ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಾರಾ ಸಂಸ್ಥೆ ಟೌನ್ ಶಿಪ್ ಹರಾಜಿಗೆ, 37 ಸಾವಿರ ಕೋಟಿ ರು ನಿಗದಿ!

By Mahesh
|
Google Oneindia Kannada News

ಪುಣೆ, ಆಗಸ್ಟ್ 14: ಸುಮಾರು 24 ಸಾವಿರ ಕೋಟಿ ರು ಬಾಕಿ ಉಳಿಸಿಕೊಂಡಿರುವ ಸಹಾರಾ ಕಂಪನಿಗೆ ಸೇರಿದ ಆಂಬಿ ವ್ಯಾಲಿ ಟೌನ್ ಶಿಪ್ ಅನ್ನು ಸಾರ್ವಜನಿಕವಾಗಿ ಬಹಿರಂಗ ಹರಾಜು ಹಾಕಿ. ಮಾರಾಟ ಮಾಡುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.

ಪುಣೆಯಲ್ಲಿರುವ ಈ ಟೌನ್ ಶಿಪ್ ಗೆ 37,392 ಕೋಟಿ ರು ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಕಳೆದ ಏಪ್ರಿಲ್‌‌ ತಿಂಗಳಿನಲ್ಲಿ ಅಂಬಿ ವ್ಯಾಲಿ ಆಸ್ತಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಹರಾಜು ಪ್ರಕ್ರಿಯೆಗಾಗಿ ಬಾಂಬೆ ಹೈಕೋರ್ಟ್‌ನ ಅಧಿಕಾರಿಯೊಬ್ಬರನ್ನು ನೇಮಿಸಲಾಗಿತ್ತು.

Sahara's Aamby Valley up for auction: Reserve price at Rs 37,392 crore

ಇದಾದ ಬಳಿಕ ಹರಾಜು ಪ್ರಕ್ರಿಯೆಗೆ ತಡೆ ಹಿಡಿಯಬೇಕೆಂದು ಸುಪ್ರೀಂ ಕೋಟ್‌‌ಗೆ ಸಹಾರಾ ಸಮೂಹ ಸಂಸ್ಥೆ ಮರು ಮನವಿ ಮಾಡಿತ್ತು. ಆದರೆ, ಸಹಾರಾ ಗ್ರೂಪ್‌ನ ಮನವಿಯನ್ನು ಸುಪ್ರೀಂಕೋಟ್‌‌ ತಿರಸ್ಕರಿಸಿದೆ.

ಆಂಬಿ ವ್ಯಾಲಿ ಟೌನ್ ಶಿಪ್ ನ ಹರಾಜು ಮಾಡುವಂತೆ ಬಾಂಬೆ ಹೈಕೋರ್ಟ್ ನ ಅಧಿಕೃತ ಲಿಕ್ವಿಡೇಟರ್ ಗೆ ಜವಾಬ್ದಾರಿ ನೀಡಲಾಗಿತ್ತು. ಲಿಕ್ವಿಡೇಟರ್ ಅವರು ಈ ಹರಾಜು ಪ್ರಕ್ರಿಯೆ ನಡೆಸಿ ಅದರಲ್ಲಿ ಬಂದ ಹಣವನ್ನು ಸೆಬಿ (ಸೆಕ್ಯೂರಿಟಿ ಆ್ಯಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸಂಸ್ಥೆಯಲ್ಲಿರುವ ಸಹಾರಾ ಮರುಪಾವತಿ ಖಾತೆಗೆ ತುಂಬಬೇಕೆಂದು ನ್ಯಾಯಪೀಠ ಸೂಚಿಸಿತ್ತು.

English summary
The Aamby Valley city in Pune has been put up for public auction. The official liquidator has set the reserve price at Rs 37,392 crore. The decision came afterthe Supreme Court had last week refused to stay the auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X