪೆಯಿಂದ ಮುಖ್ಯಮಂತ್ರಿ

'ಕರ್ನಾಟಕದಲ್ಲಿ ಬಹುದೊಡ್ಡ ಪಕ್ಷ ವಿರೋಧ ಪಕ್ಷವಾಗಿದೆ.ಅಧಿಕಾರಿದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ ನಾನು ಸೋನಿಯಾ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು. ನಾನು ಜನರ ಪ್ರತಿನಿಧಿ ಅಲ್ಲ ಎಂದು ಹೇಳುವ ಮೂಲಕ ಅವರು ಜನರಿಗೆ ಅವಮಾನ ಮಾಡುತ್ತಿದ್ದಾರೆ' ಎಂದು ಅಮಿತ್ ಶಾ ಹೇಳಿದರು.

ಬಿಜೆಪಿ ಬಹುಮತದಿಂದ ಗೆಲ್ಲಲಿದೆ

ಬಿಜೆಪಿ ಬಹುಮತದಿಂದ ಗೆಲ್ಲಲಿದೆ

'ಚುನಾವಣೆಯಲ್ಲಿ ಮೋದಿ ಬಹುಮತದಿಂದ ಗೆಲ್ಲಲಿದ್ದಾರೆ. 50 ವರ್ಷದಲ್ಲಿ ಕಾಂಗ್ರೆಸ್ 12 ಅಡುಗೆ ಅನಿಲ ನೀಡುತ್ತಿದ್ದರು.ಆದರೆ, ಮೋದಿ ಬಡವರಿಗೆ ಸಿಲಿಂಡರ್ ನೀಡುತ್ತಿದ್ದಾರೆ. 8 ಕೋಟಿ ಬಡವರಿಗೆ ಶೌಚಾಲಯ ನಿರ್ಮಿಸಿ ಬಡವರಿಗೆ ಮುಜಗರವಾಗುವುದನ್ನು ತಪ್ಪಿಸಿದ್ದಾರೆ' ಎಂದು ಅಮಿತ್ ಶಾ ಹೇಳಿದರು.

ರಾಮಮಂದಿರ ನಿರ್ಮಿಸುತ್ತೇವೆ

ರಾಮಮಂದಿರ ನಿರ್ಮಿಸುತ್ತೇವೆ

'ನರೇಂದ್ರ ಮೋದಿ ಸರಕಾರದಿಂದಾಗಿ ದೇಶದ ವಿಕಾಸ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ದೇಶ ಸುರಕ್ಷಿತವಾಗಿದೆ. ರಾಮ ಮಂದಿರ ನಿರ್ಮಿಸುತ್ತೇವೆ, ಮಂದಿರ ನಿರ್ಮಾಣ ಮಾಡಲು
ಕಾಂಗ್ರೆಸ್ ವಿರೋಧಿಸುತ್ತಿದೆ' ಎಂದರು.

ಕುಮಾರಸ್ವಾಮಿ ಲೂಟಿ ಮಾಡುತ್ತಿದ್ದಾರೆ

ಕುಮಾರಸ್ವಾಮಿ ಲೂಟಿ ಮಾಡುತ್ತಿದ್ದಾರೆ

'ಕರ್ನಾಟಕದ ಮುಖ್ಯಮಂತ್ರಿಗಳು ನಾನು ಕಾಂಗ್ರೆಸ್‌ಗೆ ಉತ್ತರ ಹೇಳುತ್ತೀನಿ ಎನ್ನುತ್ತಾರೆ. ಬಿಜೆಪಿಯವರಾದ ನಾವು ಜನರಿಗೆ ಉತ್ತರ ಹೇಳುತ್ತೇವೆ. ಕುಮಾರಸ್ವಾಮಿ ಲೂಟಿ ಮಾಡುತ್ತಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನುಗಳಿಸಲು ಮತ ನೀಡಿ' ಎಂದು ಮನವಿ ಮಾಡಿದರು.

English summary
BJP president Amit Shah addressed party's campaign rally in Raichur Karnataka on February 14, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X