ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಮಗು ಪವಾಡಸದೃಶ ಪಾರು

|
Google Oneindia Kannada News

ಪುಣೆ, ಫೆಬ್ರವರಿ 21 : ಈ ಘಟನೆಯನ್ನು ಪವಾಡವೆಂದೇ ಕರೆಯಬಹುದು. ಏಕೆಂದರೆ, ಸತತ 16 ಗಂಟೆಗಳ ಪ್ರಯತ್ನದ ನಂತರ, ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ.

ಪುಣೆ ಜಿಲ್ಲೆಯ ತೋರಂಡಾಳೆ ಗ್ರಾಮದಲ್ಲಿ ರವಿ ಪಂಡಿತ್ ಭಿಲ್ ಎಂಬ ಬಾಲಕ 200 ಅಡಿ ಕೊರೆಯಲಾಗಿದ್ದ ಬೋರ್ವೆಲ್ ಗೆ ಬುಧವಾರ ಬಿದ್ದಿದ್ದ. ಆಟವಾಡಲು ಹೋಗಿದ್ದಾಗ ಬೋರ್ವೆಲ್ ನಲ್ಲಿ ಬಿದ್ದಿದ್ದ ಬಾಲಕ 10 ಅಡಿ ಆಳದಲ್ಲಿ ಸಿಲುಕಿದ್ದ.

ಝಂಜರವಾಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಕಣ್ಣು ತೆರೆಯಲಿಲ್ಲಝಂಜರವಾಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಕಣ್ಣು ತೆರೆಯಲಿಲ್ಲ

ಈ ಘಟನೆ ಬುಧವಾರ ಸಂಜೆ 4.30ರ ಸುಮಾರಿಗೆ ಘಟಿಸಿತ್ತು. ಕಾರ್ಮಿಕನಾಗಿರುವ ತಂದೆಯ ಬಳಿ ಆಟವಾಡುತ್ತಿದ್ದ ರವಿ ಇದ್ದಕ್ಕಿದ್ದಂತೆ ತೆರೆದ ಬೋರ್ವೆಲ್ ನಲ್ಲಿ ಬಿದ್ದಿದ್ದ. ಆ ಸಮಯದಲ್ಲಿ ಆತನ ತಂದೆ ರಸ್ತೆ ರಿಪೇರಿಯಲ್ಲಿ ತೊಡಗಿದ್ದರು.

Six year old boy fell in borewell rescued by 16 hours operation

ಮಗುವಿನ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಯ ಮೇಲೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್‌ಡಿಆರ್‌ಎಫ್) ಸಿಬ್ಬಂದಿಗಳು ಸತತ 16 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.

ನಾಮದೇವ್ ಜಾಧವ್ ಎಂಬುವವರಿಗೆ ಸೇರಿದ ಫಾರ್ಮ್ ನಲ್ಲಿ ರವಿ ಭಿಲ್ ಬಿದ್ದಿದ್ದ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಗುರುವಾರ ಬೆಳಿಗ್ಗೆ 9.30ರ ಸುಮಾರಿಗೆ ಮಗುವನ್ನು ಸುರಕ್ಷಿತವಾಗಿ ಆಚೆ ಕರೆದುಕೊಂಡು ಬಂದರು. ರವಿ ಜೀವಂತವಾಗಿದ್ದು ತಿಳಿಯುತ್ತಿದ್ದಂತೆ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸತತ 12 ಗಂಟೆ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆಸತತ 12 ಗಂಟೆ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

ಮಗುವಿಗೆ ಯಾವುದೇ ಗಾಯವಾಗದಂತೆ ಹೊರತೆಗೆಯುವುದು ಅತ್ಯಂತರ ಕ್ಲಿಷ್ಟಕರ ಕೆಲಸವಾಗಿತ್ತು ಎಂದು ಎನ್ಡಿಎಲ್ಎಫ್ ನ ಅಧಿಕಾರಿ ತಿಳಿಸಿದ್ದಾರೆ. ಬೋರ್ವೆಲ್ ಗೆ ಸಮಾನಾಂತರವಾಗಿ ನೆಲವನ್ನು ಅಗೆದು ಮಗುವನ್ನು ಹೊರತೆಗೆಯಲಾಯಿತು.

ಗುಟೂಂರಿನಲ್ಲೂ ಮಗುವಿನ ರಕ್ಷಣೆ : ಒಂದೂಮುಕ್ಕಾಲು ವರ್ಷಗಳ ಹಿಂದೆ ಗುಂಟೂರಿನಲ್ಲಿಯೂ ಎರಡು ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಲಾಗಿತ್ತು.

ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!

ಝಂಜರವಾಡದ ಘಟನೆ : ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಎಂಬ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ರಕ್ಷಣಾ ಸಿಬ್ಬಂದಿ ಸತತ 54 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದರೂ ಬದುಕುವ ಅದೃಷ್ಟ ಕಾವೇರಿಗೆ ಇರಲಿಲ್ಲ.

English summary
The six-year-old boy who fell into a borewell near Manchar tehsil in Pune on Wednesday has been safely rescued after about 16 hrs of rescue operation. The incident happened in Ambegaon in Pune district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X