ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ನಲ್ಲಿ ದುಬಾರಿ ಮದ್ಯ ಆರ್ಡರ್ ಮಾಡಿ ಮಹಿಳಾ ಟೆಕ್ಕಿ ಕಳೆದುಕೊಂಡಿದ್ದೆಷ್ಟು?

|
Google Oneindia Kannada News

ಪುಣೆ, ನವೆಂಬರ್ 11: ಆನ್‌ಲೈನ್‌ನಲ್ಲಿ ದುಬಾರಿ ಮದ್ಯ ಆರ್ಡರ್ ಮಾಡಿ ಮಹಿಳೆ ಟೆಕ್ಕಿಯೊಬ್ಬರು ಬರೋಬ್ಬರಿ 51 ಸಾವಿರ ರೂ ಕಳೆದುಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಅಯೋಧ್ಯೆ ತೀರ್ಪಿನಂದು ದೇಶಾದ್ಯಂತ ಮದ್ಯ ಮಾರಾಟ ನಿಷೇಧವಿತ್ತು. ಅಂದೇ ಟೆಕ್ಕಿ ಮನೆಗೆ ಸ್ನೇಹಿತರೆಲ್ಲಾ ಬಂದಿದ್ದ ಕಾರಣ ಮದ್ಯವನ್ನು ಆರ್ಡರ್ ಮಾಡಲೇಬೇಕಿತ್ತು. ಸುಮಾರು 4 ದಿನಗಳ ಹಿಂದೆ ಟೆಕ್ಕಿ ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದರು.

ಮದ್ಯಪ್ರಿಯರಿಗೆ ಸರ್ಕಾರದ ಗುಡ್‌ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯಮದ್ಯಪ್ರಿಯರಿಗೆ ಸರ್ಕಾರದ ಗುಡ್‌ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯ

ಗೆಳತಿಯರ ಜೊತೆ ಪಾರ್ಟಿ ಮಾಡಲು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪುಣೆಯ ಜಿಲ್ಲಾಧಿಕಾರಿ ಶನಿವಾರ ಹಾಗೂ ಭಾನುವಾರ ಮದ್ಯ ಮಾರಾಟ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು.

Techie Orders Alcohol And Loses 51 Thousand Rupees

ಕೋಲ್ಕತ್ತಾದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮಹಿಳೆ 50,778 ರೂ. ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದರು.ಆ ದಿನ ಮಾಮೂಲಿ ದಿನಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಇದ್ದರೂ ಮಹಿಳೆ ಆರ್ಡರ್ ಮಾಡಿಯೇ ಬಿಟ್ಟಿದ್ದಾರೆ.

ಅಂತೆಯೇ ವ್ಯಕ್ತಿಯು ಟೆಕ್ಕಿ ಬಳಿ ಓಟಿಪಿ ಕಳುಹಿಸುವಂತೆ ಹೇಳಿದ್ದಾನೆ. ಟೆಕ್ಕಿಯೂ ಆತನನ್ನು ನಂಬಿ ತನಗೆ ಬಂದ ಒಟಿಪಿ ನಂಬರ್ ಕಳುಹಿಸಿದ್ದಾರೆ. ಇದಾದ ಕೆಲಸ ನಿಮಿಷಗಳಲ್ಲಿ ಮಹಿಳೆಯ ಬ್ಯಾಂಕ್ ಅಕೌಂಟಿನಿಂದ 31,777 ರೂ. ವಿತ್‌ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಟೆಕ್ಕಿ, ಕೂಡಲೇ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆಗ ಆತ ಗಾಬರಿಯಾಗಬೇಡಿ ನಿಮ್ಮ ಹಣ ಮತ್ತೆ ನಿಮಗೆ ಕ್ರೆಡಿಟ್ ಆಗುತ್ತೆ. ಅದಕ್ಕಾಗಿ ನೀವು ಮತ್ತೊಮ್ಮೆ ಓಟಿಪಿ ನಂಬರ್ ಕಳುಹಿಸಿ ಎಂದಿದ್ದಾನೆ.

ಇದರಿಂದ ಏನು ಮಾಡುವುದೆಂದು ಯೋಚನೆ ಮಾಡಿದ ಟೆಕ್ಕಿಗೆ ಒಂದು ಉಪಾಯ ಹೊಳೆದಿದೆ. ಅದೇ ಆನ್ ಲೈನ್ ಆರ್ಡರ್. ಕೂಡಲೇ ಟಿಕ್ಕಿ, ಹಲವು ಮದ್ಯದಂಗಡಿಗಳಿಗೆ ಕರೆ ಮಾಡಿದ್ದಾರೆ. ಆದರೆ ಎಲ್ಲರೂ ಟೆಕ್ಕಿಗೆ ಮದ್ಯ ನೀಡಲು ನಿರಾಕರಿಸಿದರು. ಇದರಿಂದ ಟೆಕ್ಕಿ ಬೇಸರಗೊಂಡಿದ್ದರು.

ಇದೇ ವೇಳೆ ಶನಿವಾರ ಟೆಕ್ಕಿಗೆ ಇಂಟರ್ನೆಟ್ ನಲ್ಲಿ ಒಂದು ಫೋನ್ ನಂಬರ್ ಸಿಕ್ಕಿದೆ. ಕೂಡಲೇ ಆಕೆ ಆ ನಂಬರಿಗೆ ಕರೆ ಮಾಡಿದರು. ಆ ಕಡೆ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ, ಮನೆಗೆ ಮದ್ಯ ತಂದು ಕೊಡಲು ಒಪ್ಪಿಕೊಂಡಿದ್ದಾನೆ.

ಟೆಕ್ಕಿ ಮತ್ತೆ ಓಟಿಪಿ ನಂಬರ್ ಕಳುಹಿಸಿದ್ದಾರೆ. ಈ ವೇಳೆ ಟೆಕ್ಕಿ ಮತ್ತೆ ತನ್ನ ಅಕೌಂಟಿನಿಂದ 19,001 ರೂ. ಕಳೆದುಕೊಂಡರು. ಇದರಿಂದ ಮತ್ತೆ ಗಾಬರಿಗೊಂಡ ಟೆಕ್ಕಿ, ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಆತನನ್ನು ಸಂಪರ್ಕಿಸಲು ಟೆಕ್ಕಿಗೆ ಸಾಧ್ಯವಾಗಲಿಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

English summary
Woman Techie Ordered Alcohol and lost 50,778 Rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X