ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಪುಣೆಯಲ್ಲಿ ಕನ್ನಡ ಕಂಪು ಹರಡಿಸುತ್ತಿರುವ ಶಾಲೆಗಳು

|
Google Oneindia Kannada News

ಪುಣೆ, ಜನವರಿ ೦2: ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ತೆರೆಮರೆಗೆ ಸರಿಯುತ್ತಿದೆ. ಸರ್ಕಾರವೇ ಪ್ರಾಥಮಿಕದಿಂದಲೇ ಇಂಗ್ಲೀಷ್ ಮಾಧ್ಯಮ ಕಲಿಸಲು ತುದಿಗಾಲ ಮೇಲೆ ನಿಂತಿದೆ. ಇಂತಹಾ ಸಮಯದಲ್ಲಿ ಹೊರ ರಾಜ್ಯದಲ್ಲಿನ ಕನ್ನಡ ಶಾಲೆಗಳು ಕನ್ನಡದ ಪರಿಸರಿಸುತ್ತಿರುವ ಅಪರೂಪದ ಸಂಗತಿಗಳು ಕನ್ನಡ ಸುಲಭವಾಗಿ ಅಳಿಯುವುದಲ್ಲ ಎಂಬ ಭರವಸೆ ನೀಡುತ್ತವೆ.

ಪಕ್ಕದ ಮಹಾರಾಷ್ಟ್ರದ ಪುಣೆಯಲ್ಲಿ ಕನ್ನಡ ಶಾಲೆಗಳು ಮರಾಠಿಯ ಇಕ್ಕಟ್ಟಿನ ನಡುವೆಯೂ ಅರಳಿ ಕಸ್ತೂರಿ ಪರಿಮಳಿಸುತ್ತಿವೆ. ಈ ಬಗ್ಗೆ ಕನ್ನಡದ ಶಿಕ್ಷಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Two Kannada schools working in Maharashtras Pune city

ಪುಣೆ ನಗರಪಾಲಿಕೆಯಲ್ಲಿ ಎರಡು ಕನ್ನಡ ಶಾಲೆಗಳು ಇವೆ. ಎರಡೂ ಸಹ ಪ್ರಾಥಮಿಕ ಶಾಲೆಗಳಾಗಿದ್ದು, ಎರಡರಲ್ಲೂ ಬಹುತೇಕ 150 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಶಾಲೆಗಳಲ್ಲಿ ಸಂಸ್ಕೃತ ಶ್ಲೋಕ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ? ಶಾಲೆಗಳಲ್ಲಿ ಸಂಸ್ಕೃತ ಶ್ಲೋಕ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ?

ಇತ್ತೀಚೆಗೆ ಪುಣೆಯಲ್ಲಿ ಶಿಕ್ಷಣ ಉತ್ಸವ ನಡೆದಾಗ ಪುಣೆ ನಗರಪಾಲಿಕೆಯ ಒಂದು ಕನ್ನಡ ಶಾಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಮಾಹಿತಿ ಅಂಗಡಿಯೊಂದನ್ನು ತೆರೆದು ಇಂಗ್ಲಿಷ್ ಭಾಷಾ ಜ್ಞಾನದ ಬಗ್ಗೆ ಮಾಹಿತಿ ನೀಡಿದರು. 'ಕನ್ನಡ ಆಕ್ಟಿವ್ ಟೀಚರ್' ಎಂಬ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಶಿಕ್ಷಕರೊಬ್ಬರು ಈ ಶಾಲೆಯ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಯರು, ಶಿಕ್ಷಕರನ್ನು ಸಂದರ್ಶನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಕನ್ನಡ ಶಾಲೆಯಲ್ಲಿ ತಮಿಳು ಬೋರ್ಡು: ಸರ್ಕಾರಕ್ಕೆ ಕಣ್ಣಿದ್ದೂ ಕುರುಡುಕನ್ನಡ ಶಾಲೆಯಲ್ಲಿ ತಮಿಳು ಬೋರ್ಡು: ಸರ್ಕಾರಕ್ಕೆ ಕಣ್ಣಿದ್ದೂ ಕುರುಡು

ಪುಣೆ ಕನ್ನಡ ಶಾಲೆಯ ಮುಖ್ಯಶಿಕ್ಷಕ ಗಣಪತಿ ಮೋರೆ ಹೇಳುವಂತೆ ಪುಣೆ ಮಹಾನಗರ ಪಾಲಿಕೆಯು ಮರಾಠಿ ಶಾಲೆ-ಕನ್ನಡ ಶಾಲೆ ಎಂಬ ಬೇಧ ಮಾಡದೆ ಎಲ್ಲ ಸಹಕಾರ, ಸೌಲಭ್ಯಗಳನ್ನು ನೀಡುತ್ತಿದೆಯಂತೆ. ಮಕ್ಕಳು ಸಹ ಉತ್ಸುಕರಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದಿದ್ದಾರೆ ಅವರು.

ಶಾಲಾ ಶುಲ್ಕ ಫಲಕ ಅಳವಡಿಕೆ ಸುತ್ತೋಲೆ ಜಾರಿಗೆ ಎರಡು ವಾರಗಳ ಗಡುವುಶಾಲಾ ಶುಲ್ಕ ಫಲಕ ಅಳವಡಿಕೆ ಸುತ್ತೋಲೆ ಜಾರಿಗೆ ಎರಡು ವಾರಗಳ ಗಡುವು

ಉತ್ಸವದಲ್ಲಿ ವಿದ್ಯಾರ್ಥಿಗಳು 'ಟೆನ್ಸ್‌ ವೀಲ್‌' (ಕಾಲದ ಮಾಹಿತಿ ನೀಡುವ ಚಕ್ರ) ವನ್ನು ಶಿಕ್ಷಕರ ಸಹಾಯದಿಂದ ತಯಾರಿಸಿದ್ದರು. ಅವರು ತಯಾರಿಸಿದ ಮಾದರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೃಜನಶೀಲತೆಗೆ ಸಾಕ್ಷಿ ಒದಗಿಸುತ್ತಿತ್ತು.

ಒಟ್ಟಿನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಕನ್ನಡ ಶಾಲೆ ಇರುವುದು ಮತ್ತು ಒಂದೊಂದು ಶಾಲೆಯಲ್ಲಿ 150 ಮಂದಿ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿರುವುದು ಕನ್ನಡ ಭಾಷೆ ಗಡಿಗಳನ್ನು ದಾಟಿ ಸಾಗುತ್ತಿದೆ ಎಂಬುದಕ್ಕೆ ಉದಾಹರಣೆಯಂತೆ ಇದೆ.

English summary
There are two Kannada schools in Maharashtra's Pune city. Both schools have more than 100 students who were learning subjects in Kannada medium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X