ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಬಂಧನದಲ್ಲಿದ್ದ ವಿಚಾರವಾದಿಗಳ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯ

By Manjunatha
|
Google Oneindia Kannada News

ಪುಣೆ, ಸೆಪ್ಟೆಂಬರ್ 06: ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪುಣೆ ಪೊಲೀಸರು ಬಂಧಿಸಿರುವ ಐವರು ವಿಚಾರವಾದಿಗಳ ಗೃಹ ಬಂಧನ ಅವಧಿಯನ್ನು ಸುಪ್ರೀಂಕೋರ್ಟ್‌ ಸೆಪ್ಟೆಂಬರ್ 12ರವರೆಗೆ ವಿಸ್ತರಿಸಿದೆ.

ವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರುವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರು

ಆಗಸ್ಟ್ 28 ರಂದು ಪುಣೆ ಪೊಲೀಸರು ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಬಂಧಿಸಿದ್ದರು.

ವಿಚಾರವಾದಿಗಳ ಬಂಧನ: ಸುದ್ದಿಗೋಷ್ಠಿ ನಡೆಸಿದ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿವಿಚಾರವಾದಿಗಳ ಬಂಧನ: ಸುದ್ದಿಗೋಷ್ಠಿ ನಡೆಸಿದ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿ

ಬಾಂಬೆ ಹೈಕೋರ್ಟ್‌ ಎಲ್ಲ ಆರೋಪಿಗಳಿಗೆ ಮೊದಲಿಗೆ ಸೆಪ್ಟೆಂಬರ್ 6ರವರೆಗೆ ಗೃಹ ಬಂಧನದಲ್ಲಿರಿಸಿ ಆದೇಶ ಹೊರಡಿಸಿತ್ತು. ಜೊತೆಗೆ ಅಂದೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ವಿಚಾರವಾದಿಗಳ ಗೃಹ ಬಂಧನವನ್ನು ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಿದೆ.

supreme court extended house arrest ideologist arrested by Pune Police

ವಿಚಾರವಾದಿಗಳ ಬಂಧನಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇವರೆಲ್ಲಾ ನಗರ ನಕ್ಸಲರು ಎಂದು ಕರೆಯಲಾಗಿತ್ತು. ಬಂಧಿತರಲ್ಲಿ ಕೆಲವರು ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಸಹ ಪೊಲೀಸರು ಆರೋಪಿಸಿದ್ದರು.

ವಿಚಾರವಾದಿಗಳ ಬಂಧನದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಪುಣೆ ಪೊಲೀಸರು ತಮ್ಮ ಬಳಿ ಮಹತ್ವದ ದಾಖಲೆಗಳಿರುವುದಾಗಿ ಹೇಳಿದ್ದರು. ಕೆಲವು ಮೋದಿ ಹತ್ಯೆಯ ಬಗ್ಗೆ ಉಲ್ಲೇಖವಿರುವ ಪತ್ರಗಳನ್ನು ಸಹ ಅಂದು ಪ್ರದರ್ಶಿಸಿದ್ದರು.

English summary
Supreme court extended house arrest for Five ideologists who were arrested by Pune police on August 28. Pune police alleged that they were support Koregaon violence and some of them involve in Modi assassin plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X