ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ ಗೋ ಕೊರೊನಾ ಗೋ, ಈಗ ನೋ ಕೊರೊನಾ, ನೋ ಕೊರೊನಾ: ಸಚಿವರ ಹೊಸ ವರಸೆ

|
Google Oneindia Kannada News

ಪುಣೆ, ಡಿಸೆಂಬರ್ 28: ದೇಶದಾದ್ಯಂತ ಕೊರೊನಾ ವೈರಸ್ ಹರಡಲು ಆರಂಭಿಸಿದ ಸಂದರ್ಭದಲ್ಲಿ 'ಗೋ ಕೊರೊನಾ ಗೋ' ಎಂಬ ಘೋಷಣೆ ಕೂಗಿ ನಗೆಪಾಟಲಿಗೀಡಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠವಳೆ ಮತ್ತೊಮ್ಮೆ ಹೊಸ ಘೋಷಣೆಯೊಂದಿಗೆ ಬಂದಿದ್ದಾರೆ. ಈ ಬಾರಿ 'ನೋ ಕೊರೊನಾ' ಎಂಬ ಘೋಷಣೆಯನ್ನು ಜನತೆಗೆ ನೀಡಿದ್ದಾರೆ. ಅಂದಹಾಗೆ ಈ ಘೋಷಣೆ ಕೊರೊನಾ ವೈರಸ್ಸಿನ ಹೊಸ ರೂಪಾಂತರಿ ತಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.

''ನಾನು 'ಗೋ ಕೊರೊನಾ ಗೋ' ಎಂಬ ಘೋಷಣೆ ನೀಡಿದ್ದೆ. ಹಾಗೆಯೇ ಈಗ ವೈರಸ್ ಹೋಗುತ್ತಿದೆ. ಆದರೆ ಅದು ನನ್ನ ಬಳಿಯೂ ಬಂದಿತ್ತು. ನಾನೂ ಆಸ್ಪತ್ರೆಗೆ ದಾಖಲಾಗಿದ್ದೆ. ಕೊರೊನಾ ವೈರಸ್‌ ನನ್ನ ಬಳಿ ಬರುವುದಿಲ್ಲ ಎಂದುಕೊಂಡಿದ್ದೆ. ಆದರೆ ಅದು ಎಲ್ಲಿ ಬೇಕಾದರೂ ತಲುಪಬಹುದು'' ಎಂದು ಅಠವಳೆ ಹೇಳಿಕೆ ನೀಡಿದ್ದಾರೆ.

ವಿಡಿಯೋ: ಗೋ ಕೊರೊನಾ.. ಗೋ ಕೊರೊನಾ ಹಾಡು ಹಾಡಿದ ಕೇಂದ್ರ ಸಚಿವ!ವಿಡಿಯೋ: ಗೋ ಕೊರೊನಾ.. ಗೋ ಕೊರೊನಾ ಹಾಡು ಹಾಡಿದ ಕೇಂದ್ರ ಸಚಿವ!

''ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿಗೆ ನಾನು 'ನೋ ಕೊರೊನಾ ನೋ ಕೊರೊನಾ' ಎಂದು ಹೇಳುತ್ತೇನೆ. ಏಕೆಂದರೆ ನಮಗೆ ಹಳೆಯ ಕೊರೊನಾ ವೈರಸ್ ಅಥವಾ ಹೊಸ ರೂಪಾಂತರವಾಗಲೀ ನಮಗೆ ತಗುಲುವುದನ್ನು ನಾವು ಬಯಸುತ್ತಿಲ್ಲ' ಎಂದು ಅವರು ಭಾನುವಾರ ಪುಣೆಯಲ್ಲಿ ಹೇಳಿದ್ದಾರೆ.

Union Minister Ramdas Athawale New Slogan No Corona No Corona For New Virus Strain

ಫೆಬ್ರವರಿಯಲ್ಲಿ ಚೀನಾದ ರಾಜತಾಂತ್ರಿಕ ಮತ್ತು ಕೆಲವು ಬೌದ್ಧ ಸನ್ಯಾಸಿಗಳ ಜತೆಗೆ ಅಠವಳೆ ಅವರು 'ಗೋ ಕೊರೊನಾ ಗೋ ಕೊರೊನಾ' ಎಂಬ ಪ್ರಾರ್ಥನೆ ಸಲ್ಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಆಗಿನ್ನೂ ಭಾರತದಲ್ಲಿ ಆರಂಭವಾಗುತ್ತಿದ್ದ ಕೊರೊನಾ ವೈರಸ್, ಬಳಿಕ ವ್ಯಾಪಕವಾಗಿ ಹರಡಿತ್ತು. ಅಠವಳೆ ಅವರ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು.

English summary
Union Minister Ramdas Athawale new slogan No Corona No Corona for new virus strain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X