ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೆಂದರಲ್ಲಿ ಉಗುಳಿ ಪರವಾಗಿಲ್ಲ, ಆದರೆ ನೀವೇ ಕ್ಲೀನ್ ಮಾಡಬೇಕು!

|
Google Oneindia Kannada News

ಪುಣೆ, ನವೆಂಬರ್ 13: ಎಲ್ಲೆಂದರಲ್ಲಿ, ತಂಬಾಕು, ಎಲೆ ಅಡಿಕೆ, ಗುಟಕಾವನ್ನು ಬಾಯಲ್ಲಿ ಹಾಕಿಕೊಂಡು ಅಗೆದು ಉಗುಳುವ ಕೆಟ್ಟ ಚಾಳಿ ಇರುತ್ತದೆ.ಇದನ್ನು ಮಟ್ಟ ಹಾಕಲು ಪುಣೆ ಮಹಾನಗರ ಪಾಲಿಕೆ ಉಪಾಯವೊಂದನ್ನು ಮಾಡಿದೆ.

ಎಲ್ಲೆಂದರಲ್ಲಿ ತಂಬಾಕು, ಎಲೆ ಅಡಿಕೆ ಹಾಕಿ ಗಲೀಜು ಮಾಡುವವರು ಇನ್ನುಮುಂದೆ ಅದನ್ನು ಸ್ವಚ್ಛ ಮಾಡುವುದರ ಜತೆಗೆ ದಂಡವನ್ನೂ ಕಟ್ಟಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ. ಬೆಂಗಳೂರಲ್ಲಿ ಕೂಡ ಬಸ್‌ನಲ್ಲಿ ಕುಳಿತಾಗ ಉಗುಳುವುದು, ಬೈಕ್, ಕಾರಿನಲ್ಲಿ ಹೋಗುವಾಗ ಅಥವಾ ನಡೆದುಕೊಂಡು ಹೋಗುತ್ತಿರಬೇಕಾದರೂ ಉಗುಳಿ ಗಲೀಜು ಮಾಡುತ್ತಾರೆ. ಇಂತಹ ಕಾನೂನನ್ನು ಬೆಂಗಳೂರಲ್ಲಿ ಕೂಡ ಜಾರಿಗೆ ತರುವ ಅಗತ್ಯವಿದೆ.

ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ

ಈ ನಿಯಮ ಸದ್ಯಕ್ಕೆ ಐದು ವಾರ್ಡ್ ಗಳಲ್ಲಿ ಕಳೆದ ವಾರದಿಂದಲೇ ಜಾರಿಯಾಗಿದೆ. ಅದರಂತೆ ರಸ್ತೆಯಲ್ಲಿ ಉಗಿದ 156 ಮಂದಿಯನ್ನು ಹಿಡಿದು, ಅವರಿಂದಲೇ ಸ್ವಚ್ಛಗೊಳಿಸಲಾಗಿದೆ.ತಲಾ 150 ರೂ ದಂಡ ವಿಧಿಸಲಾಗಿದೆ.

ಉಗಿದು ಗಲೀಜು ಮಾಡುವವರಿಗೆ ಎಷ್ಟು ಸರಿ ದಂಡ ಹಾಕಿದರೂ ಕೆಟ್ಟ ಚಾಳಿ ಬಿಡುವುದಿಲ್ಲ, ಆದ್ದರಿಂದ ಉಗಿದ ಜಾಗವನ್ನು ಸ್ವಚ್ಛ ಮಾಡುವಂತೆ ಶಿಕ್ಷೆಯನ್ನೂ ವಿಧಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಮುಖ್ಯಸ್ಥ ಧ್ಯಾನೇಶ್ವರ್ ತಿಳಿಸಿದ್ದಾರೆ.ಹೀಗೆಯೇ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಇಂಥದ್ದೇ ಕ್ರಮ ಕೈಗೊಂಡು ಸ್ವಚ್ಛತೆ ಕಾಪಾಡುವಲ್ಲಿ ಯಶಸ್ವಿಯಾಗಲಿ.

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ದಂಡ

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ದಂಡ

ಕಣ್ಣಿಗೆ ಕಂಡ ಜಾಗದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ಕಡೆಗೆ ಕೆಂಗಣ್ಣು ಬೀರಿರುವ ಬಿಬಿಎಂಪಿ ಅಂಥವರ ಮೇಲೆ 500 ರೂ ಜತೆಗೆ ಕ್ರಿಮಿನಲ್ ಕೇಸು ದಾಖಲೆ ಮಾಡಲಾಗುತ್ತಿದೆ.

ಕಸ ತೆಗೆದ ಜಾಗದಲ್ಲಿ ರಂಗೋಲಿ

ಕಸ ತೆಗೆದ ಜಾಗದಲ್ಲಿ ರಂಗೋಲಿ

ಬಿಬಿಎಂಪಿ ಪೌರ ಕಾರ್ಮಿಕರು ತ್ಯಾಜ್ಯವನ್ನು ವಿಲೇವಾರಿ ಮಾಡಿ ಸುಸ್ತಾಗಿ ಇದೀಗ ತ್ಯಾಜ್ಯ ತೆಗೆದ ಜಾಗದಲ್ಲಿ ರಂಗೋಲಿಯನ್ನು ಹಾಕುವುದರ ಮೂಲಕ ಜಾಗೃತಿ ಮೂಡಿಸುತ್ತಿವೆ ಆದರೆ ಪೌರಕಾರ್ಮಿಕರು ನಿರ್ಗಮಿಸಿದ ಬಳಿಕ ಅಲ್ಲಿಯೇ ತ್ಯಾಜ್ಯವನ್ನು ಹಾಕುವ ಮೂಲಕ ಜನರು ತಮ್ಮ ದುಷ್ಟ ತನವನ್ನು ಪ್ರದರ್ಶಿಸುತ್ತಿದ್ದಾರೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಗ್ರಾಮ ಪಂಚಾಯ್ತಿಗಳಲ್ಲೂ ಶೀಘ್ರ ಘನತ್ಯಾಜ್ಯ ನಿರ್ವಹಣಾ ಘಟಕ

ಗ್ರಾಮ ಪಂಚಾಯ್ತಿಗಳಲ್ಲೂ ಶೀಘ್ರ ಘನತ್ಯಾಜ್ಯ ನಿರ್ವಹಣಾ ಘಟಕ

ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಯಲ್ಲಿ ಶೀಘ್ರ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲಾಗುತ್ತದೆ ಎಂದು ಸಚಿ ಕೃಷ್ಣ ಬೈರೇಗೌಡ ಹೇಳಿದ್ದಾರೆ.ರಾಜ್ಯದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಆಲೋಚಿಸಲಾಗಿದ್ದು, ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಪಕ್ಷ 5 ರಿಂದ 6 ಗ್ರಾಮ ಪಂಚಾಯತ್ ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಈ ಸಂಬಂಧ ಯೋಜನಾ ರೂಪುರೇಷೆಗಳನ್ನು ಸಿದ್ಧಪಡಿಸಿ ನವಂಬರ್ ಅಂತ್ಯದೊಳಗೆ ಸಲ್ಲಿಸಬೇಕು.

ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ

ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ನಿರ್ವಹಣೆಯನ್ನು ಜಂಟಿ ಆಯುಕ್ತರ ಹೆಗಲಿಗೇರಿಸಲು ಬಿಬಿಎಂಪಿ ನಿರ್ಧರಿಸಿದೆ. ಪಾಲಿಕೆಯ ತ್ಯಾಜ್ಯವನ್ನು ಆಯಾ ವಲಯಗಳ ಜಂಟಿ ಆಯುಕ್ತರೇ ನೋಡಿಕೊಳ್ಳಬೇಕು, ಅಸಮರ್ಪಕ ಕಸ ವಿಲೇವಾರಿಯಿಂದ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಅಸಂಬದ್ಧವಾಗಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಪಾಲಿಕೆ ಎಂಟು ವಲಯಗಳ ಜಂಟಿ ಆಯುಕ್ತರು ವಾರಕ್ಕೆರಡು ಬಾರಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

English summary
Spitting on the public places was caused punishable in many cities. But now, if spitting is essential for any body, they have accept self service in cleaning the same in Pune city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X