• search
 • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ಕಾಲದ ಕುದುರೆ ಫಾರ್ಮ್‌, ಈಗ ವಿಶ್ವಕ್ಕೆ ಕೊರೊನಾ ಲಸಿಕೆ ಕೇಂದ್ರ: ರೇಸ್‌ನಲ್ಲಿ ಗೆಲ್ತಾರ ಪೂನವಾಲಾ

|

ಪುಣೆ, ಆಗಸ್ಟ್‌ 03: ಕೋವಿಡ್ 19 ರ ವಿರುದ್ಧ ಲಸಿಕೆಗಾಗಿ ಇಡೀ ಜಗತ್ತು ಕಾಯುತ್ತಿದೆ. ಈ ಸಾಂಕ್ರಾಮಿಕಕ್ಕೆ ಪರಿಹಾರವನ್ನು ಯಾರು ಲಸಿಕೆ ಕಂಡುಕೊಳ್ಳುತ್ತಾರೋ ಅವರು ವಿಶ್ವದ ಹೀರೋ ಆಗೋದ್ರಲ್ಲಿ ಅನುಮಾನವಿಲ್ಲ.

   SpaceX and NASA completes space mission successfully | Oneindia Kannada

   ಕೋವಿಡ್ ಲಸಿಕೆಯ ಬಗ್ಗೆ ಅತ್ಯಂತ ಭರವಸೆಯ ಸಂಶೋಧನೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಕೋವಿಶೀಲ್ಡ್' ಔಷಧಿಯನ್ನು ಭಾರತದ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇನಾದರೂ ಯಶಸ್ವಿಯಾದರೆ, ಈ ಲಸಿಕೆ ಹೊಸ ಇತಿಹಾಸವನ್ನು ಸೃಷ್ಟಿಸುತ್ತದೆ. ಕೋಟ್ಯಾಧಿಪತಿಯಾದ ಆದರ್ ಪೂನವಾಲಾ ಮೇಲೆ ವಿಶ್ವವೇ ಕಣ್ಣಿಟ್ಟಿದೆ.

   ಕೊರೊನಾ ಸೋಂಕಿಗೆ ವಿಶ್ವಾದ್ಯಂತ ನೂರಾರು ಲಸಿಕೆಗಳ ಸಂಶೋಧನೆ ಏಕೆ?

   ಹಾಗಿದ್ದರೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಎಲ್ಲಿದೆ? ಈ ಕಂಪನಿಯ ಮಾಲೀಕರು ಯಾರು? ಏತಕ್ಕಾಗಿ ಇದು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

   ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

   ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

   ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಇದನ್ನು ಮೊದಲು ಕುದುರೆ ಫಾರ್ಮ್ ಆಗಿ ಪ್ರಾರಂಭಿಸಲಾಯಿತು. ಆದರೆ ಈಗ ಕೊರೊನಾವೈರಸ್ ಲಸಿಕೆ ತಯಾರಿಕೆಯಲ್ಲಿ ವಿಶ್ವದ ಇತರ ಭಾಗಗಳೊಂದಿಗೆ ಸ್ಪರ್ಧಿಸುತ್ತಿದೆ. ಕಂಪನಿಯು ಕೆಲವು ಮಿಲಿಯನ್ ಡೋಸ್ ಲಸಿಕೆ ತಯಾರಿಕೆಯಲ್ಲಿ ತೊಡಗಿದೆ. ಪ್ರಯೋಗಗಳು ಇನ್ನೂ ಪ್ರಗತಿಯಲ್ಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಲೇಖನವು ಬಹಿರಂಗಪಡಿಸಿದೆ. ಎಲ್ಲವೂ ಯೋಜಿಸಿದಂತೆ ನಡೆದು ಲಸಿಕೆ ಹೊರಬಂದರೆ ಕಂಪನಿಯ ಮಾಲೀಕ 'ಆದರ್ ಪೂನವಾಲಾ' ಅವರ ಹೆಸರು ಪ್ರಪಂಚದಾದ್ಯಂತ ವೈರಲ್ ಆಗುತ್ತದೆ.

    ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ವಿಶ್ವದಲ್ಲೇ ದೊಡ್ಡ ಸ್ಥಾನ

   ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ವಿಶ್ವದಲ್ಲೇ ದೊಡ್ಡ ಸ್ಥಾನ

   ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಖಾಸಗಿ ವಲಯದ ಲಸಿಕೆ ತಯಾರಕ. ಇದನ್ನು ಉದ್ಯಮಿ ಸೈರಸ್ ಪೂನವಾಲಾ 1966 ರಲ್ಲಿ ಸ್ಥಾಪಿಸಿದರು. ಅದು ಪೂನವಾಲಾ ಹೂಡಿಕೆ ಮತ್ತು ಕೈಗಾರಿಕೆಗಳ ಅಡಿಯಲ್ಲಿತ್ತು. ಇಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರು ಯಾರು ಎಂಬ ಪ್ರಶ್ನೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಎಸ್ಐಐಐ ಉತ್ತರವಾಗಿದೆ! ಅವರು ಪ್ರತಿವರ್ಷ 1.3 ಬಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದಿಸುತ್ತಾರೆ.

   ಯಡಿಯೂರಪ್ಪರಿಗೆ ಕೊರೊನಾ: ಮೂಲ ಪತ್ತೆ ಹಚ್ಚಲು ಪರದಾಟ

    ಆದರ್ ಪೂನವಾಲಾ

   ಆದರ್ ಪೂನವಾಲಾ

   ಸೀರಮ್ ಸಂಸ್ಥೆಯ ಸಂಸ್ಥಾಪಕ ಸೈರಸ್ ಪೂನವಾಲಾ ಅವರ ಏಕೈಕ ಪುತ್ರ ಆದರ್ ಪೂನವಾಲಾ. ಪ್ರಸ್ತುತ ಅವರು ಸೀರಮ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಒಂದು ವೇಳೆ ಕೊರೊನಾ ಲಸಿಕೆ ಸಂಪೂರ್ಣ ಯಶಸ್ಸು ಕಂಡರೆ ಆದರ್ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದು ಖಚಿತ.

    ಕೋವಿಡ್ ಲಸಿಕೆಯ ಉತ್ಪಾದನೆ

   ಕೋವಿಡ್ ಲಸಿಕೆಯ ಉತ್ಪಾದನೆ

   ಆಕ್ಸ್‌ಫರ್ಡ್ ಲಸಿಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಔಷಧದ ಶತಕೋಟಿ ಪ್ರಮಾಣವನ್ನು ಈಗಾಗಲೇ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಲಾಗುತ್ತಿದೆ ಎಂಬ ಅಂಶವೇ ಆದರ್ ಪೂನವಾಲಾ ಈಗ ನ್ಯೂಯಾರ್ಕ್ ಟೈಮ್ಸ್‌ನಲ್ಲೂ ಹೆಗ್ಗುರುತಾಗಿ ಕಾಣಿಸಿಕೊಳ್ಳಲು ಕಾರಣವಾಗಿದೆ.

    ಲಸಿಕೆ ಯಶಸ್ವಿಯಾಗಲಿ ಎಂದು ಜಗತ್ತೇ ಕಾಯುತ್ತಿದೆ

   ಲಸಿಕೆ ಯಶಸ್ವಿಯಾಗಲಿ ಎಂದು ಜಗತ್ತೇ ಕಾಯುತ್ತಿದೆ

   ಇಡೀ ಜಗತ್ತು ಅಕ್ಷರಶಃ ಕೋವಿಡ್ ಲಸಿಕೆಗಾಗಿ ಕಣ್ಣು ಮಿಟುಕಿಸದೆ ಕಾಯುತ್ತಿದೆ. ಈ ಔಷಧಿ ಯಶಸ್ವಿಯಾದರೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಆದರ್ ಪೂನವಾಲಾ ವಿಶ್ವದ ಕಣ್ಣುಗಳಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಪ್ರಪಂಚದ ಎಲ್ಲಾ ಭಾಗಗಳು ಪ್ರತಿದಿನ ಕೊರೊನಾದಿಂದ ಕಂಗೆಟ್ಟು ಹೋಗಿವೆ.

    ಹಿಂದೆದೂ ಕಾಣದ ಬೇಡಿಕೆ ಬರಲಿದೆ

   ಹಿಂದೆದೂ ಕಾಣದ ಬೇಡಿಕೆ ಬರಲಿದೆ

   ಲಸಿಕೆ ಪರೀಕ್ಷಿಸದ ಕಾರಣ ಈ ಔಷಧಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಎರಡು ಮತ್ತು ಮೂರು ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಈ ಹಂತದಲ್ಲಿಯೂ ಸಹ, ಔಷಧವನ್ನು ಬಿಡುಗಡೆ ಮಾಡಿದರೆ, ಬಿಸಿ ಬಿಸಿ ದೋಸೆಗಳಂತೆ ಮಾರಾಟ ಮಾಡುವುದು ಖಚಿತ.

   ಅನೇಕ ದೇಶಗಳಿಂದ ಕರೆ

   ಅನೇಕ ದೇಶಗಳಿಂದ ಕರೆ

   ಅನೇಕ ದೇಶಗಳ ಪ್ರಧಾನ ಮಂತ್ರಿಗಳು ಮತ್ತು ಆರೋಗ್ಯ ಮಂತ್ರಿಗಳು ಸೇರಿದಂತೆ ಗಣ್ಯರು ಪ್ರತಿದಿನ ಅವರನ್ನು ಕರೆ ಮಾಡಿ ಮಾತನಾಡಿಸುತ್ತಿದ್ದಾರೆ ಎಂದು ಆದರ್ ಪೂನವಾಲಾ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದರು. ಪ್ರತಿಯೊಬ್ಬರೂ ಲಸಿಕೆ ಬಯಸುತ್ತಾರೆ ಎಂದು ಅವರು ಹೇಳಿದರು.

   English summary
   Serum Institute Of India, which has teamed up with the Oxford scientists developing the vaccine On race.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X