ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಟಿಪಿಎಸ್‌ ವಿದ್ಯುತ್ ಘಟಕಗಳಿಂದ ಮೇ 5ರಂದು 32 ಸಾವಿರ ಮಿಲಿಯನ್ ಯೂನಿಟ್‌ ಉತ್ಪಾದನೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಮೇ 5: ಕಲ್ಲಿದ್ದಲ ಕೊರತೆಯಿಂದ ವಿದ್ಯುತ್ ಉತ್ಪಾದನೆಯ ಬಗ್ಗೆ ಆತಂಕ ಇರುವ ಮಧ್ಯೆಯೇ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಆರ್‌ಟಿಪಿಎಸ್‌ನ ಒಟ್ಟು ಎಂಟು ವಿದ್ಯುತ್ ಘಟಕಗಳಿಂದ ಗುರುವಾರ 32 ಸಾವಿರ ಮಿಲಿಯನ್ ಯೂನಿಟ್‌ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ರಾಯಚೂರು ಜಿಲ್ಲೆಯ ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ ಒಟ್ಟು ಎಂಟು ವಿದ್ಯುತ್ ಘಟಕಗಳಿಂದ ರಾಜ್ಯಕ್ಕೆ ಶೇಕಡಾ 40 ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ತಿಂಗಳಿಂದ ಕಲ್ಲಿದ್ದಲು ಸಮಸ್ಯೆಯಿಂದಾಗಿ ಆರ್‌ಟಿಪಿಎಸ್‌ ಎಂಟು ವಿದ್ಯುತ್ ಘಟಕಗಳನ್ನು ಸಂಪೂರ್ಣವಾಗಿ ಉತ್ಪಾದನೆ ಮಾಡಲು ಆಗಲಿಲ್ಲ. ಇಂತಹ ಒತ್ತಡದ ಮಧ್ಯೆಯೂ ಬೇಡಿಕೆಗೆ ಅನುಸಾರವಾಗಿ ಆರ್‌ಟಿಪಿಎಸ್‌ ಅಧಿಕಾರಿಗಳು ಮತ್ತು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು.

32 thousand million units of power generated by RTPS power plants on May 5

1.12 ಲಕ್ಷ ಮೆಟ್ರಿಕ್ ಟನ್‌ ಕಲ್ಲಿದ್ದಲು ಸಂಗ್ರಹ:

"ಕಲ್ಲಿದ್ದಲು ವಿಭಾಗದಲ್ಲಿ ಒಟ್ಟು 1 ಲಕ್ಷ 12 ಸಾವಿರ ಮೆಟ್ರಿಕ್ ಟನ್‌ ರಷ್ಟು ಕಲ್ಲಿದ್ದಲು ಸಂಗ್ರಹ ಇದೆ. ದಿನಕ್ಕೆ 1 ರಿಂದ 6 ಕಲ್ಲಿದ್ದಲು ರೇಕ್‌ಗಳು ಬರುತ್ತಿವೆ. ಸದ್ಯಕ್ಕೆ ಕಲ್ಲಿದ್ದಲು ಸಮಸ್ಯೆ ಇಲ್ಲ," ಎಂದು ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ ಅವರನ್ನು 'ಒನ್‌ಇಂಡಿಯಾ ಕನ್ನಡ' ಸಂಪರ್ಕಿಸಿದಾಗ ಮಾಹಿತಿ ನೀಡಿದರು.

ಆರ್‌ಟಿಪಿಎಸ್‌ ಎಂಟು ಘಟಕಗಳಿಂದ 1,720 ಸಾಮರ್ಥ್ಯದ ಉತ್ಪಾದನೆಯಲ್ಲಿ 210 ಮೆಗಾವಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕದಿಂದ 134 ಮೆಗಾವಾಟ್, 2ನೇ ಘಟಕದಿಂದ 132 ಮೆಗಾವಾಟ್, 3ನೇ ಘಟಕದಿಂದ 137 ಮೆಗಾವಾಟ್, 4ನೇ ಘಟಕದಿಂದ 140 ಮೆಗಾವಾಟ್, 5ನೇ ಘಟಕದಿಂದ 132, 6ನೇ ವಿದ್ಯುತ್ ಘಟಕದಿಂದ 129 , 7ನೇ ವಿದ್ಯುತ್ ಘಟಕದಿಂದ 191 ಮೆಗಾವಾಟ್ ಹಾಗೂ 250 ಮೆಗಾವಾಟ್ ಸಾಮರ್ಥ್ಯದ 8ನೇ ಘಟಕದಿಂದ 153 ಮೆಗಾವಾಟ್ ಸೇರಿ ಒಟ್ಟು 1,140 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್‌ ಉತ್ಪಾದನೆ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.

32 thousand million units of power generated by RTPS power plants on May 5

ಬೇಸಿಗೆಯಲ್ಲಿ ನಿಟ್ಟುಸಿರು:

ಬೇಸಿಗೆಯಲ್ಲಿ ಆರ್‌ಟಿಪಿಎಸ್‌ನ ವಿದ್ಯುತ್ ಘಟಕಗಳ ಉತ್ಪಾದನೆಗೆ ತಾಂತ್ರಿಕ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳಿಂದ , ಆರ್‌ಟಿಪಿಎಸ್ ಅಧಿಕಾರಿಗಳಿಗೆ ಒತ್ತಡ ಇರುತ್ತದೆ. ಈ ವಿದ್ಯುತ್ ಘಟಕಗಳಿಂದ , ವಿದ್ಯುತ್ ಉತ್ಪಾದನೆ ಪ್ರಮಾಣ ಕಡಿಮೆಯಾದರೂ ಸಾಕು, ರಾಜ್ಯ ಕಗ್ಗತ್ತಲಲು ಆವರಿಸುವ ಆತಂಕ ಎದುರಾಗುತ್ತದೆ. ಹೀಗಾಗಿ ಇಂತಹ ಒತ್ತಡಗಳ ಮಧ್ಯೆಯೂ , ಇವತ್ತು 32 ಸಾವಿರ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಆಗಿದೆ. ಇದರಿಂದಾಗಿ ಸ್ವಲ್ಪಮಟ್ಟಿಗೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಆತ್ಮವಿಶ್ವಾಸವು ಹೆಚ್ಚಿಸಿದೆ.

English summary
Raichur Thermal Power Station (RTPS) has increased power generation amid fears of coal shortages. 32,000 million units of power generated by RTPS power plants on May 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X