• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಶಾಸಕ ಭರತ್ ಭಾಲ್ಕೆ ಬಲಿ

|

ಪುಣೆ, ನವೆಂಬರ್ 28: ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಶಾಸಕರೊಬ್ಬರು ಬಲಿಯಾಗಿದ್ದಾರೆ.

ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶದ 10 ರಾಜ್ಯಗಳಲ್ಲಿ ಶೇ. 77ರಷ್ಟು ಕೋವಿಡ್-19 ಸಕ್ರಿಯ ಪ್ರಕರಣಗಳಿವೆ: ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ

ಕೊರೊನಾ ಸೊಂಕಿಗೆ ಒಳಗಾಗಿದ್ದ ಭಾಲ್ಕೆ ಅಕ್ಟೋಬರ್ 30 ರಂದು ಮನೆಗೆ ತೆರಳಿದ್ದರು ಎಂದು ಭಾಲ್ಕೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ.

ಭರತ್ ಭಾಲ್ಕೆ ಕಳೆದ ಚುನಾವಣೆಯಲ್ಲಿ ಎನ್ ಸಿಪಿಯಿಂದ ಆಯ್ಕೆಯಾಗಿದ್ದರು. ಹಲವು ದಿನಗಳಿಂದ ಕೊರೋನಾದಿಂದ ಬಳಲುತ್ತಿದ್ದ ಭಾಲ್ಕೆ ಪುಣೆ ಆಸ್ಪತ್ರೆಗೆ ನವೆಂಬರ್ 9 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ.

ಮತ್ತೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.

ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಕೋವಿಡ್‌-19 ಪ್ರಕರಣಗಳಲ್ಲಿ ಶೇಕಡಾ 77ರಷ್ಟು ಪ್ರಕರಣಗಳನ್ನು 10 ರಾಜ್ಯಗಳು ಹೊಂದಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಿಶ್ವದಾದ್ಯಂತ ಕೋವಿಡ್-19 ಎರಡನೇ ಅಲೆಯನ್ನು ಗಮಸಿದ್ದೇವೆ. ಆದರೆ ಭಾರತದ ಜನಸಂಖ್ಯೆಯ ಗಾತ್ರ ಮತ್ತು ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನಾವು ಸೋಂಕು ಹರಡುವುದನ್ನು ಗಮನಾರ್ಹವಾಗಿ ನಿರ್ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇಂದ್ರವು ತಿಳಿಸಿದೆ.

English summary
Three-time Nationalist Congress Party (NCP) legislator from Solapur district, Bharat Bhalke, died at a private city-based hospital on Saturday while undergoing treatment for post-COVID-19 complications, said medical authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X