ಪುಣ್ಯಸ್ನಾನ ಮಾಡಲು ಹೋಗಿ ಕೃಷ್ಣಾ ನದಿ ಪಾಲಾದ ರಾಯಚೂರಿನ ಇಬ್ಬರು ಯುವಕರು
ರಾಯಚೂರು, ಜ.15: ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.
ಸಂಕ್ರಾಂತಿ ಪೀಡೆ ಕಳೆಯುವುದಕ್ಕಾಗಿ ನದಿಯಲ್ಲಿ ಸ್ನಾನ ಮಾಡಲು ಹೋಗುವುದು ವಾಡಿಕೆ. ಸ್ನಾನ ಮಾಡುವುದಕ್ಕಾಗಿ ರಾಯಚೂರಿನ ಆರೇಳು ಯುವಕರು ಕೃಷ್ಣಾ ನದಿಗೆ ತೆರಳಿದ್ದಾರೆ. ಇದರಲ್ಲಿ ಗಣೇಶ್ ಮತ್ತು ಉದಯ್‌ಕುಮಾರ್ ಎಂಬ ಯುವಕರು ಮೃತಪಟ್ಟಿದ್ದಾರೆ. ಗಣೇಶ್ ಮೃತದೇಹ ದೊರೆತಿದ್ದರೆ, ಉದಯ್‌ಕುಮಾರ್ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತದೆ.
ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ನಿವಾಸಿ ಆಗಿದ್ದಾರೆ. ಉದಯ್‌ಕುಮಾರ್ ಸಹ ರಾಯಚೂರಿನ ಕೆಇಬಿ ಕಾಲೋನಿಯ ನಿವಾಸಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
Rahane ಮತ್ತು Pujara ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫುಲ್ ಗರಂ ಆಗಿ Virat Kohli ಹೇಳಿದ್ದೇನು? |Oneindia Kannada
ನದಿಯಲ್ಲಿ ಸದ್ಯ ನೀರಿನ ರಭಸವೇನೂ ಇಲ್ಲ. ಜನರು ಸ್ನಾನ ಮಾಡಲು ನಿಗದಿಪಡಿಸಿದಂತಹ ಸ್ಥಳ ಬಿಟ್ಟು ಈ ಯುವಕರು ದೂರ ತೆರಳಿದ್ದಾರೆ. ಆಳವಾದ ಪ್ರದೇಶದಲ್ಲಿ ಈಜಾಡಲು ಹೋಗಿ ಮೃತಪಟ್ಟಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
Comments
English summary
2 Youths who went to take holy bath in krishna river Drowned In Raichur. Know more.