ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಸ್ ವಾಲಾ ಹತ್ಯೆ: ಪುಣೆಯಲ್ಲಿ ಶೂಟರ್ ಸಹಾಯಕ ಸಂತೋಷ್ ಜಾಧವ್ ಅರೆಸ್ಟ್

|
Google Oneindia Kannada News

ಪುಣೆ, ಜೂನ್ 13: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಶೂಟರ್ ಸಹಾಯಕ ಸಂತೋಷ್ ಜಾಧವ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ಮೂಸೆ ವಾಲಾ ಕೊಲೆ ಪ್ರಕರಣದ ಶಂಕಿತ ಸಹಾಯಕ ಜಾಧವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆ ಜಿಲ್ಲೆಯ ಮಂಚಾರ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಅಂದರೆ 2021ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಜಾಧವ್‌ನನ್ನು ಬಂಧಿಸಲಾಗಿತ್ತು.

ಆದರೆ, ಬಂಧನದ ಬಳಿಕ ಆತ ಒಂದು ವರ್ಷ ಪರಾರಿಯಾಗಿದ್ದನು. ಮೂಸ್ ವಾಲಾ ಹತ್ಯೆ ತನಿಖೆಯಲ್ಲಿ ಜಾಧವ್ ಮತ್ತು ನಾಗನಾಥ್ ಸೂರ್ಯವಂಶಿಯ ಹೆಸರು ಕೇಳಿಬಂದಿತ್ತು. ಇದರಿಂದಾಗಿ ಪುಣೆ ಗ್ರಾಮಾಂತರ ಪೊಲೀಸರು ಆರೋಪಿಗಳ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಈ ವೇಳೆ 2021ರ ಕೊಲೆ ಪ್ರಕರಣದ ನಂತರ ಜಾಧವ್ ಅವರಿಗೆ ಆಶ್ರಯ ನೀಡಿದ ಆರೋಪಿ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ಅವರನ್ನು ಬಂಧಿಸಿದ್ದಾರೆ.

ಶೂಟರ್ ಸಹಾಯಕ ಬಂಧನ

ಶೂಟರ್ ಸಹಾಯಕ ಬಂಧನ

ಪುಣೆ ಗ್ರಾಮಾಂತರ ಪೊಲೀಸರು ಬಿಷ್ಣೋಯ್ ಗ್ಯಾಂಗ್ ಸದಸ್ಯ ಮಹಾಕಾಲ್‌ನನ್ನು ಕಳೆದ ವಾರ ಮಂಚಾರ್ ಪೊಲೀಸ್ ಠಾಣೆಯಲ್ಲಿ MCOCA ಪ್ರಕರಣದಲ್ಲಿ ಬಂಧಿಸಿದ್ದರು. ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಪಂಜಾಬ್ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಹಲವಾರು ವಿಚಾರಣೆಗಳು ಬಹಿರಂಗಗೊಂಡಿರುವುದು ಮೂಲಗಳಿಂದ ತಿಳಿದು ಬಂದಿದೆ.

ಮಹಾಕಾಲ್‌ ವಿಚಾರಣೆ

ಮಹಾಕಾಲ್‌ ವಿಚಾರಣೆ

ಮಾತ್ರವಲ್ಲದೆ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಅವರ ಮಗ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಹಾಕಾಲ್ ಅನ್ನು ವಿಚಾರಣೆ ಮಾಡಿದ್ದಾರೆ. ಜಾಧವ್ ಪತ್ತೆಗಾಗಿ ಕಳೆದ ವಾರ ಗುಜರಾತ್ ಪುಣೆ ಗ್ರಾಮಾಂತರ ಮತ್ತು ರಾಜಸ್ಥಾನಕ್ಕೆ ಹಲವು ತಂಡಗಳನ್ನು ಕಳುಹಿಸಲಾಗಿತ್ತು. ಮಹಾಕಾಲ್‌ಗೆ ಸಿಧು ಮೂಸೆವಾಲಾ ಕೊಲೆಯಾಗಲಿದೆ ಎಂದು ತಿಳಿದಿತ್ತು ಮತ್ತು ಹತ್ಯೆಯ ಒಂದು ವಾರದ ಮೊದಲು ದರೋಡೆಕೋರ ವಿಕ್ರಮ್ ಬ್ರಾರ್ ಜೊತೆ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮಹಾಕಾಲ್ ಶಂಕೆ

ಮಹಾಕಾಲ್ ಶಂಕೆ

"ಮಹಾಕಲ್ ಮೂಸೆವಾಲ ಮೇಲಿನ ದಾಳಿಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ನಮಗೆ ಬಂದಿರುವ ಮಾಹಿತಿಯ ಪ್ರಕಾರ, ವಿಕ್ರಮ್ ಬ್ರಾರ್ ಮಹಾಕಾಲ್ ಅವರೊಂದಿಗೆ ಚರ್ಚಿಸಿದ್ದರಿಂದ ಮೂಸೆವಾಲನನ್ನು ಕೊಲೆ ಮಾಡಲಾಗಿತ್ತು ಎಂದು ಅವರಿಗೆ ತಿಳಿದಿತ್ತು" ಎಂದು ಮಹಾರಾಷ್ಟ್ರ ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 29 ರಂದು ಮೂಸ್‌ ವಾಲಾ ಹತ್ಯೆಗೆ ಒಂದು ವಾರದ ಮೊದಲು ಮಹಾಕಾಲ್ ಬ್ರಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅವರು ಹೇಳಿದರು.

ಬಿಷ್ಣೋಯ್ ಅವರ ನಿಕಟ ಸಹಾಯಕ ಬ್ರಾರ್

ಬಿಷ್ಣೋಯ್ ಅವರ ನಿಕಟ ಸಹಾಯಕ ಬ್ರಾರ್


ಬ್ರಾರ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ನಿಕಟ ಸಹಾಯಕರಾಗಿದ್ದು, ಬಿಷ್ಣೋಯ್ ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿದ್ದಾರೆ. ತನಿಖಾ ಸಂಸ್ಥೆಗಳಿಂದ ಪತ್ತೆಹಚ್ಚುವುದನ್ನು ತಪ್ಪಿಸಲು, ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಪರಸ್ಪರ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು ಮತ್ತು ಕೋಡ್ ಪದಗಳನ್ನು ಸಹ ಬಳಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Recommended Video

ED ವಿಚಾರಣೆಗೆ ತೆರಳಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ | Oneindia Kannada

English summary
Santosh Jadhav, a shooter in the Punjabi Singer Sidhu Moose Wala murder case, has been arrested by the Pune police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X