ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ರುಪಾಯಿಗೆ ಒಂದು ಬುಟ್ಟಿ ಟೊಮೆಟೋ, ನೊಂದ ರೈತ ಮಾಡಿದ್ದೇನು?

|
Google Oneindia Kannada News

ರಾಯಚೂರು, ಜನವರಿ.24: ಈರುಳ್ಳಿ ಬೆಲೆ ಆಕಾಶಕ್ಕೆ ಏರಿದರೆ, ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದೆ. ತಿಂಗಳುಗಟ್ಟಲೆ ರೈತರು ಕಷ್ಟಪಟ್ಟು ಬೆಳೆದ ಟೊಮೆಟೋಗೆ ಕವಡೆ ಕಾಸಿನ ಬೆಲೆ ಇಲ್ಲದಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರಿನ ಮಾರುಕಟ್ಟೆಯಲ್ಲಿ ಒಂದು ಬುಟ್ಟಿ ಟೊಮೆಟೋಗೆ ಕೇವಲ 2 ರಿಂದ 3 ರುಪಾಯಿ ನಿಗದಿಗೊಳಿಸಲಾಗಿದೆ. ಇದರಿಂದ ನೊಂದ ರೈತ ತಾನು ಬೆಳೆದ ಟೊಮೆಟೋವನ್ನೆಲ್ಲ ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಕೂಲಿ ಕಾರ್ಮಿಕರಿಗೆ ಉಚಿತವಾಗಿ ನೀಡಿದ್ದಾನೆ. ಉಳಿದ ಟೊಮೆಟೋವನ್ನು ಬೀದಿ ಬದಿಯಲ್ಲೇ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ.

ಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿ

ಟೊಮೆಟೋ ಬೆಳೆ ಬೆಳೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಬೆಳೆಗೆ ಹಗಲಿರುಳು ನೀರು ಕಟ್ಟಬೇಕು. ಬೆಳೆಯು ಯಾವುದೇ ರೋಗಕ್ಕೆ ತುತ್ತಾಗದಂತೆ ಸಂರಕ್ಷಣೆ ಮಾಡಬೇಕು. ಕಾಲಕಾಲಕ್ಕೆ ಅದಕ್ಕಾಗಿ ರಾಸಾಯನಿಕ ಸಿಂಪಡಿಸಬೇಕಾಗುತ್ತದೆ.

A Farmer Threw Tomatoes On Street In Raichur

ಒಂದು ಎಕರೆಗೆ 30 - 40 ಸಾವಿರ ರುಪಾಯಿ:

ಒಂದು ಎಕರೆ ಟೊಮೆಟೋ ಬೆಳೆಯಲು ರೈತರಿಗೆ ಕನಿಷ್ಠ 30 ರಿಂದ 40 ಸಾವಿರ ರುಪಾಯಿ ಖರ್ಚಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೋ ಕೆಜಿಗೆ 8 ರಿಂದ 10 ರುಪಾಯಿ ಇದೆ. ಆದರೆ, ಟೊಮೆಟೋ ಬೆಳೆದ ರೈತರಿಗೆ ಮಾತ್ರ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಒಂದು ಬುಟ್ಟಿಗೆ 2 ರಿಂದ 3 ರುಪಾಯಿ ನೀಡಲಾಗುತ್ತಿದ್ದು, ಅನ್ನದಾತರ ಪರಿಶ್ರಮಕ್ಕೆ ಕಿಮ್ಮತ್ತೇ ಇಲ್ಲದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

English summary
Tomato Price Fall Down. A Farmer Threw Tomatoes On Street In Raichur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X