ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯಲ್ಲಿ 270 ಬ್ಲ್ಯಾಕ್‌ ಫಂಗಸ್ ಪ್ರಕರಣ ಪತ್ತೆ, ಎಸ್‌ಒಪಿ ರಚನೆ

|
Google Oneindia Kannada News

ಪುಣೆ, ಮೇ 14: ಪುಣೆಯಲ್ಲಿ ಅಪರೂಪದ ಹಾಗೂ ಅಪಾಯಕಾರಿ ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ(ಎಸ್ಒಪಿ) ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕಿನ ಸುಮಾರು 270 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿವೆ,ಕಪ್ಪು ಶಿಲೀಂಧ್ರ ಎಂದೂ ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್‌ನ ಲಕ್ಷಣಗಳು ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗಿನ ಅಥವಾ ಸೈನಸ್ ದಟ್ಟಣೆ, ಭಾಗಶಃ ದೃಷ್ಠಿಹೀನತೆ.

ಮಹಾರಾಷ್ಟ್ರದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಇದುವರೆಗೆ 52 ಮಂದಿ ಬಲಿಮಹಾರಾಷ್ಟ್ರದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಇದುವರೆಗೆ 52 ಮಂದಿ ಬಲಿ

ಕಪ್ಪು ಶಿಲೀಂಧ್ರಿ ಸೈನಸ್‌ಗಳು, ಮೆದುಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾರಣಾಂತಿಕವಾಗಬಹುದು.

 Therapy SOPs Framed As Pune Reports 270 Black Fungus Cases

ಮ್ಯೂಕೋರ್ಮೈಕೋಸಿಸ್, ಅವರ ಚಿಕಿತ್ಸೆಗೆ ಬಹುಶಿಸ್ತೀಯ ವಿಧಾನದ ಅಗತ್ಯವಿರುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಇದು ಪತ್ತೆಯಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಈವರೆಗೆ ಸುಮಾರು 270 ಪ್ರಕರಣಗಳು ವರದಿಯಾಗಿವೆ ಎಂದು ಪುಣೆ ವಿಭಾಗದ ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ.
ಅಪರೂಪದ ಸೋಮಕಾಗಿದೆ, ಕೋವಿಡ್‌ಕ್ಕಿಂತತ ಮೊದಲು, ನಾವು ಅಂತಹ ಪ್ರಕರಣಗಳನ್ನು ನೋಡುತ್ತಿದ್ದೆವು, ಆದರೆ ಅವುಗಳ ಸಂಖ್ಯೆ ತುಂಬಾ ಕಡಿಮೆಯಾಗಿತ್ತು.

ಕೋವಿಡ್ ಮೊದಲ ಅಲೆಯಲ್ಲಿ ನಾವು ನಾಲ್ಕರಿಂದ ಐದು ಪ್ರಕರಣಗಳು ಪತ್ತೆಯಾಗುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ ಎಂದು ನೋಬಲ್ ಆಸ್ಪತ್ರೆಯ ಮೈಕ್ರೊವಾಸ್ಕುಲರ್ ಪುನರ್ನಿರ್ಮಾಣ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಘೋಷ್ ಹೇಳಿದ್ದಾರೆ. ಇನ್ನು ತಮ್ಮ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 40 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ ಎಂದರು.

ನಮ್ಮ ವಿಭಾಗೀಯ ಕಾರ್ಯಪಡೆಯ ಸದಸ್ಯ ಡಾ.ಭರತ್ ಪುರಂದರೆ ಅವರು ಮ್ಯೂಕಾರ್ಮೈಕೋಸಿಸ್ ನಿರ್ವಹಣೆಗೆ ವಿವರವಾದ ಎಸ್‌ಒಪಿಗಳನ್ನು ತಂದಿದ್ದಾರೆ. ಎಸ್‌ಒಪಿಗಳನ್ನು ಕಾರ್ಯಪಡೆಯಿಂದ ಪರಿಶೀಲಿಸಲಾಗಿದೆ.

ಇದನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ನೀಡಲಾಗಿದೆ. ಎಸ್‌ಒಪಿಗಳಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ. ಎಸ್‌ಒಪಿಗಳಲ್ಲಿ ಕ್ಲಿನಿಕಲ್ ಮ್ಯಾನೇಜ್‌ಮೆಂಟ್, ಚಿಕಿತ್ಸೆ ಮಾರ್ಗಸೂಚಿ, ರೋಗಿಗಳ ನಿರ್ವಹಣೆ, ಶಸ್ತ್ರಚಿಕಿತ್ಸಾ ಹಸ್ತಕ್ಷೇಪ ಮತ್ತು ಔಷಧಿಗಳ ಬಗ್ಗೆ ವಿವರಗಳಿವೆ ಎಂದು ರಾವ್ ಹೇಳಿದರು.

English summary
Around 270 cases of Mucormycosis, a rare but dangerous fungal infection, have been reported so far in Pune district, prompting a government task force to come up with a set of standard operating procedures (SOPs) for patient management in hospitals, officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X