ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಸ್ಕಿಯಲ್ಲಿ ನಡೆಯದ ಜಾದೂ: ಮಂಕಾಗುವುದೇ ವಿಜಯೇಂದ್ರ ಭವಿಷ್ಯ?

|
Google Oneindia Kannada News

ಬಸವಕಲ್ಯಾಣದಲ್ಲಾದರೂ ಒಂದು ವೇಳೆ ಸೋಲಾಗಬಹುದು ಆದರೆ ಮಸ್ಕಿಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎನ್ನುವ ಮಾತಿತ್ತು. ಅದಕ್ಕೆ, ಒಂದು ಕಾರಣವೆಂದರೆ ಕ್ಷೇತ್ರದ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ವಹಿಸಿದ್ದು.

Recommended Video

BSY is not responding for maski results

ಈ ಹಿಂದಿನ ಉಪ ಚುನಾವಣೆಯಲ್ಲಿ ವಹಿಸಲಾಗಿದ್ದ ಎರಡೂ ಕ್ಷೇತ್ರದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ವಿಜಯೇಂದ್ರ, ಮಸ್ಕಿಯಲ್ಲೂ ಜಾದೂ ಮಾಡಬಹುದು ಎಂದೇ ವ್ಯಾಖ್ಯಾನಿಸಲಾಗಿತ್ತು.

ಮಸ್ಕಿಯಲ್ಲಿ ಬಿಜೆಪಿಗೆ ಸೋಲು: ಆದರೂ, ಸಿಎಂ ಬಿಎಸ್ವೈಗೆ ನಿರಾಳತೆ!ಮಸ್ಕಿಯಲ್ಲಿ ಬಿಜೆಪಿಗೆ ಸೋಲು: ಆದರೂ, ಸಿಎಂ ಬಿಎಸ್ವೈಗೆ ನಿರಾಳತೆ!

ಉಪ ಚುನಾವಣೆ ಸ್ಪೆಷಲಿಸ್ಟ್ ಎಂದೇ ಪಕ್ಷದಲ್ಲಿ ಹೆಸರು ಪಡೆದಿದ್ದ ವಿಜಯೇಂದ್ರ, ಹಳೆಯ ತಂತ್ರವನ್ನೇ ಮಸ್ಕಿಯಲ್ಲೂ ಪ್ರಯೋಗಿಸಿದ್ದರು. ಹಾಸನ ಶಾಸಕ ಪ್ರೀತಂ ಗೌಡ ಜೊತೆ ಒಂದು ತಂಡವಾಗಿ ಕೆಲಸ ಮಾಡಿದ್ದ ವಿಜಯೇಂದ್ರ, ಮಸ್ಕಿಯಲ್ಲಿ ಜಾದೂ ಮಾಡುವಲ್ಲಿ ವಿಫಲರಾಗಿದ್ದಾರೆ.

Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ

ಉಪ ಚುನಾವಣೆಯಲ್ಲಿನ ಈ ಸೋಲು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ವಿಜಯೇಂದ್ರ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿಲ್ಲ. ಅದಕ್ಕೆ ಕಾರಣಗಳೂ ಇವೆ:

ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಪ್ರತಾಪಗೌಡ ಪ್ರತಿಕ್ರಿಯೆ ಏನು? ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಪ್ರತಾಪಗೌಡ ಪ್ರತಿಕ್ರಿಯೆ ಏನು?

 ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಗೆ ಭಾರೀ ಅಂತರದಿಂದ ಸೋಲು

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಗೆ ಭಾರೀ ಅಂತರದಿಂದ ಸೋಲು

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸುಮಾರು 25ಸಾವಿರಕ್ಕೂ ಅಧಿಕ ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದಾರೆ. ಇಷ್ಟು ಮಟ್ಟಿನ ಅಂತರದಿಂದ ಪಕ್ಷದ ಅಭ್ಯರ್ಥಿಗೆ ಸೋಲಾಗುವುದರೊಂದಿಗೆ ವಿಜಯೇಂದ್ರ ಅವರ ತಂತ್ರಗಾರಿಕೆ ವರ್ಕೌಟ್ ಆಗಲಿಲ್ಲ. ಇದು, ಪಕ್ಷದಲ್ಲಿನ ಅವರ ವಿರೋಧಿಗಳಿಗೆ ಮುಂದಿನ ದಿನಗಳಲ್ಲಿ ಬಲವನ್ನು ನೀಡಬಹುದು.

 ಬಿಜೆಪಿ ವರಿಷ್ಠರು ವಿಜಯೇಂದ್ರ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ

ಬಿಜೆಪಿ ವರಿಷ್ಠರು ವಿಜಯೇಂದ್ರ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ

ವಿಜಯೇಂದ್ರ ಅವರು ಸರಕಾರದ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ಆರೋಪ ದೆಹಲಿಯ ವರಿಷ್ಠರ ಬಳಿಗೆ ಹೋಗಿದ್ದು ಗೊತ್ತಿರುವ ವಿಚಾರ. ಆದರೆ, ಬಿಜೆಪಿಗೆ ಬುನಾದಿಯೇ ಇಲ್ಲದ ಕೆ.ಆರ್.ಪೇಟೆ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ವಿಜಯೇಂದ್ರ ಗೆಲ್ಲಿಸಿಕೊಂಡು ಬರುವ ಮೂಲಕ, ವರಿಷ್ಠರು ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

 ಯಡಿಯೂರಪ್ಪ ಕೆಳಗೆ ಇಳಿಯಲಿದ್ದಾರೆ ಎಂದು ಹೇಳುತ್ತಲೇ ಬರುತ್ತಿರುವ ಯತ್ನಾಳ್

ಯಡಿಯೂರಪ್ಪ ಕೆಳಗೆ ಇಳಿಯಲಿದ್ದಾರೆ ಎಂದು ಹೇಳುತ್ತಲೇ ಬರುತ್ತಿರುವ ಯತ್ನಾಳ್

ಇದರ ಜೊತೆಗೆ, ಮುಖ್ಯಮಂತ್ರಿಗಳ ಅವರ ಕುಟುಂಬದ ಕಟ್ಟಾ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಎಂ ವಿರೋಧಿ ನಿಲುವು ಇನ್ನೂ ತೀವ್ರಗೊಳ್ಳುವ ಸಾಧ್ಯತೆಯಿದೆ. ಯಡಿಯೂರಪ್ಪ ಕೆಳಗೆ ಇಳಿಯಲಿದ್ದಾರೆ ಎಂದು ಹೇಳುತ್ತಲೇ ಬರುತ್ತಿರುವ ಯತ್ನಾಳ್ ಅವರ ಹೇಳಿಕೆಗೆ ಉಪ ಚುನಾವಣೆಯ ಫಲಿತಾಂಶದ ನಂತರ ಏನಾದರೂ ತಿರುವು ಸಿಗಲಿದೆಯೇ ಎನ್ನುವುದು ಗೊತ್ತಾಗಲಿದೆ.

ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ, ವಿಜಯೇಂದ್ರ ಟ್ವೀಟ್

"ಮಸ್ಕಿ ಕ್ಷೇತ್ರದ ಸಹೃದಯ ಕಾರ್ಯಕರ್ತ ಬಂಧುಗಳೇ, ಸೋಲು,ಗೆಲುವಿನ ಮೆಟ್ಟಿಲು. ಫಲಿತಾಂಶವನ್ನು ಸಕಾರಾತ್ಮಕವಾಗಿ ಸ್ವೀಕರಿಸೋಣ, ಪ್ರಚಾರದ ವೇಳೆ ನೀವು ತೋರಿದ ಪ್ರೀತಿ, ವಹಿಸಿದ ಪರಿಶ್ರಮ ನಾನೆಂದೂ ಮರೆಯಲಾಗದು. ಆತ್ಮವಿಶ್ವಾಸ ನಿಮ್ಮೊಂದಿರಲಿ, ನಿಮ್ಮೊಂದಿಗೆ ನಾನಿರುವೆ. ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ"ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಮಸ್ಕಿ ಸೋಲಿನ ನಂತರ ವಿಜಯೇಂದ್ರ ಭವಿಷ್ಯ ಏನಾಗಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

English summary
After Party Candidate Defeated In Maski, What Will Be The Fate Of B Y Vijayendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X