ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಪು ಹತ್ಯೆ ಪಾಶ್ಚಿಮಾತ್ಯರ ಕೊಡುಗೆ: ಮೋಹನ್ ಭಾಗವತ್

|
Google Oneindia Kannada News

ನಾಗ್ಪುರ, ಅಕ್ಟೋಬರ್ 08: "ಗುಂಪು ಹತ್ಯೆ ಎಂಬುದು ಪಾಶ್ಚಿಮಾತ್ಯ ದೆಶಗಳಲ್ಲಿ ಛಾಲ್ತಿಯಲ್ಲಿದ್ದ ಪದ್ಧತಿ. ಈಗ ಭಾರತವನ್ನು ಹಳಿಯಲು ಅದ್ನು ಬಳಸಲಾಗುತ್ತಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು.

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಆರೆಸ್ಸೆಸ್ ಮುಖ್ಯಸ್ಥರ ಐತಿಹಾಸಿಕ ವಿಜಯ ದಶಮಿ ಭಾಷಣ ಮಾಡಿ, ಮಾತನಾಡಿದ ಭಾಗವತ್, "ಗುಂಪುಹತ್ಯೆ ಹುಟ್ಟಿಕೊಂಡಿದ್ದು ಭಾರತದಲ್ಲಲ್ಲ. ಅದಕ್ಕೆ ಮೂಲ ಭಾರತವಲ್ಲವೇ ಅಲ್ಲ. ಭಾರತದ ಪರಂಪರೆ ಮತ್ತು ಇತಿಹಾಸವನ್ನು ಘಾಸಿಗೊಳಿಸಲು ಪಾಶ್ಚಿಮಾತ್ಯ ದೇಶದ ಧಾರ್ಮಿಕ ಗ್ರಂಥಗಳಲ್ಲಿ ಕಂಡುಬಂದ ಈ ಪದ್ಧತಿಯನ್ನು ಪರಿಚಯಿಸಲಾಗುತ್ತಿದೆ" ಎಂದು ಮೋಹನ್ ಭಾಗವತ್ ಹೇಳಿದರು.

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ...ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ...

"ಕೆಲವರು ನಮ್ಮ ದೇಶದ ಘನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ವಿವಿಧತೆಯಲ್ಲಿ ಏಕತೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. 'ಗುಂಪು ಹತ್ಯೆ' ಎಂಬ ಪದವನ್ನು ಇತ್ತೀಚೆಗೆ ಉಪಯೋಗಿಸಲಾಗುತ್ತಿದೆ. ಆದರೆ ಅದು ಎಂದಿಗೂ ಭಾರತದಲ್ಲಿ ನಡೆದಿರಲಿಲ್ಲ" ಎಂದು ಅವರು ಹೇಳಿದರು.

ಗುಂಪು ಹತ್ಯೆ ಅಥವಾ ಲಿಂಚಿಂಗ್ ಎಂಬುದು ಪಾಶ್ಚಿಮಾತ್ಯರ ರಚನೆ. ಅದು ಭಾರತದ್ದಲ್ಲ. ಇದರ ಮೂಲ ಒಂದು ಧಾರ್ಮಿಕ ಗ್ರಂಥದಲ್ಲಿದೆ. ಆ ಪದವನ್ನು ಭಾರತದ ಮೇಲೆ ಹೇರಬೇಡಿ ಎಂದು ಭಾಗವತ್ ಹೇಳಿದರು.

ಮೋಹನ್ ಭಾಗವತ್ ಅವರ ವಿಜಯ ದಶಮಿ ಭಾಷಣದ ಮುಖ್ಯಾಂಶ ಇಲ್ಲಿದೆ.

370 ನೇ ವಿಧಿ

370 ನೇ ವಿಧಿ

ಕೇಂದ್ರದ ಎನ್ ಡಿಎ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದು, ಜನರು ತನ್ನ ಮೇಲೆ ನಂಬಿಕೆ ಇರಿಸಿಕೊಂದು ಎರಡನೇ ಬಾರಿ ಗೆಲ್ಲಿಸಿದ ಜನರ ನಿರೀಕ್ಷೆಯನ್ನು ಈಡೇರಿಸಿದೆ -ಮೋಹನ್ ಭಾಗವತ್

ಕೆಲವರಿಗೆ ಭಯ ಹುಟ್ಟಿದೆ

ಕೆಲವರಿಗೆ ಭಯ ಹುಟ್ಟಿದೆ

ಭಾರತ ಅಭಿವೃದ್ಧಿ ಹೊಂದುತ್ತಿರುವುದು ಕೆಲವರಲ್ಲಿ ಭಯ ಹುಟ್ಟಿಸಿದೆ. ಆದ್ದರಿಂದಲೇ ಸುಖಾಸುಮ್ಮನೆ ವಿವಾದ ಸೃಷ್ಟಿಸುವ ಕೆಲಸಗಳಾಗುತ್ತಿವೆ. ಗುಂಪು ಹತ್ಯೆಯ ಬಗ್ಗೆ ಸುದ್ದಿ ಎದ್ದಿರುವುದೂ ಅದೇ ಕಾರಣಕ್ಕೆ- ಮೋಹನ್ ಭಾಗವತ್

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

ಎಲ್ಲರ ಅಭಿಪ್ರಾಯಕ್ಕೂ ಬೆಲೆ

ಎಲ್ಲರ ಅಭಿಪ್ರಾಯಕ್ಕೂ ಬೆಲೆ

ಪ್ರಜಾಪ್ರಭುತ್ವದಲ್ಲಿ ಸಂಭವಿಸುವ ಎಲ್ಲಾ ಬದಲಾವಣೆಗಳನ್ನೂ ಒಪ್ಪಿಕೊಳ್ಳಲೇ ಬೇಕೆಂದಿಲ್ಲ. ಆದರೆ ನಮ್ಮ ಅಭಿಪ್ರಾಯಗಳು ಸ್ವಹಿತಾಸಕ್ತಿ ಪೂರಕವಾಗಿ, ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿ ಇರಕೂಡದು- ಮೋಹನ್ ಭಾಗವತ್

ಭಾರತ ಎಲ್ಲರಿಗೂ ಸೇರಿದ್ದು!

ಭಾರತ ಎಲ್ಲರಿಗೂ ಸೇರಿದ್ದು!

ಭಾರತ ಎಲ್ಲ ಧರ್ಮದ ಭಾರತೀಯರಿಗೂ ಸೇರಿದ್ದು. ಜಾತಿ ಅಥವಾ ಮತದ ಮೇಲೆ ಯಾವುದೇ ಭೇದಭಾವ ತೋರದಂತೆ ಆಡಳಿತ ನಡೆಸುವುದು ಒಬ್ಬ ಆಡಳಿತಗಾರನ ಕರ್ತವ್ಯ. ಒಬ್ಬ ಸ್ವಯಂಸೇವಕ ಅಧಿಕಾರದಲ್ಲಿದ್ದಾನೆ ಎಂದರೆ ಆತ ಅವನ್ನೆಲ್ಲ ಗಮನದಲ್ಲಿಟ್ಟುಕೊಳ್ತಾನೆ ಮತ್ತು ಅವ್ನು ಪಾಲಿಸುತ್ತಾನೆ ಎಂದರ್ಥ- ಮೋಹನ್ ಭಾಗವತ್

ಚಾಮುಂಡೇಶ್ವರಿ ಮೈಸೂರು ಒಡೆಯರ ಅಧಿದೇವತೆಯಾಗಿದ್ದು ಹೇಗೆ?ಚಾಮುಂಡೇಶ್ವರಿ ಮೈಸೂರು ಒಡೆಯರ ಅಧಿದೇವತೆಯಾಗಿದ್ದು ಹೇಗೆ?

English summary
Vijaya Dashami Speech by RSS chief Mohan Bhagwat, Rashtriya Swayamsevak Sangh chief Mohan Bhagwat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X