ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಬಂಧನ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆ. 19: ಬೆಂಗಳೂರಿನ ದೇವರ ಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಗಲಭೆಯಿಂದ ಸುಧಾರಿಸಿಕೊಳ್ಳುವಷ್ಟರಲ್ಲೇ ರಾಯಚೂರು ಜಿಲ್ಲೆಯಲ್ಲಿ ಇಂಥದ್ದೇ ಘಟನೆಯೊಂದು ನಡೆದಿದೆ. ಫೇಸ್ಬುಕ್ ಪೋಸ್ಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನೂರಾರು ಮಂದಿ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದಾರೆ. ದೇವದುರ್ಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

Recommended Video

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

ಇದೀಗ ಬಂದ ಅಪ್ಡೇಟ್(ಸಮಯ 11.10): ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಬಂಧನವಾಗಿದೆ. ದೇವದುರ್ಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಫೇಸ್ಬುಕ್ ಪೋಸ್ಟ್ ಹಾಕಿದ್ದ ಆರೋಪಿ ಜಹೀರ್ ಬಂಧಿಸಿರುವ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕುತ್ತಿದ್ದಾರೆ. ಎಫ್ಐಆರ್ ಪ್ರತಿ ನೋಡಿದ ಬಳಿಕ ಸ್ಥಳದಿಂದ ತೆರಳುವುದಾಗಿ ಠಾಣೆ ಮುಂದೆ ಜಮಾಯಿಸಿರುವ ಗುಂಪು ಹೇಳಿದೆ.

ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!

ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಅವರ ಸಂಬಂಧಿಕ ನವೀನ್ ಎಂಬಾತ ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಹಾಕಿದ್ದರಿಂದ ಆರಂಭವಾದ ಸಣ್ಣಕಿಡಿ ದೊಡ್ಡದಾಗಿ ಹೊತ್ತಿ ಉರಿದಿದ್ದನ್ನು ಮಾಧ್ಯಮಗಳಲ್ಲಿ ಇಡೀ ದೇಶವೇ ನೋಡಿದೆ. ಅನೇಕ ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಮೂವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಶಂಕಿತರನ್ನು ಬಂಧಿಸಲಾಗುತ್ತಿದೆ.

Raichur: A Facebook Post defaming Lord Sri Ram disturbs Devadurga town

ಅಯೋಧ್ಯೆಯ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಪೋಸ್ಟ್ ವೊಂದು ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ನಲ್ಲಿ ಕಾಣಿಸಿಕೊಂಡಿದೆ. ಇದರಿಂದ ದೇವದುರ್ಗ ಪಟ್ಟಣದಲ್ಲೂ ಹಿಂದು ಮುಸ್ಲಿಂ ಸೌಹಾರ್ದತೆ ಬೆಂಕಿ ಇಡುವಂಥ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದ್ದು ಫೇಸ್ಬುಕ್ ಪೋಸ್ಟ್. ದೇವದುರ್ಗದ ನಿವಾಸಿಯಾದ ಮುಸ್ಲಿಂ ಯುವಕನಿಂದ ಈ ರೀತಿ ಪ್ರಮಾದವಾಗಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ.

ದೇವದುರ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೋಲಿಸ್ ಠಾಣೆ ಮುಂದೆ ಜಮಾಯಿಸಿದ ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು, ಮುಸ್ಲಿಂ ಯುವಕನ ಬಂಧನಕ್ಕೆ ಅಗ್ರಹಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಶತಪ್ರಯತ್ನಪಡುತ್ತಿದ್ದಾರೆ.

English summary
Raichur: A Facebook Post allegedly posted by a non hindu youth defaming Lord Sri Ram disturbs Devadurga town. Police controlling the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X