ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿ! ವಿದ್ಯುತ್ ಬಳಸದೆ ಜೀವನ ಸಾಗಿಸುತ್ತಿರುವ ಡಾ. ಹೇಮಾ

|
Google Oneindia Kannada News

ಪುಣೆ, ಮೇ 08: ವಿದ್ಯುತ್ ಪೂರೈಕೆ ಇಲ್ಲದೆ ಒಂದು ದಿನ ಕೂಡಾ ಕಾಲದೂಡಲು ಸಾಧ್ಯವಿಲ್ಲದ ನಗರವಾಸಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಈಕೆ ಬಾಳುತ್ತಿದ್ದಾರೆ. ಇಲ್ಲಿನ ಬುಧ್ವಾರ್ ಪೇಟ್ ನಲ್ಲಿರುವ 79 ವರ್ಷ ವಯಸ್ಸಿನ ಡಾ. ಹೇಮಾ ಸಾನೆ ಅವರ ಮನೆಯಲ್ಲಿ ಎಲೆಕ್ಟ್ರಿಕ್ ಪವರ್ ಬಳಕೆ ಇಲ್ಲವೇ ಇಲ್ಲ.

ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವ ವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿರುವ ಡಾ. ಹೇಮಾ ಅವರು ತಮ್ಮ ಮನೆಯಲ್ಲಿ ನೈಸರ್ಗಿಕ ಗಾಳಿ, ಬೆಳಕಿಗೆ ಅವಕಾಶ ನೀಡಿದ್ದು, ವಿದ್ಯುಚ್ಛಕ್ತಿ ಬಳಸದಿರಲು ನಿರ್ಧರಿಸಿದರು.

ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ' ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ'

'ಆಹಾರ, ವಸತಿ, ಬಟ್ಟೆ ಮೂಲ ಅವಶ್ಯಗಳಾಗಿವೆ. ಒಂದಾನೊಂದು ಕಾಲದಲ್ಲಿ ಎಲೆಕ್ಟ್ರಿಸಿಟಿ ಎಂಬುದು ಇರಲೇ ಇಲ್ಲ, ನನಗೆ ಅದು ಮೂಲ ಅಗತ್ಯಗಳಲ್ಲಿ ಒಂದು ಎಂದೆನಿಸಲಿಲ್ಲ' ಎಂದು ಡಾ. ಹೇಮಾ ಹೇಳಿದ್ದಾರೆ.

This 79-year-old PhD holder woman lived her entire life without electricity

ಇದು ನನ್ನ ಮನೆಯಷ್ಟೇ ಅಲ್ಲ, ಇಲ್ಲಿ ನಾಯಿ, ಬೆಕ್ಕು, ಮಂಗೂಸ್, ಅನೇಕ ಹಕ್ಕಿಗಳು ತಮ್ಮ ನೆಲೆ ಕಂಡು ಕೊಂಡಿವೆ. ಅವುಗಳ ಜತೆ ನಾನು ವಾಸಿಸುತ್ತಿದ್ದೇನೆ ಎಂದಿದ್ದಾರೆ. ಪುಣೆಯ ಗಾರ್ವಾರೆ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದ ಹೇಮಾ ಅವರು ಸಸ್ಯಶಾಸ್ತ್ರ, ಪರಿಸರ ಕುರಿತಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿದ್ದ ಕೆಂಚಪ್ಪನ ರೋಚಕ ಕಥೆ! ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿದ್ದ ಕೆಂಚಪ್ಪನ ರೋಚಕ ಕಥೆ!

ಡಾ. ಹೇಮಾ ಅವರ ಜೀವನ ಶೈಲಿಯನ್ನು ಕಂಡು ಅನೇಕರು ಆಕೆಗೆ ಹುಚ್ಚು ಎಂದು ತಮಾಷೆ ಮಾಡಿದ್ದಿದೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಹೇಮಾ ಅವರು, ಜೀವನದಲ್ಲಿ ನಿಮ್ಮದೇ ಆದ ಸ್ವಂತ ಹಾದಿಯನ್ನು ಕಂಡುಕೊಳ್ಳಿ ಎಂಬ ಭಗವಾನ್ ಬುದ್ಧನ ಮಾತುಗಳನ್ನು ಪ್ರತ್ಯುತ್ತರವಾಗಿ ನೀಡುತ್ತಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾಡಿನಲ್ಲೇ 50 ವರ್ಷಗಳ ಕಾಲ ಒಬ್ಬಂಟಿ ಜೀವನ ನಡೆಸಿದ್ದ ಮರ್ಕಂಜದ ಬಾಳೆಡಿ ನಿವಾಸಿ ಕೆಂಚಪ್ಪ, ಕೆಮ್ರಾಜೆ ಗ್ರಾಮಕ್ಕೆ ಸೇರಿದ ಚಂದ್ರಶೇಖರ ಎಂಬುವರು ಕಾಡಿನಲ್ಲಿ ಲಟಾರಿ ಕಾರಿನಲ್ಲಿ ಬದುಕು ಸಾಗಿಸಿದ್ದು, ಇನ್ ಟು ದಿ ವೈಲ್ಡ್ ಸಿನಿಮಾದಲ್ಲಿ ನಾಯಕ ಎಲ್ಲಾ ತೊರೆದು ಅಲಾಸ್ಕಾದಲ್ಲಿ ಬಸ್ ನಲ್ಲಿ ನೆಲೆ ಕಂಡು ಕೊಂಡಿದ್ದು ಎಲ್ಲವೂ ಡಾ. ಹೇಮಾ ಅವರ ಬದುಕು ನೋಡಿದರೆ ನೆನಪಾಗುತ್ತದೆ.

English summary
Can you ever imagine living your life without electricity even for a single day? The answer will obviously be no. But this woman has been living in a house without electricity in Budhwar Peth, Pune all her life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X