ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರಾಜ ಅರಸು ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿ: ಸಿದ್ದರಾಮಯ್ಯ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್ 15 : ದೇವರಾಜ ಅರಸರ ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಯಾಗಿದ್ದೇನೆ. ನನಗೆ ಅಡ್ಡಗಾಲು ಹಾಕಲು ಪ್ರತಿಪಕ್ಷಗಳು ಯತ್ನಿಸಿದ್ದವು ಅವರ ಆಟ ನಡೆಯಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳಾವುವು?ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳಾವುವು?

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ನಡೆಯುತ್ತಿರುವ ಕರ್ನಾಟಕ ನವ ನಿರ್ಮಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಣ್ಣ, ಕನಕದಾಸರಂತಹವರ ಆದರ್ಶಗಳನ್ನು ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿದ್ದೇನೆ. ನಮ್ಮ ಸರ್ಕಾರ ಈಗ ಅಧಿಕಾರಕ್ಕೆ ಬಂದು 4 ವರ್ಷ7 ತಿಂಗಳಾಯಿತು. ಅರಸು ನಂತರ ನಾನೊಬ್ಬನೇ ಐದು ವರ್ಷದ ಸಿಎಂ ಎಂದರು.

ಡಿ.ದೇವರಾಜ ಅರಸ್ ಅವರು ರಾಜ್ಯದ ಎಂಟನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು, ಅವರು 1972 ರಿಂದ 77 ಹಾಗೂ 1978 ರಿಂದ 1980 ರವರೆಗೆ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

After Devraj Urs I am completing five years tenure as CM: Siddaramaiah

ಯಡಿಯೂರಪ್ಪ ತಮಟೆ ಹೊಡೆಕೊಂಡು ಪರಿವರ್ತನಾ ಮೆರವಣಿಗೆ ಹೊರಟಿದ್ದಾರೆ. ಈ ಬಗ್ಗೆ ಚರ್ಚಿಸಲು ಒಂದೇ ವೇದಿಕೆಯಲ್ಲಿ ಬನ್ನಿ ಎಂದು ಸವಾಲು ಹಾಕಿದೆ ಆದರೆ ಅವರು ಬರಲಿಲ್ಲ ಎಂದರು.
ಎಲ್ಲಾ ಕಡೆ ಸಿಎಂ ಹಗರಣ ಒಂದೊಂದೆ ಬಿಚ್ಚಿಡುತ್ತೀನಿ ಎಂದವರು ಕೇವಲ ಪುಂಗಿ ಊದುತ್ತಿದ್ದಾರೆ ಇಲ್ಲಿವರೆಗೆ ಆಗಿರುವ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ಒಬ್ಬರು ಮಾತ್ರ ಜೈಲಿಗೆ ಹೋಗಿದ್ದವರು. ಜೈಲಿಗೆ ಹೋಗಿದ್ದವರು ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ.

ಅವರೊಂದಿಗೆ ಬಿಜೆಪಿ ಸಚಿವರು ಶಾಸಕರು ಜೈಲಿಗೆ ಹೋಗಿದ್ದರು. ಅವರು ಜೈಲಿಗೆ ಬೀಗತನ ಮಾಡಲು ಹೋಗಿದ್ದಾರೊ. ಇಂಥವರಿಗೆ ಮತ್ತೆ ಮತ ಹಾಕಬೇಕಾ? ಪರೋಕ್ಷವಾಗಿ ಸಿದ್ದರಾಮಯ್ಯ ಚುನಾವಣಾ ಭಾಷಣ ಮಾಡಿದರು.

ಬಸವಕಲ್ಯಾಣದಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಲೆಫ್ಟ್ ಅಂಡ್ ರೈಟ್ಬಸವಕಲ್ಯಾಣದಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಲೆಫ್ಟ್ ಅಂಡ್ ರೈಟ್

ಯಡಿಯೂರಪ್ಪ ಮಿಷನ್ 150 ಠುಸ್ ಆಗಿ ಅವರು 50 ಸ್ಥಾನ ಗೆಲ್ಲಲು ಆಗುವುದಿಲ್ಲ. ಯಡಿಯೂರಪ್ಪ ಈಗ ಹತಾಸೆಯಾಗಿದ್ದಾರೆ. ಅವರ ಅವಧಿಯಲ್ಲಿ ಹರಕಲು ಸೀರೆ, ಮುರುಕಲು ಸೈಕಲ್ ಮಾತ್ರ. ನಾನು ರಾಜ್ಯದಿಂದ ಸಹಕಾರ ಸಾಲ ಮನ್ನಾ ಮಾಡಿದೆ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲಮನ್ನಾ ಮಾಡಲು‌ ಪ್ರಧಾನಿ ಒಪ್ಪಲಿಲ್ಲ ಎಂದು ಹೇಳಿದರು.

After Devaraj Urs I am completing five years tenure as CM: Siddaramaiah

ಪ್ರಧಾನಿ ಬಳಿ ನಿಯೋಗದಲ್ಲಿ ಹೋದಾಗ ಪ್ರಧಾನಿ ಮುಂದೆ ತುಟಿಪಿಟಿಕ್ ಎನ್ನಲಿಲ್ಲ. ನಾನು ಮಾತಿನಂತೆ ನಡೆದುಕೊಂಡಿದ್ದೇನೆ. ಬಿಜೆಪಿಯವರಿಗೆ ನುಡಿದಂತೆ ನಡೆದಿಲ್ಲ ಇದರಿಂದ ಬಿಜೆಪಿಯವರು ರೈತ ವಿರೋಧಿಗಳು. ಮುಂದಿನ‌ ಚುನಾವಣೆಯಲ್ಲಿ ಬಿಜೆಪಿ ರೈತ ವಿರೋಧಿಗಳು ಎಂದು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಬೇಕು.

ಸಿದ್ದರಾಮಯ್ಯ ಮಾನ್ವಿ ತಾಲೂಕಿನ 341ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್, ಜಿಲ್ಲೆಯ ಶಾಸಕರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.

English summary
After Devaraj Urs I am completing five years tenure as CM, chief minister Siddaramaiah claimed that he is the only chief minister in office for the five years of tenure after Devaraj Urs in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X