• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫುಡ್ ಡೆಲಿವರಿಗೆಂದು ಬಂದು ಮುದ್ದಿನ ನಾಯಿಯನ್ನೇ ಕದ್ದ ಜೊಮ್ಯಾಟೋ ಸಿಬ್ಬಂದಿ!

|

ಪುಣೆ, ಅಕ್ಟೋಬರ್ 09: ಜೊಮ್ಯಾಟೋ ಫುಡ್ ಡೆಲಿವರಿ ಕೆಲಸ ಮಾಡುತ್ತದ್ದ ವ್ಯಕ್ತಿಯೊಬ್ಬ ಮನೆಯೊಂದರಲ್ಲಿ ಆಹಾರ ಡೆಲಿವರಿ ಮಾಡಿ, ನಂತರ ಆ ಮನೆಯ ಮುದ್ದಿನ ನಾಯಿಯನ್ನೇ ಕದ್ದ ಘಟನೆ ಪುಣೆಯಲ್ಲಿ ನಡೆದಿದೆ.

ವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನ

ಈ ಕುರಿತು ನಾಯಿಯ ಮಾಲೀಕರಾದ ವಂದನಾ ಶಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಆರೋಪಿ ತುಷಾರ್ ಎಂಬುವವರ ಮೊಬೈಲ್ ನಂಬರ್ ಮತ್ತು ತಮ್ಮ ಮುದ್ದಿನ ನಾಯಿಮರಿಯ ಚಿತ್ರವನ್ನು ಹಾಕಿದ್ದಾರೆ. ಅಕ್ಟೊಬರ್ 7 ರಂದು ಘಟನೆ ನಡೆದಿದೆ ಎನ್ನಾಲಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾಂಪೌಂಡ್ ಒಳಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ ದೃಶ್ಯ

'ಡೊಟ್ಟು' ಹೆಸರಿನ ಈ ನಾಯಿ ಮನೆಯ ಕಾರಿಡಾರ್ ನಲ್ಲೇ ಆಟವಾಡುತ್ತಿದ್ದು. ಆದರೆ ಫುಡ್ ಡೆಲಿವರಿ ಬಾಯ್ ಬಮದು ಹೋದ ನಂತರ ಎಷ್ಟು ಗಂತೆಗಳ ಕಾಲ ಅದು ಕಾಣಿಸಿಕೊಳ್ಳದಿದ್ದರಿಂದ ಆತಂಕಗೊಂಡ ಮಾಲೀಕರು ನೆರೆ ಮನೆಗಳಲ್ಲೂ ಹುಡುಕಾಟ ನಡೆಸಿದ್ದರು. ನಂತರ ಮನೆ ಬಳಿಯೇ ಇದ್ದ ಜೊಮ್ಯಾಟೊ ಅಂಗಡಿಗೆ ತೆರಳಿ ತಮ್ಮ ನಾಯಿಯನ್ನೇನಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ತನ್ನ ಸಹೋದ್ಯೋಗಿಯೇ ನಿಮ್ಮ್ ನಾಯಿಯನ್ನು ಹಿಡಿದಿದ್ದಿದ್ದು ನೋಡಿದ್ದೇನೆ ಎಂದು ವ್ಯಕ್ತಿಯೊಬ್ಬರು ಉತ್ತರಿಸಿದ್ದಾರೆ.

Zomato Food Delivery Man Steals A Dog In Pune

ಕೂಡಲೆ ಆತನ ನಂಬರ್ ಗೆ ಮಾಲೀಕರು ಫೋನಾಯಿಸಿದರೆ, ತಾನು ನಾಯಿಯನ್ನು ಕದ್ದಿದ್ದನ್ನು ಆತ ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ. ವಾಪಸ್ ಕಳಿಸುವಂತೆ ಕೇಳಿದರೆ "ನಾನು ಅದನ್ನು ದೂರದ ನಮ್ಮೂರಿಗೆ ಕಳಿಸಿದ್ದೇನೆ, ಕ್ಷಮಿಸಿ" ಎಂದು ಉತ್ತರಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ

ಈ ಕುರಿತು ಮಾಲೀಕರು ಪೊಲೀಸರಿಗೂ ದೂರು ನೀದಿದ್ದು, ಜೊಮ್ಯಾಟೋ ಆಡಳಿತ ಮಂಡಳಿಯ ಗಮನವನ್ನೂ ಸೆಳೆದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zomato Food Delivery Man Steals A Dog In Pune
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more